ಅಹಮದಾಬಾದ್, ಗುಜರಾತ್: ಐಐಟಿ, ಐಐಎಂ ಮೆಡಿಕಲ್, ಮತ್ತಿತರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಆಕಾಂಕ್ಷೆ ಉಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ಸೆಂಟರ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.
ಈಗ ಸದ್ಯಕ್ಕೆ ಗುಜರಾತ್ನ ವಿದ್ಯಾರ್ಥಿಗಳು ಕೋಚಿಂಗ್ಗಾಗಿ ರಾಜಸ್ಥಾನದ ಕೋಟಾಗೆ ಪ್ರಯಾಣ ಬೆಳೆಸುತ್ತಿದ್ದು, ಕೋಟಾದಲ್ಲಿನ ಮಾದರಿಯಲ್ಲೇ ಕೋಚಿಂಗ್ ಸೆಂಟರ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾಣಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳ ಮೊದಲ 10 ಜಿಲ್ಲೆಗಳಲ್ಲಿ ಬೆಂಗಳೂರು!
ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಿಎಂ ವಿಜಯ್ ರೂಪಾಣಿ, ಕೋಚಿಂಗ್ ಕೇಂದ್ರಗಳಿಗಾಗಿ ಪ್ರತ್ಯೇಕ ಅನುದಾನ ನೀಡಲಾಗುತ್ತದೆ. ವೃತ್ತಿಪರ ಕೋಚಿಂಗ್ ಸೆಂಟರ್ಗಳ ಸಹಭಾಗಿತ್ವದಲ್ಲಿ ರಾಜ್ಯದ ಪ್ರಮುಖ ನಾಲ್ಕು ನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದಿದ್ದಾರೆ.
ಅಹಮದಾಬಾದ್, ವಡೋದರ, ರಾಜಕೋಟ್, ಸೂರತ್ನಲ್ಲಿ ಕೋಚಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಿಎಂ ಹೇಳಿದ್ದು, ಈ ಕೋಚಿಂಗ್ ಕೇಂದ್ರಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಿ ಪ್ರವೇಶ ಪಡೆಯಬಹುದು ಎಂದು ಸಿಎಂ ಹೇಳಿದ್ದಾರೆ.