ಗುಂಟೂರು: ಜನವರಿ 1 ರಂದು ಆಂಧ್ರಪ್ರದೇಶದ ಗುಂಟೂರಿನ ಅಂಕಿ ರೆಡ್ಡಿಪಾಲೆಂ ಡೊಂಕ ರಸ್ತೆಯಲ್ಲಿ ಭಿಕ್ಷುಕನ ಕೊಲೆ ಪ್ರಕರಣವನ್ನು ನಲ್ಲಪದಂ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಡ್ಲಿ ತಿನ್ನುವುದಿಲ್ಲ ಎಂದು ಬೇಡಿಕೊಂಡ ವ್ಯಕ್ತಿಯನ್ನು ಮೂವರು ದುಷ್ಕರ್ಮಿಗಳು ಮನಬಂದಂತೆ ಥಳಿಸಿ ಕೊಂದಿದ್ದಾರೆ ಎಂದು ಗುಂಟೂರು ದಕ್ಷಿಣ ಡಿಎಸ್ಪಿ ಜೆಸ್ಸಿ ಪ್ರಶಾಂತಿ ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿವರವನ್ನು ಹಂಚಿಕೊಂಡ ಡಿಎಸ್ಪಿ ಜೆಸ್ಸಿ ಪ್ರಶಾಂತಿ, ಗುಂಟೂರು ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ಆರು ತಿಂಗಳಿಂದ ಭಿಕ್ಷೆ ಬೇಡುತ್ತ ಜೀವನ ನಡೆಸುತ್ತಿದ್ದನು. ಜ.1ರ ರಾತ್ರಿ ಸುಮಾರು 1.30ಕ್ಕೆ ಮಹೇಶ್ ಬಾಬು ಎಂಬ ವ್ಯಕ್ತಿ ಮದ್ಯ ಸೇವಿಸಿ ಆತನ ಬಳಿ ಹೋಗಿದ್ದ. ಅವನೊಂದಿಗೆ ಇಡ್ಲಿ ಪಾರ್ಸೆಲ್ ತಂದು ಭಿಕ್ಷುಕನಿಗೆ ತಿನ್ನಲು ಕೊಟ್ಟಿದ್ದಾನೆ. ಭಿಕ್ಷುಕನೂ ಸಹ ಇಡ್ಲಿ ತಿನ್ನಲು ಮುಂದಾಗಿದ್ದ. ಆದರೆ.. ಚೆಡ್ಡಿ ಗ್ಯಾಂಗ್‌ಗಳು ರಾತ್ರಿಯಲ್ಲಿ ತಿರುಗಾಡುತ್ತಿವೆ. ನೀನೂ ಸಹ ಹಾಗೇ ಕಾಣ್ತಿದೀಯಾ ಎಂದು ಭಿಕ್ಷುಕನಿಗೆ ಛೇಡಿಸಿದ್ದಾರೆ.
ಓದಿ: ಕಸದ ರಾಶಿಯಲ್ಲಿ ಭಿಕ್ಷುಕನ ಶವ ಪತ್ತೆ.. ಅರ್ಧ ದೇಹ ಕಿತ್ತು ತಿಂದ ಬೀದಿ ನಾಯಿಗಳು
ಭಿಕ್ಷೆ ಬೇಡಿ ತಿನ್ನುತ್ತಿದ್ದರೂ ಆ ವ್ಯಕ್ತಿ ಸ್ವಾಭಿಮಾನ ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಅವರು ಆಡಿದ ಮಾತುಗಳನ್ನು ಕೇಳಿದ ಭಿಕ್ಷುಕನಿಗೆ ಕೋಪ ಬಂದಿದ್ದು, ಮಹೇಶ್ ನೀಡಿದ್ದ ಇಡ್ಲಿ ಪಾರ್ಸೆಲ್ ಅವರ ಬಳಿ ಎಸೆದಿದ್ದಾನೆ. ಇದರಿಂದ ಭಿಕ್ಷುಕನ ಮೇಲೆ ಮಹೇಶ್ಗೆ ಕೋಪ ಬಂದಿದೆ. ಈ ವೇಳೆ ಮಹೇಶ್ ಜೊತೆ ಸ್ನೇಹಿತರಾದ ಅನಿಲ್ ಹಾಗೂ ಸತೀಶ್ ಭಿಕ್ಷುಕನನ್ನು ನಿಂದಿಸಿದಲ್ಲದೇ ಆತನ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರು. ಪರಿಣಾಮ ಭಿಕ್ಷುಕ ಸ್ಥಳದಲ್ಲೇ ಸಾವನ್ನಪ್ಪಿದ್ದನು.
ಭಿಕ್ಷುಕ ಮೃತಪಟ್ಟಿರುವುದನ್ನು ಕಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಐದು ತಿಂಗಳ ಬಳಿಕ ಆರೋಪಿಗಳ ಸುಳಿವು ಸಿಕ್ಕಿತ್ತು. ವೈ ಜಂಕ್ಷನ್‌ನಲ್ಲಿ ಗುರುವಾರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಎಸ್‌ಪಿ ಪ್ರಶಾಂತಿ ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸುವಲ್ಲಿ ನಲ್ಲಪದವು ಸಿಐ ಬತ್ತುಲ ಶ್ರೀನಿವಾಸ ರಾವ್, ಎಸ್‌ಐ ಮತ್ತು ಇತರ ಸಿಬ್ಬಂದಿ ಪ್ರತಿಭೆಯನ್ನು ಜಿಲ್ಲಾ ಎಸ್ಪಿ ಆರಿಫ್ ಹಫೀಜ್ ಶ್ಲಾಘಿಸಿದ್ದಾರೆ.