ETV Bharat / bharat

ಜಲಂಧರ್ ಗುರುನಾನಕ್​ಪುರ ಪ್ರದೇಶದಲ್ಲಿ ಗುಂಡಿನ ದಾಳಿ.. ಓರ್ವ ಸಾವು - ಟ್ಯಾಕ್ಸಿ ಯೂನಿಯನ್‌ ಅಧ್ಯಕ್ಷ ಕುಲ್‌ದೀಪ್‌ ಸಿಂಗ್‌

ವಾಹನ ನಿಲುಗಡೆ ವಿಚಾರವಾಗಿ ನಡೆದ ವಾಗ್ವಾದ ನಂತರ ಓರ್ವ ವ್ಯಕ್ತಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗುರುನಾನಕ್​ಪುರ ಪ್ರದೇಶದ ಸತ್ನಾಮ್ ನಗರದಲ್ಲಿ ನಡೆದಿದೆ.

ರವೀಂದರ್
ರವೀಂದರ್
author img

By

Published : Nov 29, 2022, 7:38 PM IST

ಜಲಂಧರ್: ಇಲ್ಲಿನ ಗುರುನಾನಕ್​ಪುರ ಪ್ರದೇಶದಲ್ಲಿ ನಡೆದ ಗುಂಡಿನ ಸದ್ದು ಜಲಂಧರ್ ಜಿಲ್ಲೆಯ ಗುರುನಾನಕ್​ಪುರ ಪ್ರದೇಶದ ಸತ್ನಾಮ್ ನಗರದಲ್ಲಿ ಕೇಳಿಬಂದಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ವೃದ್ಧೆ ಕುಲ್ಜಿತ್ ಕೌರ್ ಎಂಬುವವರು ಗಾಯಗೊಂಡಿದ್ದಾರೆ.

ಗುರುನಾನಕ್​ಪುರದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ರಾತ್ರಿ 9 ಗಂಟೆ ವೇಳೆಗೆ ಮಾಹಿತಿ ಸಿಕ್ಕಿದ ನಂತರ ಸ್ಥಳಕ್ಕೆ ಎಸಿಪಿ ನಿರ್ಮಲ್ ಸಿಂಗ್ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿಯಾದ ಟ್ಯಾಕ್ಸಿ ಯೂನಿಯನ್‌ ಅಧ್ಯಕ್ಷ ಕುಲ್‌ದೀಪ್‌ ಸಿಂಗ್‌ ಎಂಬುವವರು ಮಾಹಿತಿ ನೀಡಿದ್ದು, ವಾಹನ ನಿಲುಗಡೆ ವಿಚಾರವಾಗಿ ಕೆಲವು ಜನರ ನಡುವೆ ವಾಗ್ವಾದ ನಡೆದು ನಂತರ ಅದು ಜಗಳಕ್ಕೆ ತಿರುಗಿದೆ.

ಈ ವೇಳೆ ಗುರ್ಮೀತ್ ಎಂಬ ವ್ಯಕ್ತಿ ತನ್ನ ಮನೆಯೊಳಗೆ ಹೋಗಿ ಪರವಾನಗಿ ಪಡೆದ ಆಯುಧವನ್ನು ತಂದು ಫೈರಿಂಗ್​ ಮಾಡಿದ್ದಾನೆ. ಆಗ ಗುಂಡು ರವೀಂದರ್ ಎಂಬ ಯುವಕನಿಗೆ ತಗುಲಿದೆ ಮತ್ತು ಅದೇ ಘಟನೆಯಲ್ಲಿ ಕುಲ್ಜಿತ್ ಕೌರ್ ಎಂಬ ಮಹಿಳೆ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಸದ್ಯ ಪೊಲೀಸರು ಗಾಯಾಳು ಮಹಿಳೆ ಹಾಗೂ ರವೀಂದರ್ ಕುಟುಂಬದವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.