ETV Bharat / bharat

ಗುಜರಾತ್‌ ಕಾಂಗ್ರೆಸ್ ಆಂತರಿಕ ಕಲಹ: ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್‌ - ಹಾರ್ದಿಕ್​ ಪಟೇಲ್​ ರಾಜೀನಾಮೆ

2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದ ಯುವ ನಾಯಕ ಹಾರ್ದಿಕ್​ ಪಟೇಲ್​ ಈಗ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.

Hardik Patel resigns from Congress membership  Hardik Patel resigns  Hardik Patel resigns news  ಕಾಂಗ್ರೆಸ್​ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್​ ಹಾರ್ದಿಕ್​ ಪಟೇಲ್​ ರಾಜೀನಾಮೆ  ಹಾರ್ದಿಕ್​ ಪಟೇಲ್​ ರಾಜೀನಾಮೆ ಸುದ್ದಿ
ಕಾಂಗ್ರೆಸ್​ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್​
author img

By

Published : May 18, 2022, 10:56 AM IST

ಗುಜರಾತ್​: ದೇಶದ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್​ನಲ್ಲಿ ಆಂತರಿಕ ಕಲಹ ಬೂದಿ ಮುಚ್ಚಿದ ಕೆಂಡದಂತಿದೆ. ಪಕ್ಷದ ಹಲವು ರಾಜ್ಯ ಘಟಕಗಳಲ್ಲಿ ಹಿರಿಕಿರಿಯರ ನಡುವೆ ಹೊಂದಾಣಿಕೆ ಕೊರತೆ ಕಂಡುಬರುತ್ತಿದೆ. ಹಿರಿಯರ ವರ್ತನೆಯಿಂದ ಕಿರಿಯರು ಮತ್ತು ಅನೇಕ ಸಂದರ್ಭಗಳಲ್ಲಿ 'ಕೈ' ಹಿಡಿದಿದ್ದ ಯುವ ನಾಯಕರು ಅತೃಪ್ತರಾಗಿದ್ಧಾರೆ. ಇದೇ ಹಿನ್ನೆಲೆಯಲ್ಲಿ ಇದೀಗ ಗುಜರಾತ್​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ​ದ್ದು ಪಕ್ಷ ತೊರೆದಿದ್ದಾರೆ.

  • आज मैं हिम्मत करके कांग्रेस पार्टी के पद और पार्टी की प्राथमिक सदस्यता से इस्तीफा देता हूँ। मुझे विश्वास है कि मेरे इस निर्णय का स्वागत मेरा हर साथी और गुजरात की जनता करेगी। मैं मानता हूं कि मेरे इस कदम के बाद मैं भविष्य में गुजरात के लिए सच में सकारात्मक रूप से कार्य कर पाऊँगा। pic.twitter.com/MG32gjrMiY

    — Hardik Patel (@HardikPatel_) May 18, 2022 " class="align-text-top noRightClick twitterSection" data=" ">

28 ವರ್ಷದ ಹಾರ್ದಿಕ್ 2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. ನಂತರ 2019ರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.

ಇದನ್ನೂ ಓದಿ: ಸ್ವಪಕ್ಷದ ವಿರುದ್ಧ ವಾಗ್ದಾಳಿ... ಗುಜರಾತ್​ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಹಾರ್ದಿಕ್​ ವಜಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.