ETV Bharat / bharat

ತೆಲಂಗಾಣ: ವಸತಿ ಶಾಲೆಯ 42 ವಿದ್ಯಾರ್ಥಿನಿಯರು, ಓರ್ವ ಶಿಕ್ಷಕನಿಗೆ ಕೋವಿಡ್ ಸೋಂಕು​ - ಮುತ್ತಂಗಿ ಗುರುಕುಲದ ವಿದ್ಯಾರ್ಥಿನಿಯರು ಕೋವಿಡ್​

ಕೋವಿಡ್ 2ನೇ ಅಲೆಯಿಂದ ಹೊರಬಂದಿರುವ ಜನರಿಗೆ ಇದೀಗ ಒಮಿಕ್ರೋನ್ ರೂಪಾಂತರಿ ತಳಿ​ಯ ಜೊತೆಗೆ ಮೂರನೇ ಕೋವಿಡ್ ಅಲೆ ಭೀತಿ ಶುರುವಾಗಿದೆ. ತೆಲಂಗಾಣದ ವಸತಿ ಶಾಲೆಯೊಂದರ ಹಲವು ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನಿಗೆ ಸೋಂಕು ದೃಢಪಟ್ಟಿದೆ.

gurukul school of sangareddy
gurukul school of sangareddy
author img

By

Published : Nov 29, 2021, 3:02 PM IST

Updated : Nov 29, 2021, 3:40 PM IST

ಸಂಗಾರೆಡ್ಡಿ(ತೆಲಂಗಾಣ): ದೇಶದ ಕೆಲವು ನಗರಗಳಲ್ಲಿ ಮಹಾಮಾರಿ ಕೋವಿಡ್ ಹಾವಳಿ ಕೆಲವು ದಿನಗಳಿಂದ ಮತ್ತೆ ಉಲ್ಬಣಗೊಳ್ಳುತ್ತಿದೆ. ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೂರು ದಿನಗಳ ಹಿಂದೆ ಒಡಿಶಾ ಹಾಗು ಕರ್ನಾಟಕದ ಧಾರವಾಡದ ಕಾಲೇಜಿನಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲೂ ವೈರಸ್​ ಕಾಣಿಸಿಕೊಂಡಿದೆ.

ತೆಲಂಗಾಣದ ಸಂಗಾರೆಡ್ಡಿಯ ಮುತ್ತಂಗಿ ಗುರುಕುಲದ 42 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನಲ್ಲಿ ಸೋಂಕು ದೃಢಪಟ್ಟಿದೆ. ಈ ಶಾಲೆಯಲ್ಲಿ ಒಟ್ಟು 491 ವಿದ್ಯಾರ್ಥಿನಿಯರು ಹಾಗೂ 27 ಶಿಕ್ಷಕ ಸಿಬ್ಬಂದಿ ಇದ್ದಾರೆ.

ವಸತಿ ಶಾಲೆಯ 42 ವಿದ್ಯಾರ್ಥಿನಿಯರು, ಓರ್ವ ಶಿಕ್ಷಕನಿಗೆ ಕೋವಿಡ್ ಸೋಂಕು​

ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು, ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಗೊಂಡಿದೆ. ಈ ಬೆನ್ನಲ್ಲೇ ಶಾಲೆಯ 261 ವಿದ್ಯಾರ್ಥಿನಿಯರು ಹಾಗೂ 27 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 42 ಬಾಲಕಿಯರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ. ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರನ್ನೆಲ್ಲಾ ಪ್ರತ್ಯೇಕವಾಗಿ ಇರಿಸಲಾಗಿದ್ದು, ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಗಾಯತ್ರಿ ದೇವಿ ತಿಳಿಸಿದರು.

ಇದನ್ನೂ ಓದಿ: ಆಸ್ಕರ್​​​ ಸೇರಿ ಮಡಿದ ನಾಯಕರಿಗೆ ರಾಜ್ಯಸಭೆಯಲ್ಲಿ ಸಂತಾಪ: ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ

ತೆಲಂಗಾಣದಲ್ಲಿ ಸೆಪ್ಟೆಂಬರ್​​ 1ರಿಂದ ಶಾಲಾ-ಕಾಲೇಜು​ ಪುನಾರಂಭವಾಗಿದೆ. ಇದೀಗ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ಒಡಿಶಾದ ಮಯೂರ್ಭಂಜ್​​ನ ವಸತಿ ಶಾಲೆಯೊಂದರಲ್ಲಿ ಕೆಲವು ದಿನಗಳ ಹಿಂದಷ್ಟೇ 26 ವಿದ್ಯಾರ್ಥಿನಿಯರಲ್ಲಿ ಹಾಗೂ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 281 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿತ್ತು.

Last Updated : Nov 29, 2021, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.