ETV Bharat / bharat

ಅಮೆರಿಕದಲ್ಲಿ ಗುಜರಾತ್​ ಮೋಟೆಲ್​ ಮಾಲೀಕನ ಗುಂಡಿಕ್ಕಿ ಕೊಲೆ

author img

By

Published : Jul 3, 2022, 6:57 PM IST

ಅಮೆರಿಕದಲ್ಲಿ 2007ರಿಂದ ಗುಜರಾತ್​ನ ಜಗದೀಶ್ ಪಟೇಲ್ ಕುಟುಂಬದೊಂದಿಗೆ ವಾಸವಾಗಿದ್ದರು. ಸೌತ್​ ಕೆರೊಲಿನಾದಲ್ಲಿ ಕೆಲ ವರ್ಷಗಳಿಂದ ಮೋಟೆಲ್ ನಡೆಸುತ್ತಿದ್ದರು.

gujarati-motel-owner-shot-dead-in-america
ಅಮೆರಿಕದಲ್ಲಿ ಗುಜರಾತ್​ ಮೋಟೆಲ್​ ಮಾಲೀಕನ ಗುಂಡಿಕ್ಕಿ ಕೊಲೆ

ಸೂರತ್ (ಗುಜರಾತ್): ಅಮೆರಿಕದ ಸೌತ್ ಕೆರೊಲಿನಾದಲ್ಲಿ ಗುಜರಾತ್​ ಮೂಲದ ಮೋಟೆಲ್​ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಸೂರತ್‌ ಜಿಲ್ಲಾ ಪೊಪ್ರಾ ಗ್ರಾಮದ ನಿವಾಸಿ, 69 ವರ್ಷದ ಜಗದೀಶ್ ಪಟೇಲ್ ಎಂಬುವವರೇ ಕೊಲೆಯಾದವರು.

ಅಮೆರಿಕದಲ್ಲಿ 2007ರಿಂದ ಜಗದೀಶ್ ಪಟೇಲ್ ಕುಟುಂಬದೊಂದಿಗೆ ವಾಸವಾಗಿದ್ದರು. ಸೌತ್​ ಕೆರೊಲಿನಾದಲ್ಲಿ ಕೆಲ ವರ್ಷಗಳಿಂದ ಮೋಟೆಲ್ ನಡೆಸುತ್ತಿದ್ದರು. ಜೂನ್ 25ರಂದು ಮೋಟೆಲ್ ಬಿಲ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಅವರಿಗೆ ಗುಂಡು ಹಾರಿಸಲಾಗಿತ್ತು.

ಮೋಟೆಲ್​ಗೆ ಬಂದಿದ್ದ ಗ್ರಾಹಕನೊಬ್ಬ ಎರಡು ದಿನಗಳ ಕಾಲ ಉಳಿದುಕೊಂಡು ಬಿಲ್ ಪಾವತಿಸಿರಲಿಲ್ಲ. ಆದರೂ, ಇನ್ನೂ ಹೆಚ್ಚು ಕಾಲ ಮೋಟೆಲ್​ನಲ್ಲಿ ಉಳಿಯಲು ಅವಕಾಶ ನೀಡುವಂತೆ ಕೇಳುತ್ತಿದ್ದ. ಇದಕ್ಕೆ ಜಗದೀಶ್​ ಪಟೇಲ್ ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಆರೋಪಿಯು ಜಗದೀಶ್ ಪಟೇಲ್ ತಲೆ ಮತ್ತು ಹೊಟ್ಟೆಗೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಗೆ ಗುರಿಯಾದ ಜಗದೀಶ್ ಪಟೇಲ್​ನನ್ನು ಹೊಟೇಲ್ ಕೆಲಸಗಾರರು ಆಸ್ಪತ್ರೆಗೆ ಸಾಗಿದ್ದರು. ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಜೂನ್ 30ರಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ತಡರಾತ್ರಿ ಸಿಎಂ ಮಮತಾ ಬ್ಯಾನರ್ಜಿ ಮನೆಯ ಗೋಡೆ ಏರಿ ಒಳ ನುಗ್ಗಿದ ವ್ಯಕ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.