ಗಾಂಧಿನಗರ (ಗುಜರಾತ್) : ಭೂ ಕಬಳಿಕೆ ತಡೆಯುವ ಕಠಿಣ ಕಾನೂನು ರಾಜ್ಯದಲ್ಲಿ ಇಂದಿನಿಂದ ಜಾರಿಗೆ ಬಂದಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.
ಈ ಕಾನೂನಿನ ಪ್ರಕಾರ, ಅಪರಾಧಿಗಳಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಅನುವು ಮಾಡಿಕೊಡಲಾಗುತ್ತದೆ.
ಸಣ್ಣ ರೈತರು ಮತ್ತು ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೊಳಿಸಲಾಗಿದ್ದು, ಅಕ್ಟೋಬರ್ 8ರಂದು ರಾಜ್ಯಪಾಲರು ಭೂ ಕಬಳಿಕೆ (ನಿಷೇಧ) ಕಾಯ್ದೆ-2020ಕ್ಕೆ ಅಂಕಿತ ಹಾಕಿದ್ದರು. ಪ್ರತಿ ಜಿಲ್ಲೆಯಲ್ಲಿ ಸಮಿತಿ ಹಾಗೂ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗುತ್ತದೆ ಎಂದು ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ಓದಿ: 1971ರ ಭಾರತ-ಪಾಕ್ ಯುದ್ಧದ 50ನೇ ವಿಜಯೋತ್ಸವ: ಹುತಾತ್ಮ ಯೋಧರಿಗೆ ಪ್ರಧಾನಿ ಗೌರವ
ಈ ಕಾಯ್ದೆಯ ಪ್ರಕಾರ, ಎಲ್ಲಾ ರೀತಿಯ ಭೂ ಕಬಳಿಕೆಯನ್ನು ನಿಷೇಧ ಮಾಡಲಾಗಿದೆ. ಉದ್ಯಮಗಳೂ ಕೂಡಾ ಕಾಯ್ದೆಯ ಅಡಿಯಲ್ಲಿ ಬರಲಿದ್ದು, ಸರ್ಕಾರ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತದೆ ಎಂದು ಸಿಎಂ ರೂಪಾನಿ ಹೇಳಿದ್ದಾರೆ.
ಈ ಕಾಯ್ದೆಯನ್ನು ರಕ್ಷಿಸಲು ರಚಿಸಲಾಗುವ ಸಮಿತಿಗಳಲ್ಲಿ ಏಳು ಮಂದಿ ಸದಸ್ಯರು ಇರುತ್ತಾರೆ. ಈ ಸಮಿತಿ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡಲಿದ್ದು, ಪ್ರತಿ 15 ದಿನಕ್ಕೊಮ್ಮೆ ಸಂತ್ರಸ್ತ ವ್ಯಕ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಸಂತ್ರಸ್ಥರು ನೀಡಿರುವ ದೂರನ್ನು ಪ್ರಾಮಾಣಿಕವಾಗಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದು ಪ್ರಾಮಾಣಿಕವಾಗಿದ್ದರೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಯ್ದೆ ಹೇಳಿದೆ.