ETV Bharat / bharat

ನಾಯಿ ದಾಳಿಗೆ ಒಳಗಾಗಿದ್ದ ಮಹಿಳೆಗೆ 2 ಲಕ್ಷ ರೂಪಾಯಿ ಪರಿಹಾರ - ಮುನ್ನಿ ಎಂಬ ಮಹಿಳೆ ಮೇಲೆ ನಾಯಿ ದಾಳಿ

ಕಳೆದ ಆಗಸ್ಟ್​​ 11ರಂದು ಮುನ್ನಿ ಎಂಬ ಮಹಿಳೆಯ ಮೇಲೆ ವಿನಿತ್​ ಚಿಕರ ಎಂಬುವವರ ನಾಯಿ ದಾಳಿ ಮಾಡಿತ್ತು. ಈ ದಾಳಿಯಿಂದಾಗಿ ಮುನ್ನಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಿಸಲಾಗಿತ್ತು.

ಗುರುಗ್ರಾಮದಲ್ಲಿ ನಾಯಿ ದಾಳಿಗೆ ಒಳಗಾಗಿದ್ದ ಮಹಿಳೆಗೆ 2 ಲಕ್ಷ ಪರಿಹಾರ ನೀಡುವಂತೆ ಆದೇಶ
Ordered to pay 2 lakh compensation to the woman who was attacked by a dog in Gurugram
author img

By

Published : Nov 16, 2022, 12:05 PM IST

Updated : Nov 16, 2022, 12:17 PM IST

ಗುರುಗ್ರಾಮ್​​: ಸಾಕು ನಾಯಿ ದಾಳಿಗೆ ಒಳಗಾಗಿ ಗಾಯಗೊಂಡ ಮಹಿಳೆಗೆ 2 ಲಕ್ಷ ರೂ ಮಧ್ಯಂತರ ಪರಿಹಾರ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಗುರುಗ್ರಾಮ ಮಹಾನಗರ ಪಾಲಿಕೆಗೆ (ಎಂಸಿಜಿ) ಆದೇಶ ನೀಡಿದೆ. ಈ ಹಣವನ್ನು ಸಾಕು ನಾಯಿ ಮಾಲೀಕರಿಂದ ಪಡೆಯಬಹುದು ಎಂದು ತಿಳಿಸಿದೆ.

ಕಳೆದ ಆಗಸ್ಟ್​​ 11ರಂದು ಮುನ್ನಿ ಎಂಬ ಸ್ಥಳೀಯ ಮಹಿಳೆಯ ಮೇಲೆ ವಿನಿತ್​ ಚಿಕರ ಎಂಬುವವರ ನಾಯಿ ದಾಳಿ ಮಾಡಿತ್ತು. ಈ ದಾಳಿಯಿಂದಾಗಿ ಮುನ್ನಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಿಸಲಾಗಿತ್ತು.

ಎಂಸಿಜಿಯಿಂದ ನಿರ್ಬಂಧವಾಗಿರುವ 11 ತಳಿಯ ನಾಯಿಗಳಲ್ಲಿ ಒಂದಾದ ಡೊಗೊ ಅರ್ಜೆಂಟಿನೋ ಎಂಬ ನಾಯಿಯನ್ನು ಮಾಲೀಕ ವಿನಿತ್​ ಚಿಕರ ಸಾಕಿದ್ದರು. ಇದು ತಿಳಿದ ಮೇಲೆ ಅವರ ಡಾಗ್​ ಲೈಸೆನ್ಸ್​ ಅನ್ನು ರದ್ದು ಮಾಡಿದ್ದರು. ಮೂರು ತಿಂಗಳೊಳಗೆ ಸಾಕು ನಾಯಿಗಳಿಗೆ ನೀತಿ ರೂಪಿಸುವಂತೆ ಎಂಸಿಜಿಗೆ ವೇದಿಕೆ ನಿರ್ದೇಶನ ಕೂಡ ನೀಡಿದೆ.

ಸಂತ್ರಸ್ತ ಮಹಿಳೆ ಬಡವರಾಗಿದ್ದು ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ನಾಯಿ ಮಾಲೀಕರು ಸಂಪೂರ್ಣವಾಗಿ ಎಂಸಿಜಿ ನಿಯಮಗಳನ್ನು ಉಲ್ಲಂಘಿಸಿ ನಿರ್ಬಂಧಿತ ನಾಯಿ ಸಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಕೆಯ ಚಿಕಿತ್ಸೆ ಖರ್ಚಿಗೆ 2 ಲಕ್ಷ ರೂ ಹಣ ನೀಡಬೇಕು. ಹಾಗೂ ಮಾಲೀಕರ ಲೈಸೆನ್ಸ್​ ರದ್ದು ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಆನೆಯ ದೃಶ್ಯ ಸೆರೆ ಹಿಡಿದ ಯುವಕ: ವಿಡಿಯೋ

Last Updated : Nov 16, 2022, 12:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.