ಚಂಡೀಗಢ/ಅಹಮದಾಬಾದ್: ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಕಡಿಮೆಯಾಗ್ತಿದ್ದು, ಇದರ ಬೆನ್ನಲ್ಲೇ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೀಗ ಕೆಲವೊಂದು ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನಾರಂಭ ಮಾಡಲು ನಿರ್ಧರಿಸಲಾಗುತ್ತಿದ್ದು, ಅಲ್ಲಿನ ಶಿಕ್ಷಣ ಇಲಾಖೆ ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿವೆ.
ಇದೀಗ ಹರಿಯಾಣ ಸರ್ಕಾರ ಆಫ್‌ಲೈನ್ ತರಗತಿ ಆರಂಭ ಮಾಡಲು ಮುಂದಾಗಿದ್ದು, 9 ಹಾಗೂ 10ನೇ ತರಗತಿ ಜುಲೈ 16ರಿಂದ 6 ರಿಂದ 8ನೇ ತರಗತಿ ಕ್ಲಾಸ್ ಜುಲೈ 23ರಿಂದ ಆರಂಭ ಮಾಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1ರಿಂದ 5ನೇ ತರಗತಿ ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿರಿ: 'ಹುಡ್ಗೀರು ಇಷ್ಟೊಂದು ಸಲ ತಮ್ಮ DP ಕೂಡ ಚೇಂಜ್ ಮಾಡಲ್ಲ': ಲಂಕಾ ಕ್ರಿಕೆಟ್ ಟ್ರೋಲ್ ಮಾಡಿದ ಜಾಫರ್
ಗುಜರಾತ್ನಲ್ಲೂ ಕಾಲೇಜ್ ಆರಂಭ
ಗುಜರಾತ್ನಲ್ಲೂ ಕೋವಿಡ್ ಸೋಂಕಿತ ಪ್ರಕರಣ ಕಡಿಮೆಯಾಗಿದ್ದು, ಇದೀಗ ಜುಲೈ 15ರಿಂದ 12ನೇ ತರಗತಿ ಕಾಲೇಜ್ ಪುನಾರಂಭ ಮಾಡಲು ನಿರ್ಧರಿಸಲಾಗಿದೆ. ಶೇ. 50ರಷ್ಟು ವಿದ್ಯಾರ್ಥಿಗಳೊಂದಿಗೆ ತರಗತಿ ಆರಂಭಿಸಬಹುದಾಗಿದೆ. ಆದರೆ ಆನ್ಲೈನ್ ಮೂಲಕ ತರಗತಿಗಳಿಗೆ ಹಾಜರಾಗಲು ಕೂಡ ಅವಕಾಶ ನೀಡಲಾಗಿದೆ. ಕಾಲೇಜ್ಗೆ ಬರುವಾಗ ಸಾಮಾಜಿಕ ಅಂತರ, ಸ್ಯಾನಿಟೈಸ್ ಕಡ್ಡಾಯಗೊಳಿಸಲಾಗಿದೆ. ಇನ್ನು ಆಂಧ್ರದಲ್ಲೂ ಆಗಸ್ಟ್ ತಿಂಗಳಲ್ಲಿ ಶಾಲಾ-ಕಾಲೇಜು ಪುನಾರಂಭ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.