ಅಹಮದಾಬಾದ್: 2017ರಲ್ಲಿ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಪೊಲೀಸ್ ಅಪರಾಧ ವಿಭಾಗ ರವಿ ಪೂಜಾರಿ ಅನ್ನು ಬೋರ್ಸಾದ್‌ನ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ರವಿ ಪೂಜಾರಿ ಅನ್ನು ಆನಂದ್ ಜಿಲ್ಲೆಯ ಬೊರ್ಸಾದ್ ಪಟ್ಟಣದ ನ್ಯಾಯಾಲಯದಲ್ಲಿ ನಿನ್ನೆ ತಡರಾತ್ರಿ ಹಾಜರುಪಡಿಸಲಾಯಿತು.
2017ರ ಗುಂಡಿನ ದಾಳಿ ಪ್ರಕರಣವು ಬೋರ್ಸಾದ್ ಪುರಸಭೆಯ ಕಾರ್ಪೋರೇಟರ್ ಪ್ರಾಗ್ನೇಶ್ ಪಟೇಲ್ ಅವರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದ್ದಾಗಿದೆ. ಜನವರಿ 13, 2017 ರಂದು ಪ್ರಾಗ್ನೇಶ್ ಪಟೇಲ್ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿತ್ತು.
ಇದೀಗ ನ್ಯಾಯಾಲಯಕ್ಕೆ ರವಿ ಪೂಜಾರಿಯನ್ನು ಹಾಜರುಪಡಿಸಲಾಗಿದ್ದು, ಬೋರ್ಸಾದ್ ನ್ಯಾಯಾಲಯ ಸಂಕೀರ್ಣದ ಪ್ರತೀ ಮೂಲೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.