ETV Bharat / bharat

ಈ ಮಹಿಳೆಯ ನಾಲಿಗೆ ಮೇಲೆ ಕೂದಲು ಬಂದಿವೆಯಂತೆ... ಕಾರಣ ಗೊತ್ತಾದ್ರೆ ಅಚ್ಚರಿಗೊಳಗಾಗ್ತೀರ! - ಕೊಲೆರಾಡೋದ ಮಹಿಳೆಯ ವಿಚಿತ್ರ ನಾಲಿಗೆ

ಕ್ಯಾನ್ಸರ್​ ಸೋಂಕು ವಿಪರೀತಗೊಂಡು ತಿನ್ನಲು, ಕುಡಿಯಲು ಸಾಧ್ಯವಾಗದೇ ಅವಳು 7 ಪೌಂಡ್​ ತೂಕ ಕಳೆದುಕೊಂಡಳಂತೆ. ಬಳಿಕ ಕಿಮೋಥೆರಪಿಗೆ ಒಳಗಾದ ಆಕೆ ನಾಲಿಗೆಯ ಮೇಲಿನ ಕ್ಯಾನ್ಸರ್​ ಗಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಈ ವೇಳೆ ಆಕೆ ಅರ್ಧ ನಾಲಿಗೆ ಕಳೆದುಕೊಳ್ಳಬೇಕಾಯಿತು. ಅಲ್ಲಿಂದ ಈಕೆಯ ನಾಲಿಗೆ ಮೇಲೆ ಕೂದಲು ಬೆಳೆಯುತ್ತಿವೆಯಂತೆ.

hair-growing
ನಾಲಿಗೆ ಮೇಲೆ ಕೂದಲು
author img

By

Published : Jan 22, 2022, 11:30 PM IST

ಕೊಲೆರಾಡೋ : ಮಹಿಳೆಯೊಬ್ಬಳು ನಾಲಿಗೆ ಕ್ಯಾನ್ಸರ್​ಗೆ ತುತ್ತಾಗಿ ಅರ್ಧ ನಾಲಿಗೆಯನ್ನೇ ಕಳೆದುಕೊಳ್ಳಬೇಕಾಯಿತು. ಬಳಿಕ ಆಕೆಯ ಅರ್ಧ ನಾಲಿಗೆಗೆ ಕಾಲಿನ ಚರ್ಮವನ್ನು ಕಸಿ ಮಾಡಲಾಯಿತು. ಬಳಿಕವಷ್ಟೇ ನೋಡಿ ಇನ್ನೊಂದು ಸಮಸ್ಯೆ ಶುರುವಾಗಿದ್ದು..!

ಕಾಲಿನ ಚರ್ಮವನ್ನು ಜೋಡಿಸಲಾಗಿದ್ದ ಅರ್ಧ ನಾಲಿಗೆಯ ಮೇಲೆ ಕಾಲಿನಲ್ಲಿ ಕೂದಲು ಬಂದಂತೆ ನಾಲಿಗೆಯಲ್ಲೂ ಕೂದಲು ಹುಟ್ಟಿಕೊಂಡಿವೆಯಂತೆ. ಇದು ಕ್ಯಾನ್ಸರ್​ನಿಂದ ಇನ್ನೇನು ಗುಣಮುಖವಾದ ಮಹಿಳೆಗೆ ಹೊಸದೊಂದು ಸಮಸ್ಯೆ ತಲೆ ಬಿಸಿ ಮಾಡಿದೆ.

ಈ ಮಹಿಳೆಯ ನಾಲಿಗೆ ಮೇಲೆ ಕೂದಲು ಬಂದಿವೆಯಂತೆ.
ಈ ಮಹಿಳೆಯ ನಾಲಿಗೆ ಮೇಲೆ ಕೂದಲು ಬಂದಿವೆಯಂತೆ.

ಆ ಮಹಿಳೆಯ ಹೆಸರು ಕ್ಯಾಮರೂನ್​ ನ್ಯೂಸಮ್​. ಕೊಲೆರಾಡೋ ದೇಶದ 42 ವರ್ಷದ ಜಿಮ್ನಾಸ್ಟಿಕ್​ ತರಬೇತುದಾರೆ. ಕ್ಯಾಮರೂನ್​ ನ್ಯೂಸಮ್​ಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ಆಹಾರ ರುಚಿಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡಳಂತೆ. ತಪಾಸಣೆಗೊಳಗಾದ ಆಕೆಯ ನಾಲಿಗೆಗೆ ಕ್ಯಾನ್ಸರ್​ ರೋಗ ಅಂಟಿಕೊಂಡಿದೆ ಎಂಬುದು ಗೊತ್ತಾಗಿದೆ.

ಕ್ಯಾನ್ಸರ್​ ಸೋಂಕು ವಿಪರೀತಗೊಂಡು ತಿನ್ನಲು, ಕುಡಿಯಲು ಸಾಧ್ಯವಾಗದೇ ಅವಳು 7 ಪೌಂಡ್​ ತೂಕ ಕಳೆದುಕೊಂಡಳಂತೆ. ಬಳಿಕ ಕಿಮೋಥೆರಪಿಗೆ ಒಳಗಾದ ಆಕೆ ನಾಲಿಗೆಯ ಮೇಲಿನ ಕ್ಯಾನ್ಸರ್​ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಈ ವೇಳೆ ಆಕೆ ಅರ್ಧ ನಾಲಿಗೆ ಕಳೆದುಕೊಳ್ಳಬೇಕಾಯಿತು.

ಇದರಿಂದ ಮುಂದೆ ಮಾತಾಡಲು, ತಿನ್ನಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ವೈದ್ಯರ ಸಲಹೆಯಂತೆ ಆಕೆ ಕತ್ತರಿಸಿದ ಆ ಅರ್ಧ ನಾಲಿಗೆಗೆ ತನ್ನ ಕಾಲಿನ ಚರ್ಮವನ್ನು ಕಸಿ ಮಾಡಿಸಿಕೊಂಡಿದ್ದಾಳೆ. ಇದಾದ 9 ತಿಂಗಳ ಬಳಿಕ ನಾಲಿಗೆಯ ಮೇಲೆ ಏನೋ ಒರಟಾದ ವಸ್ತು ತಾಕಿದಂತೆ ಅನುಭವವಾಗಿದೆ. ಕನ್ನಡಿಯಲ್ಲಿ ನೋಡಿಕೊಂಡಾಗದೇ ಕ್ಯಾಮರೂನ್​ ಬೆಚ್ಚಿ ಬಿದ್ದಿದ್ದು. ಕಾರಣ ಆಕೆಯ ನಾಲಿಗೆಯ ಮೇಲೆ ಕೂದಲು ಬೆಳೆದಿತ್ತಂತೆ.

ಕೊಲೆರಾಡೋದ ಕ್ಯಾಮರೂನ್​ ನ್ಯೂಸಮ್​
ಕೊಲೆರಾಡೋದ ಕ್ಯಾಮರೂನ್​ ನ್ಯೂಸಮ್​

ವೈದ್ಯರ ಬಳಿ ತಪಾಸಣೆ ನಡೆಸಿದಾಗ ನಾಲಿಗೆಗೆ ಕಾಲಿನ ಚರ್ಮ ಕಸಿ ಮಾಡಿದ್ದರಿಂದ ಕೂದಲು ನಾಲಿಗೆ ಮೇಲೆ ಬೆಳೆದಿವೆ ಎಂದು ಗೊತ್ತಾಗಿದೆ. ಇದರಿಂದ ಮಹಿಳೆಗೆ ಒಂದು ಸಮಸ್ಯೆಯಿಂದ ಪಾರಾದೆ ಎಂಬುಷ್ಟರಲ್ಲಿ ಇನ್ನೊಂದು ಸಮಸ್ಯೆ ತಲೆದೋರಿದೆ. ಈ ಸಮಸ್ಯೆಗೆ ಪರಿಹಾರ ಇಲ್ಲದ ಕಾರಣ ಆಕೆ ನಾಲಿಗೆ ಮೇಲೆ ಕೂದಲು ಬಂದರೂ ಏನೂ ಮಾಡಲಾಗದೇ ಅದಕ್ಕೆ ಹೊಂದಿಕೊಂಡಿದ್ದಾಳಂತೆ.

ಆದರೆ, ಆ ಮಹಿಳೆ ಊಟ ಮಾಡಿದಾಗ, ಮಾತನಾಡಿದಾಗ ಆ ಕೂದಲು ಕಿರಿಕಿರಿ ಉಂಟು ಮಾಡುತ್ತಂತೆ. ಅಲ್ಲದೇ ಮೊದಲಿನಂತೆ ನಾಲಿಗೆ ರುಚಿಯೂ ಕಾಣಿಸುತ್ತಿಲ್ಲವಂತೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆಯೂ ಕ್ಯಾಮರೂನ್​ ಮತ್ತೆ ತಮ್ಮ ಜಿಮ್ನಾಸ್ಟಿಕ್​ ವೃತ್ತಿಗೆ ಮರಳಿದ್ದಾರೆ ಎಂಬುದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.