ETV Bharat / bharat

Guru Purnima: ಇಂದು ಗುರು ಪೂರ್ಣಿಮೆ: ಮಹತ್ವ ತಿಳಿಯೋಣ.. - ವ್ಯಾಸ ಪೂರ್ಣಿಮೆ

ಇಂದು ದೇಶಾದ್ಯಂತ ಗುರು ಪೂರ್ಣಿಮೆ ದಿನ ಆಚರಿಸಲಾಗುತ್ತಿದೆ.

ಗುರು ಪೂರ್ಣಿಮೆ ದಿನಾಚರಣೆ
ಗುರು ಪೂರ್ಣಿಮೆ ದಿನಾಚರಣೆ
author img

By

Published : Jul 3, 2023, 11:09 AM IST

ಪ್ರತಿಯೊಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಜೀವನದುದ್ದಕ್ಕೂ ಒಂದಲ್ಲೊಂದು ಹೊಸತನ್ನು ಕಲಿಯುತ್ತಲೇ ಇರುತ್ತಾನೆ. ಆತ ಕಲಿಯುವ ಪ್ರತಿಯೊಂದು ವಿಷಯದ ಹಿಂದೆಯೂ ಒಬ್ಬ ಗುರು ಇರುತ್ತಾನೆ. ಹಾಗಾಗಿಯೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂದು ಆರಾಧಿಸಲಾಗುತ್ತದೆ. ತಂದೆ, ತಾಯಿಯರ ನಂತರ ಉನ್ನತ ಸ್ಥಾನ ಗುರುವಿಗೆ. ಗುರುವಿನ ಮಹತ್ವವನ್ನು ತಿಳಿಯಲು ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ವೇದಗಳ ಪಿತಾಮಹ ಎಂದೇ ಪ್ರಸಿದ್ಧಿ ಪಡೆದಿರುವ ಮಹರ್ಷಿ ವೇದವ್ಯಾಸರು ಜನಿಸಿದ ದಿನವಾದ್ದರಿಂದ ವ್ಯಾಸ ಪೂರ್ಣಿಮೆ ಎಂದೂ ಆಚರಿಸಲಾಗುತ್ತದೆ.

ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಪೂಜಿಸುವ ಸಂಸ್ಕೃತಿ ಭಾರತದ್ದು. 'ಗು' ಎಂದರೆ ಕತ್ತಲು 'ರು' ಎಂದರೆ ತೆಗೆಯುವುದು. ಅಂದರೆ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸುವವನೆ ಗುರು ಎಂದರ್ಥ. ಭಾರತದಲ್ಲಿ ಅನಾದಿ ಕಾಲದಿಂದಲೂ ಗುರುಗಳನ್ನು ದೇವರಂತೆ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಗುರು ಪೂರ್ಣಿಮೆಯಂದು ಗುರುಗಳನ್ನು ಸ್ಮರಿಸುವುದರಿಂದ ತ್ರಿಮೂರ್ತಿಗಳನ್ನು ಪೂಜಿಸಿದ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ.

ಗುರು ಪೂರ್ಣಿಮೆಯ ಹಿನ್ನೆಲೆ: ಮಹರ್ಷಿ ವೇದವ್ಯಾಸರು ಸುಮಾರು 3,000 ವರ್ಷಗಳ ಹಿಂದೆ ಆಷಾಢ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದರು. ವೇದವ್ಯಾಸರು ತಮ್ಮ ಬಾಲ್ಯದಲ್ಲೊಮ್ಮೆ ತಮ್ಮ ತಂದೆ-ತಾಯಿಯ ಬಳಿ ದೇವರನ್ನು ಕಾಣುವ ಬಯಕೆ ವ್ಯಕ್ತಪಡಿಸಿದ್ದರಂತೆ. ಆದರೆ ತಾಯಿ ಸತ್ಯವತಿ ವೇದವ್ಯಾಸರ ಬಯಕೆ ತಿರಸ್ಕರಿಸಿದರಂತೆ. ಆಗ ವೇದವ್ಯಾಸನು ದೇವರನ್ನು ತೋರಿಸಲೇ ಬೇಕು ಎಂದು ಹಠ ಮಾಡಿದರಂತೆ. ಇದರಿಂದ ಬೇಸರಗೊಂಡ ಅವರ ತಾಯಿ ಸತ್ಯಾವತಿ ಅವನನ್ನು ಕಾಡಿಗೆ ಹೋಗಲು ಆದೇಶಿಸುತ್ತಾರೆ. ಯಾವಾಗ ಮನೆಯ ನೆನಪಾಗುತ್ತೋ ಅವಗೆ ಮನೆಗೆ ಬಾ ಎಂದು ಹೇಳಿದರಂತೆ. ಇದಾದ ನಂತರ ವೇದವ್ಯಾಸರು ಕಾಡಿಗೆ ಹೋಗಿ ಕಠಿಣ ತಪಸ್ಸು ಕೈಗೊಂಡರಂತೆ.

ವೇದವ್ಯಾಸರು ಈ ತಪಸ್ಸಿನಿಂದಲೇ ಸಂಸ್ಕೃತ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅದರ ನಂತರ ಅವರು ನಾಲ್ಕು ವೇದಗಳನ್ನು ವಿಸ್ತರಿಸಿ ಶ್ರೀಮದ್ ಭಾಗವತ, ಮಹಾಭಾರತ, ಹದಿನೆಂಟು ಮಹಾಪುರಾಣಗಳನ್ನು ಒಳಗೊಂಡಂತೆ ಬ್ರಹ್ಮಸೂತ್ರ ರಚಿಸಿದರು. ಮಹರ್ಷಿ ವೇದವ್ಯಾಸರು ಎಲ್ಲ ನಾಲ್ಕು ವೇದಗಳ ಜ್ಞಾನವನ್ನು ಹೊಂದಿದ್ದ ಕಾರಣ ಮೊದಲ ಗುರುವೆಂಬ ಸ್ಥಾನ ಪಡೆದರು. ನಾಲ್ಕು ವೇದಗಳನ್ನು ರಚಿಸಿ ಮನುಕುಲಕ್ಕೆ ಆಧ್ಯಾತ್ಮಿಕ ಪರಂಪರೆಯನ್ನು ಬಿಟ್ಟುಕೊಟ್ಟಿದ್ದರಿಂದ ಗುರು ಪೂರ್ಣಿಮೆ ಆಚರಿಸುವ ಸಂಪ್ರದಾ ಪ್ರಾರಂಭವಾಯಿತು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ವೇದವ್ಯಾಸರ ಹಿಂದಿನ ಹೆಸರು ಕೃಷ್ಣ ದ್ವೈಪಾಯನ. ವೇದಕಾಲದ ಎಲ್ಲ ಸಂಸ್ಕೃತಿಯನ್ನು ನಾಲ್ಕು ವೇದಗಳಲ್ಲಿ ಸಂಗ್ರಹಿಸಿದ ನಂತರ ಅವರನ್ನು ಮಹರ್ಷಿ ವೇದವ್ಯಾಸ ಎಂದು ಕರೆಯಲು ಪ್ರಾರಂಭಿಸಿದರು.

ಇದನ್ನೂ ಓದಿ: Emotional Farewell: ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕಿಗೆ ವಿದ್ಯಾರ್ಥಿಗಳ ಕಣ್ಣೀರಿನ ವಿದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.