ETV Bharat / bharat

ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..

ಗುಜರಾತ್​ನಲ್ಲಿ ದಲಿತರ ಸಮಸ್ಯೆ, ಬಿಲ್ಕಿಸ್​ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ, ಆಡಳಿತ ವಿರೋಧಿ ಅಂಶಗಳ ನಡುವೆಯೂ ಬಿಜೆಪಿ ಗೆದ್ದು ಬೀಗಿದೆ. ಆದರೆ, ಇದೇ ಗೆಲುವು ಹಿಮಾಚಲ ಪ್ರದೇಶದಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂಬುವುದು ಬಗ್ಗೆ ಈಟಿವಿ ಭಾರತ್​ ಸಂಪಾದಕ ಬಿಲಾಲ್ ಭಟ್ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

gujarat-heeded-modi-but-himachal-congress-supporters-were-indifferent-to-it
ಮೋದಿ ಮನವಿಗೆ ಗುಜರಾತ್ ಜನತೆ ಮಣೆ... ಆದರೆ, ಹಿಮಾಚಲದಲ್ಲಿ ನಡೆದ ಕಮಾಲ್
author img

By

Published : Dec 8, 2022, 4:21 PM IST

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಸರಿ ಪಕ್ಷದ ದಿಗ್ಗಜರು ನಡೆಸಿದ ಪ್ರಬಲ ಪ್ರಚಾರದಿಂದ ಈ ಗೆಲುವು ಸಾಧ್ಯವಾಗಿದ್ದರೂ, ಮೋದಿಯವರು ವೈಯಕ್ತಿಕ ಮನವಿಗೆ ಗುಜರಾತ್​ ಮತದಾರರು ಮಣೆ ಹಾಕಿದ್ದಾರೆ ಎಂಬುವುದು ಈ ಭರ್ಜರಿ ಗೆಲುವಿನಿಂದ ಸ್ಪಷ್ಟ. ಬಿಜೆಪಿ ಪಡೆದ ಶೇಕಡಾವಾರು ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು ಮೋದಿಗೆ ಜೈಕಾರ ಹಾಕಿದ್ದಾರೆ.

ಇಂದಿನ ಚುನಾವಣಾ ಫಲಿತಾಂಶ ನಂತರ ಗುಜರಾತ್​ನಲ್ಲಿ ಪ್ರತಿಪಕ್ಷಗಳು ಧೂಳೀಪಟವಾಗಿವೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ಯಾವ ಎದುರಾಳಿಯೂ ಇಲ್ಲದೇ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಸದ್ಯ ಪ್ರತಿಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆಯನ್ನು ಗಮನಿಸಿದರೆ ಮುಂದಿನ ಐದು ವರ್ಷಗಳಲ್ಲಿ ಸದನದಲ್ಲಿ ಆಡಳಿತ ಪಕ್ಷದ ಎದುರಿನ ಗ್ಯಾಲರಿಯಿಂದ(ವಿಪಕ್ಷ) ಅಪರೂಪಕ್ಕೆ ಧ್ವನಿ ಕೇಳಿಬರುವಂತಿದೆ.

ಕೆಲಸ ಮಾಡದ ಆಡಳಿತ ವಿರೋಧಿ ಅಲೆ: ದಲಿತರ ಸಮಸ್ಯೆ, ಬಿಲ್ಕಿಸ್​ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ ಅಥವಾ ಆಡಳಿತ ವಿರೋಧಿ ಅಲೆ ಸೇರಿ ಯಾವುದೂ ಕೂಡ ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ. ಬಿಜೆಪಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಅಂಶಗಳನ್ನು ಮೋದಿ ಎಂಬ ಹೆಸರಿನ ಮಂತ್ರವು ಮರೆಮಾಚುವಲ್ಲಿ ಯಶಸ್ಸು ಕಂಡಿದೆ. ಪಕ್ಷ ಬಿಡಿ, ನಾನು ಈ ಮಣ್ಣಿನ ಮಗನಾಗಿರುವುದರಿಂದ ನನಗೆ ಮತ ನೀಡಿ ಎಂದು ತಮ್ಮದೇ ಪಕ್ಷದ ತಳಮಟ್ಟದ ಕಾರ್ಯಕರ್ತರು, ಪ್ರಮುಖರಿಗೂ ಮೋದಿ ಮನವಿ ಮಾಡಿದ್ದರು. ಇದಕ್ಕೆ ಫಲ ಸಿಕ್ಕಿದೆ.

ಚದುರಿ ಹೋದ ಮತಗಳು: ಪ್ರಮುಖವಾಗಿ ಬಿಜೆಪಿಯ ವಿರೋಧ ಪಕ್ಷಗಳಲ್ಲಿ ಮತಗಳು ಚದುರಿ ಹೋಗಿವೆ. ಕಾಂಗ್ರೆಸ್, ಆಮ್​ ಆದ್ಮಿ ಪಕ್ಷ ಮತ್ತು ಎಐಎಂಐಎಂ ಅಭ್ಯರ್ಥಿಗಳಲ್ಲೇ ಮತಗಳು ಹರಿದು ಹಂಚಿ ಹೋಗಿವೆ. ಕೆಲವು ಕ್ಷೇತ್ರಗಳಲ್ಲಿ ಹಲವಾರು ಮುಸ್ಲಿಂ ಅಭ್ಯರ್ಥಿಗಳಿದ್ದರೂ, ಇದು ಮತ ವಿಭಜನೆಯ ಮೂಲ ತಂತ್ರವೇ ಆಗಿತ್ತು. ಆದರೆ, ಇದರಿಂದ ಅಸ್ಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸೇರಿ ಯಾವುದೇ ವಿರೋಧ ಪಕ್ಷಗಳಿಗೆ ಇದರಿಂದ ಪ್ರಯೋಜನವಾಗಿಲ್ಲ.

ಅಲ್ಲದೇ, ಒಂದಲ್ಲ ಒಂದು ಕಾರಣಕ್ಕೆ ಓವೈಸಿ ಗುಜರಾತ್‌ಗೆ ನಿತ್ಯ ಭೇಟಿ ನೀಡುತ್ತಿರುವ ಬಗ್ಗೆ ಬಿಜೆಪಿ ಗಮನ ಹರಿಸಿದ್ದರೂ, ಇದರ ಬೆದರಿಕೆಗೆ ಇದ್ದು ಕಾಂಗ್ರೆಸ್​ಗೆ. ಇದೇ ವೇಳೆ ಸೌರಾಷ್ಟ್ರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಭಾವವನ್ನು ತಗ್ಗಿಸಲು ಸ್ವತಃ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ಕೆ ಇಳಿದಿದ್ದರು.

ಬಿಜೆಪಿಯ ಹಿಂದುತ್ವ ಅಜೆಂಡಾ: 2017ರಲ್ಲಿ ಸೌರಾಷ್ಟ್ರ ಭಾಗದ 48 ಸ್ಥಾನಗಳಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯು ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಉತ್ತರ ಗುಜರಾತ್‌ನ 53 ಸ್ಥಾನಗಳ ಪೈಕಿ 24 ಕಡೆ ಕಾಂಗ್ರೆಸ್‌ ಜಯ ಸಾಧಿಸಿತ್ತು. ಪ್ರಧಾನಿ ಮೋದಿಯವರ ತವರೂರಾದ ವಡನಗರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಸುಮಾರು 19 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಈ ಭಾಗದಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಪರಿಣಾಮಕಾರಿಯಾಗಿ ಬಳಸಿದೆ. ಹಿಂದುತ್ವದ ಈ ಕಲ್ಪನೆಯು ಪ್ರತಿಪಕ್ಷಗಳನ್ನು ಅಕ್ಷರಶಃ ನಗಣ್ಯಗೊಳಿಸಿದೆ.

ಹಿಮಾಚಲದಲ್ಲಿ ಸರ್ಕಾರ ಬದಲಾಯಿಸುವ ಮಾದರಿ: ಇದಕ್ಕೆ ವ್ಯತಿರಿಕ್ತ ಎಂಬಂತೆ ಮತ್ತೊಂದು ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯು ಕಳಪೆ ಪ್ರದರ್ಶನ ನೀಡಿದೆ. ರಾಜ್ಯದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಅಗತ್ಯವಾದ ಸಂಖ್ಯೆಯ ಸ್ಥಾನಗಳನ್ನು ಪಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಶೇಕಡಾವಾರು ಮುಸ್ಲಿಂ ಮತಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಬಿಜೆಪಿಗೆ ಹಿಂದುತ್ವದ ಕೆಲಸ ಮಾಡಿಲ್ಲ ಎಂಬುವುದು ಸ್ಪಷ್ಟ.

ಒಟ್ಟಿನಲ್ಲಿ ಇಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ಪ್ರಾಯಶಃ ಮಹತ್ವದ ಪಾತ್ರ ವಹಿಸಿದ್ದು ಸರ್ಕಾರಿ ನೌಕರರು ಮತ್ತು ಹಳೆಯ ಪಿಂಚಣಿ ಯೋಜನೆ. ಇದು ಕಾಂಗ್ರೆಸ್‌ಗೆ ಹೆಚ್ಚು ಒಲವು ತೋರಿರುವುದು ಸ್ಪಷ್ಟವಾಗಿದೆ. ಗುಜರಾತ್‌ನಲ್ಲಿ ಕಂಡುಬಂದ ಕೇಸರಿ ಪ್ರಾಬಲ್ಯಕ್ಕಿಂತ ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿದೆ. ಇದರೊಂದಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಹಿಮಾಚಲದಲ್ಲಿ ಸರ್ಕಾರ ಬದಲಾಯಿಸುವ ಮಾದರಿ ಬದಲಾಗಿಲ್ಲ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರೆರಿದೆ.

ಗುಜರಾತ್‌ನ ಗೆಲುವು ಬಿಜೆಪಿಗೆ ಲಾಭ: ಆದರೆ, 2023ರಲ್ಲಿ ಅನೇಕ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ಗುಜರಾತ್‌ನ ಗೆಲುವು ಬಿಜೆಪಿಗೆ ಲಾಭವನ್ನು ಖಂಡಿತವಾಗಿ ನೀಡುತ್ತದೆ. ಕೇಸರಿ ಪಕ್ಷವು ತನ್ನ ವೈಫಲ್ಯಗಳಿಂದ ಪಾಠ ಕಲಿಯುವ ಚಾಣಾಕ್ಷತನವನ್ನು ಗಮನಿಸಿದರೆ, ಪ್ರತಿಪಕ್ಷಗಳಿಗೆ ಸ್ಪರ್ಧೆಯಲ್ಲಿ ಉಳಿಯಲು ಇದು ದೊಡ್ಡ ಸವಾಲನ್ನು ಎಸೆಯುತ್ತದೆ.

ಇದನ್ನೂ ಓದಿ: ಸತತ ಏಳು ಬಾರಿ ಗೆದ್ದ ಎಡರಂಗದ ದಾಖಲೆ ಸರಿಗಟ್ಟಿದ ಬಿಜೆಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.