ETV Bharat / bharat

ಜೂನಿಯರ್ ಕ್ಲರ್ಕ್ ಪರೀಕ್ಷೆಯ ಪ್ರಶ್ನೆ ಪ್ರತಿಕೆ ಸೋರಿಕೆ: ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಸಂಚು..!

ಪರೀಕ್ಷಾರ್ಥಿಗಳ ನಿದ್ದೆಗೆಡಿಸಿದ ಗುಜರಾತ್‌ನ ಜೂನಿಯರ್ ಕ್ಲರ್ಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ - ತೆಲಂಗಾಣದ ಹೈದರಾಬಾದ್ ನಗರಕ್ಕೂ ಇದೆ ನಂಟು - 15 ಆರೋಪಿಗಳು ಅರೆಸ್ಟ್​

Gujarat Junior Clerk Paper leak
ಜೂನಿಯರ್ ಕ್ಲರ್ಕ್ ಪರೀಕ್ಷೆಯ ಪ್ರಶ್ನೆ ಪ್ರತಿಕೆ ಸೋರಿಕೆ
author img

By

Published : Jan 31, 2023, 6:10 PM IST

ಅಹಮದಾಬಾದ್​: ಗುಜರಾತ್‌ನಲ್ಲಿ ಜೂನಿಯರ್ ಕ್ಲರ್ಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವು ತೆಲಂಗಾಣದ ಹೈದರಾಬಾದ್ ನಗರಕ್ಕೂ ನಂಟಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪ್ರದೀಪ್ ನಾಯಕ್ ಎಂಬುವರಿಗೆ ಪ್ರಶ್ನೆ ಪತ್ರಿಕೆ ಪ್ರತಿಯನ್ನು ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಆರೋಪಿ ಪ್ರದೀಪ್ ಅದನ್ನು ಮುರಾರಿ ಪಾಸ್ವಾನ್ ಮತ್ತು ನರೇಶ್ ಮೊಹಾಂತಿಗೆ ನೀಡಲು ನಿರ್ಧರಿಸುತ್ತಾನೆ. ಮುರಾರಿ ಹಾಗೂ ಕಮಲೇಶನು ಮೊಹಮ್ಮದ್ ಫಿರೋಜ್‌ಗೆ ನೀಡಲು ನಿರ್ಧರಿಸುತ್ತಾನೆ. ಫಿರೋಜ್ ಈ ಪ್ರಶ್ನೆ ಪತ್ರಿಕೆಯನ್ನು ಸರ್ವೇಶ್‌ಗೆ ಹಾಗೂ ಸರ್ವೇಶ್ ಇದನ್ನು ಮಿಂಟುಗೆ ನೀಡಬೇಕಾಗಿತ್ತು. ಮಧ್ಯವರ್ತಿಗಳ ನಡುವೆ ಪ್ರಶ್ನೆ ಪತ್ರಿಕೆ ಹರಿದಾಡಿತ್ತು. ಮಧ್ಯವರ್ತಿಗಳು ಈ ಪ್ರಶ್ನೆ ಪತ್ರಿಕೆಯನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯೋಚಿಸಿದ್ದರು.

ಕೆಎಲ್ ಹೈಟೆಕ್ ಪ್ರಿಂಟಿಂಗ್ ಪ್ರೆಸ್ ಏಜೆನ್ಸಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯನ್ನು ವಡೋದರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಗುಜರಾತ್ ಎಟಿಎಸ್ 12 ದಿನಗಳವರೆಗೆ ಕಸ್ಟಡಿಗೆ ಪಡೆದುಕೊಳ್ಳಾಗಿದೆ. ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಿವರಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಮೂಲವು ಹೈದರಾಬಾದ್‌ನಲ್ಲಿದೆ. ಹೈದರಾಬಾದ್​ನ ಜುಬಿಲಿ ಹಿಲ್ಸ್ ರಸ್ತೆಯ ರಸ್ತೆ ಸಂಖ್ಯೆ 36ರಲ್ಲಿರುವ ಕೆಎಲ್ ಹೈಟೆಕ್ ಪ್ರಿಂಟಿಂಗ್ ಪ್ರೆಸ್ ಏಜೆನ್ಸಿಯ ಟೀ ಸ್ಟಾಲ್ ಬಳಿ ಪ್ರಶ್ನೆ ಪತ್ರಿಕೆ ಡೀಲ್​ ನಡೆದಿದೆ. ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡುವ ಶ್ರದ್ಧಾಕರ್ ಅಲಿಯಾಸ್ ಜೀತ್ ಲುಹಾ ಮತ್ತು ಪ್ರದೀಪ್ ನಾಯಕ್ ಪರಸ್ಪರ ಭೇಟಿಯಾಗಿದ್ದರು. 20 ದಿನಗಳ ಹಿಂದೆ ಪ್ರಶ್ನೆ ಪತ್ರಿಕೆಯನ್ನು ಪ್ರೆಸ್​ನಿಂದ ಹೊರಗಡೆ ತೆಗೆದುಕೊಂಡು ಬಂದು ಟೀ ಅಂಗಡಿಯಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡಿದ್ದರು.

ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ನಿರ್ಧಾರ: ನಂತರ ಈ ಪ್ರಕರಣದಲ್ಲಿ ಮಿಂಟು ಕೂಡಾ ಸೇರಿಕೊಂಡಿದ್ದಾನೆ. ಮಿಂಟು ಬರೋಡದ ಭಾಸ್ಕರ್ ಚೌಧರಿ ಅವರಿಗೆ ಪ್ರಶ್ನೆ ಪತ್ರಿಕೆಯನ್ನು ನೀಡಿದ್ದಾರೆ. ಚೌಧರಿ ಪತ್ರಿಕೆಯನ್ನು ಕೇತನ್ ಬರೋಟ್, ರಾಜ್ ಬರೋಟ್, ಅನಿಕೇತ್ ಭಟ್ ಮತ್ತು ಇಮ್ರಾನ್​ಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ಕೇತನ್ ಬರೋಟೆ ರಾಜ್ ಮತ್ತು ಅನಿಕೇತ್ ಭಟ್ ಅವರು ಪ್ರಶ್ನೆ ಪತ್ರಿಕೆಯನ್ನು ಹಾರ್ದಿಕ್ ಮತ್ತು ಪ್ರಣಯ್ ಶರ್ಮಾ ಅವರಿಗೆ ತಲುಪಿಸಿದರು.

ನರೇಶ್ ಮೊಹಂತಿ ಈ ಪತ್ರಿಕೆಯನ್ನು ತನ್ನ ಸಂಬಂಧಿಕರಿಗೆ ಮಾರಾಟ ಮಾಡಲು ಬಯಸಿದ್ದರು. ಮುಖೇಶ್ ಮತ್ತು ಪ್ರಭಾತ್ ಕುಮಾರ್ ಕೂಡ ತಮ್ಮ ಪರಿಚಯದವರಿಗೆ ಪ್ರಶ್ನೆ ಪತ್ರಿಕೆಯನ್ನು ಮಾರಲು ಮುಂದಾಗಿದ್ದರು. ಪ್ರಿಂಟಿಂಗ್ ಪ್ರೆಸ್‌ನ ಹೊರಗಿನ ಕೆಲಸಗಾರರಿಂದ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡ ಪ್ರದೀಪ್ ಅದನ್ನು ವಡೋದರದ ಅಟ್ಲಾದರ ಬಿಲ್ ರಸ್ತೆಯಲ್ಲಿರುವ ಪ್ರಮುಖ್ ಬಜಾರ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಸ್ಟಾಕ್‌ವೈಸ್ ಟೆಕ್ನಾಲಜಿ ಕಚೇರಿಯಲ್ಲಿ ಚೌಧರಿಗೆ ತಲುಪಿಸಲು ಯೋಜಿಸಲಾಗಿತ್ತು.

15 ಆರೋಪಿಗಳ ಬಂಧನ: ಚೌದರಿಯವರ ಪ್ರಶ್ನೆ ಪತ್ರಿಕೆಯ ನಕಲು ಪ್ರತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯದ 15 ಆರೋಪಿಗಳನ್ನು ಬಂಧಿಸಲಾಗಿದೆ. 15 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಬೇಕಿದೆ. ಇವರೆಲ್ಲರ ಹೊರತಾಗಿ ಇನ್ನು ಕೆಲವು ಆರೋಪಿಗಳ ಕೈವಾಡವಿರುವ ಸಾಧ್ಯತೆ ಹೆಚ್ಚಿದೆ. ಪೊಲೀಸ್ ತನಿಖೆ ಚುರುಕುಗೊಂಡಿದೆ.

ಈ ಹಗರಣದಲ್ಲಿ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಯಿದೆ. ಇದೀಗ ಹೈದರಾಬಾದ್‌ನ ಕೆಎಲ್ ಹೈಟೆಕ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗಲಿದೆ ಎಂದು ಆರೋಪಿಗಳಿಗೆ ಮಾಹಿತಿ ನೀಡಿದವರು ಯಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಗುಜರಾತ್ ಹೊರತುಪಡಿಸಿ ಬೇರೆ ಯಾವ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಎಷ್ಟು ವಹಿವಾಟು ನಡೆದಿದೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅಸಮಾಧಾನ: ಎಲ್ಲವೂ ಸರಿಯಾಗಿದ್ದರೆ, ಜೂನಿಯರ್ ಕ್ಲರ್ಕ್ ಪರೀಕ್ಷೆ ಜನವರಿ 29 ರಂದು ಭಾನುವಾರ ನಡೆಯುತ್ತಿತ್ತು. ಆದರೆ ಪರೀಕ್ಷೆ ಆರಂಭಕ್ಕಿಂತಲೂ ಐದು ಗಂಟೆ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದರಿಂದ 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ಗುಜರಾತ್ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಕೇಂದ್ರಗಳ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಪರೀಕ್ಷೆಗಳಿಗೆ ಬಂದಿದ್ದ ಅಭ್ಯರ್ಥಿಗಳನ್ನು ಅವರ ಸ್ಥಳಗಳಿಗೆ ಹಿಂತಿರುಗಿ ಹೋಗಲು ತೀವ್ರ ತೊಂದರೆ ಅನುಭವಿಸಿದ್ದರು. ಆಕ್ರೋಶಗೊಂಡ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.

ಈ ವಿಚಾರವಾಗಿ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂದು ಪ್ರತಿಪಕ್ಷ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ. ರಾಜ್ಯದ ಲಕ್ಷಾಂತರ ಯುವಕರ ಕನಸು ಭಗ್ನಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಚುನಾವಣೆ ವೇಳೆ ಗುಜರಾತ್ ಭೇಟಿ ಮಾಡಿದ್ದ ಅಮಿತ್​ ಶಾ ಮತ್ತು ನರೇಂದ್ರ ಮೋದಿಯವರು ಗುಜರಾತ್​ಗೆ ಬಂದು ಈ ಯುವಕರಿಗೆ ಉತ್ತರ ನೀಡಬೇಕು ಎಂದು ಕಿಡಿಕಾರಿದರು.

ಗಾಂಧಿನಗರದಲ್ಲಿ ಬಿಗಿ ಭದ್ರತೆ: ಘಟನೆ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪಾಶಬಂಧಿ ಮಂಡಲ ಕಟ್ಟಡದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಗಾಂಧಿನಗರಕ್ಕೆ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. ಐಬಿ ಇನ್ಪುಟ್ ಪ್ರಕಾರ, ರಾಜಕೀಯ ಪಕ್ಷಗಳು ಗಾಂಧಿನಗರಕ್ಕೆ ಮುತ್ತಿಗೆ ಹಾಕಬಹುದು. ಅದರಲ್ಲೂ ಕಾಂಗ್ರೆಸ್ ಈ ವಿಚಾರದಲ್ಲಿ ಹೋರಾಟ ಮಾಡುವ ಸಾಧ್ಯತೆಯಿದೆ.

ಗಾಂಧಿ ನಗರದಲ್ಲಿರುವ ಸತ್ಯಾಗ್ರಹ ಕಂಟೋನ್ಮೆಂಟ್ ಅನ್ನು ಪೊಲೀಸ್ ರಕ್ಷಣೆ ಕೇಂದ್ರವಾಗಿದೆ. ಇಲ್ಲಿ ಬಂದು ಹೋಗುವ ಪ್ರತಿಯೊಂದು ವಾಹನವನ್ನು ಹಗಲು ರಾತ್ರಿ ತಪಾಸಣೆ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ನಿವಾಸ ಹಾಗೂ ಸಚಿವರ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದೆ. ಇದರಲ್ಲಿ ಗುಜರಾತ್ ಎಟಿಎಸ್ ಅಧಿಕಾರಿಗಳೂ ಭಾಗಿಯಾಗಿದ್ದರು.

ಇದನ್ನೂ ಓದಿ:ಜಾಗತಿಕ ಅಸ್ಥಿರತೆಯ ನಡುವೆ ಇಡೀ ವಿಶ್ವ ಭಾರತದ ಬಜೆಟ್‌ ಮೇಲೆ ಕಣ್ಣಿಟ್ಟಿದೆ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.