ETV Bharat / bharat

ಛತ್ತೀಸ್‌ಗಢ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ; 6 ಮಂದಿ ನಕ್ಸಲರಿಗೆ ಗಾಯ

author img

By ETV Bharat Karnataka Team

Published : Dec 20, 2023, 2:57 PM IST

Gunfight between police and naxals in Sukma: ಛತ್ತೀಸ್‌ಗಢದ ಸುಕ್ಮಾದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.

Gunfight between police and naxals
ಪೊಲೀಸರು, ನಕ್ಸಲರ ನಡುವೆ ಗುಂಡಿನ ಚಕಮಕಿ: ಸ್ಥಳದಿಂದ ಕಾಲ್ಕಿತ್ತ ನಕ್ಸಲರು, ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆ

ಸುಕ್ಮಾ(ಛತ್ತೀಸ್‌ಗಢ): ರಾಜ್ಯದ ಕೊತ್ತಪಲ್ಲಿ ಮತ್ತು ನಗರಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಇಂದು ಗುಂಡಿನ ಚಕಮಕಿಯಾಗಿದೆ. 5 ರಿಂದ 6 ನಕ್ಸಲರು ಗಾಯಗೊಂಡಿದ್ದಾರೆ. ನಕ್ಸಲರ ಬೃಹತ್ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಿದ ನಂತರ ಸ್ಫೋಟಕಗಳು ದೊರೆತಿವೆ.

ಸುಕ್ಮಾ ಎಸ್ಪಿ ಕಿರಣ್ ಚವ್ಹಾಣ್ ಮಾತನಾಡಿ, ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಮ್ ಮತ್ತು ಕೊತ್ತಪಲ್ಲಿ ಅರಣ್ಯದಲ್ಲಿ ನಕ್ಸಲರು ಇರುವ ಮಾಹಿತಿ ಲಭಿಸಿತು. ತಕ್ಷಣವೇ ಕಾರ್ಯಾಚರಣೆ ಆರಂಭಿಸಲಾಯಿತು. ಡಿಆರ್‌ಜಿ, ಬಸ್ತಾರ್ ಫೈಟರ್ಸ್, ಕೋಬ್ರಾ 201 ಬೆಟಾಲಿಯನ್‌ನ ಜಂಟಿ ತಂಡವನ್ನು ಕೊತ್ತಪಲ್ಲಿ ಅರಣ್ಯಕ್ಕೆ ಕಳುಹಿಸಲಾಯಿತು. ನಕ್ಸಲ್ ಶಿಬಿರದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದವು. ಈ ದಾಳಿಯನ್ನು ತಡೆದುಕೊಳ್ಳಲಾಗದೇ ನಕ್ಸಲರು ದಟ್ಟ ಅರಣ್ಯದತ್ತ ಓಡಿ ಹೋಗಿದ್ದಾರೆ. ಎನ್‌ಕೌಂಟರ್‌ನಲ್ಲಿ 5 ರಿಂದ 6 ನಕ್ಸಲರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಬಸ್ತಾರ್ ವಿಭಾಗದ ನಕ್ಸಲ್‌ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಚುನಾವಣೆಯ ಬಳಿಕ ಕಾರ್ಯಾಚರಣೆ ತೀವ್ರಗೊಂಡಿದೆ. ನಕ್ಸಲರ ಪ್ರದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಪೊಲೀಸ್ ಶಿಬಿರ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ.

ಇತ್ತೀಚಿನ ಪ್ರಕರಣ: ಕೊಡಗಿನ ಬಿರುನಾಣಿ ಗಡಿ ಭಾಗದಲ್ಲಿ ನಕ್ಸಲ್ ನಿಗ್ರಹ ತಂಡ ಮತ್ತು ನಕ್ಸಲರ ನಡುವೆ ಇತ್ತೀಚೆಗೆ ಗುಂಡಿನ ಚಕಮಕಿ ನಡೆದಿತ್ತು. ಓರ್ವ ನಕ್ಸಲ್​ ಗಾಯಗೊಂಡಿದ್ದನು. ಸ್ಥಳದಲ್ಲಿ ಎರಡು ರೈಫಲ್ಸ್ ಲಭಿಸಿದ್ದವು. ರಕ್ತದ ಕಲೆಗಳು ಪತ್ತೆಯಾಗಿದ್ದವು. ನಕ್ಸಲರು ಕಬಿನಿ ಎಂಬ ತಂಡದ ಸದಸ್ಯರಾಗಿರುವ ಸಾಧ್ಯತೆ ಇದೆ ಎಂದು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಪ್ರವಾಹದ ಅಬ್ಬರ: 39 ಗಂಟೆಗಳವರೆಗೆ ಮರದ ಮೇಲೆ ಹತ್ತಿ ಕುಳಿತಿದ್ದ ರೈತನ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.