ETV Bharat / bharat

ಗುಜರಾತ್ ವಿಧಾನಸಭಾ ಚುನಾವಣೆ: ಭಾರಿ ಮತಗಳ ಅಂತರದಿಂದ ಗೆದ್ದವರು ಯಾರು? ಏನ್​ ಹೇಳುತ್ತೆ ಇತಿಹಾಸ! - ಭಾರಿ ಮತಗಳ ಅಂತರದಿಂದ ಗೆದ್ದವರು ಯಾರು

ಬಿಜೆಪಿ ಗುಜರಾತ್ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸತತ 7ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್‌ನ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಲ್ಲಿ 1,92,263 ಮತಗಳಿಂದ ಗೆದ್ದಿದ್ದಾರೆ.

gujarat election big lead candidate
ಭೂಪೇಂದ್ರ ಪಟೇಲ್
author img

By

Published : Dec 9, 2022, 7:30 AM IST

ಗುಜರಾತ್: ಗುಜರಾತ್ ವಿಧಾನಸಭಾ ಚುನಾವಣೆ 2022 ಫಲಿತಾಂಶ ನಿನ್ನೆ ಹೊರಬಿದ್ದಿದೆ. ಬಿಜೆಪಿ ರಾಜ್ಯದ​ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸತತ 7ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಅಷ್ಟೇ ಅಲ್ಲದೆ, ಕೆಲ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಹೌದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್‌ನ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಲ್ಲಿ 1,92,263 ಮತಗಳಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಮಿಬೆನ್ ಯಾಗ್ನಿಕ್ 21,267 ಮತಗಳನ್ನು ಪಡೆದರೆ, ಎಎಪಿಯ ವಿಜಯ್ ಪಟೇಲ್ 14,035 ಮತಗಳನ್ನು ಪಡೆದಿದ್ದಾರೆ. ಜೊತೆಗೆ ಸಿಎಂ ಅಭ್ಯರ್ಥಿ ಭೂಪೇಂದ್ರ ಪಟೇಲ್ ಒಟ್ಟು 2,13,530 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ.

ಅಲ್ಲದೇ, ಹರ್ಷ ಶಾಂಘ್ವಿ ಸೂರತ್ ಅಸೆಂಬ್ಲಿಯಲ್ಲಿ ಅಭೂತಪೂರ್ವ 1,15,422 ಮತಗಳ ಅಂತರದಿಂದ ಗೆದ್ದಿದ್ದಾರೆ. ಪರಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾನು ದೇಸಾಯಿ 97,000 ಮತಗಳಿಂದ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿಯ ಪೂರ್ಣೇಶ್ ಮೋದಿ ಸೂರತ್ ಪಶ್ಚಿಮದಲ್ಲಿ 1,04,312 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಾಮ್‌ನಗರ ದಕ್ಷಿಣದಿಂದ ಭಾರತೀಯ ಜನತಾ ಪಕ್ಷದ ದಿವ್ಯೇಶ್‌ಭಾಯ್ ರಾಂಚೋಡಭಾಯ್ 86,045 ಮತಗಳಿಂದ ಮತ್ತು ಕಾಂಗ್ರೆಸ್​ನ ಕತಿರಿಯಾ ಮನೋಜಭಾಯ್ - 23,730 ಹಾಗೂ ಗೋವರ್ಧನ್​ಭಾಯ್- 62,315 ಮತಗಳಿಂದ ಜಯಗಳಿಸಿದ್ದಾರೆ.

ಸಯಾಜಿಗಂಜ್-142ರಲ್ಲಿ ಕಾಂಗ್ರೆಸ್‌ನ ಅಮಿ ರಾವತ್ 37,822 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಮೇಯರ್ ಕೆಯೂರ್ ರೊಕಾಡಿಯಾ 1,21,528 ಮತಗಳನ್ನು ಪಡೆದು 83,706 ಮತಗಳಿಂದ ಸೋತಿದ್ದಾರೆ. ವಲ್ಸಾದ್‌ನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಮಲಭಾಯ್ ಶಾಂತಿಲಾಲ್ ಪಟೇಲ್ 21,404 ಮತಗಳನ್ನು ಪಡೆದರೆ, ಭಾರತೀಯ ಜನತಾ ಪಕ್ಷದ ಭಾರತಭಾಯ್ ಕೇಶುಭಾಯ್ ಪಟೇಲ್ 1,25,809 ಮತಗಳನ್ನು ಪಡೆದು 1,04,405 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಸೂರತ್‌ನ ಅಲಪಾಡ್ ಕ್ಷೇತ್ರದಿಂದ ಬಿಜೆಪಿಯ ಮುಖೇಶ್ ಪಟೇಲ್ 1,17,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್‌ಕೋಟ್ ವಿಧಾನಸಭಾ 69 ಪಶ್ಚಿಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ.ದರ್ಶಿತಾ ಶಾ ಗೆಲುವು ಸಾಧಿಸಿದ್ದಾರೆ. ಡಾ.ದರ್ಶಿತಾ ಅವರು ಒಟ್ಟು 1,38,687 ಮತಗಳನ್ನು ಪಡೆದಿದ್ದು,1,05,975 ಮತಗಳ ಮುನ್ನಡೆಯೊಂದಿಗೆ ಭಾರಿ ಅಂತರದಿಂದ ವಿಜೇತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಕಡಿಮೆ ಅಂತರದಲ್ಲಿ ಗೆದ್ದವರು ಯಾರು? ಹೇಗಿತ್ತು ತೀವ್ರ ಹಣಾಹಣಿಯ ಪೈಪೋಟಿ..

ಗುಜರಾತ್‌ನಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆದಿದ್ದು 1962 ರಲ್ಲಿ. ಅಂದಿನಿಂದ ಕಳೆದ 2017 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ನಾವು ವಿಶ್ಲೇಷಿಸಿದರೆ, ರಾಜಕೀಯ ಪಂಡಿತರನ್ನು ಸಹ ಬೆಚ್ಚಿಬೀಳಿಸುವ ಕೆಲವು ಫಲಿತಾಂಶಗಳು ಬಂದಿವೆ.

ಅತ್ಯಧಿಕ ಅಂತರದಿಂದ ಗೆದ್ದವರು: 2007 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನರೋತ್ತಮ್ ಭಾಯ್ ಪಟೇಲ್ ಮತ್ತು ಕಾಂಗ್ರೆಸ್‌ನಿಂದ ಧನಾನಿ ಜನಕಭಾಯ್ ಸ್ಪರ್ಧಿಸಿದ್ದರು. ಫಲಿತಾಂಶ ಪ್ರಕಟವಾದಾಗ ಬಿಜೆಪಿಯನರೋತ್ತಮ್ ಭಾಯ್ ಪಟೇಲ್ 5,84,098 ಮತಗಳನ್ನು ಪಡೆದರೆ, ಐಎನ್‌ಸಿಯ ಜನಕಭಾಯ್ ಧನಾನಿ 2,37,158 ಮತಗಳನ್ನು ಪಡೆದಿದ್ದರು. ಅಂದಹಾಗೆ, ಬಿಜೆಪಿಯ ನರೋತ್ತಮ್ ಭಾಯ್ ಪಟೇಲ್ ಗುಜರಾತ್ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 3,46,940 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದೊಂದು ಕುತೂಹಲಕಾರಿ ಫಲಿತಾಂಶ.

ಇದನ್ನೂ ಓದಿ: 156 ಸೀಟು ಗೆದ್ದು ಗುಜರಾತ್‌ನಲ್ಲಿ​ ಬಿಜೆಪಿ ದಾಖಲೆಯ ಜಯಭೇರಿ: 'ಕೈ'ಗೆ ಪ್ರತಿಪಕ್ಷ ಸ್ಥಾನವೂ ಇಲ್ಲ!

ಸಿಎಂ ಅತಿ ಹೆಚ್ಚು ಮತ ಗಳಿಸಲು ಕಾರಣ: ಘಟ್ಲೋಡಿಯಾ ಪ್ರದೇಶವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಘಟ್ಲೋಡಿಯದಲ್ಲಿ ಪಾಟಿದಾರ ಸಮುದಾಯದ ಬಹುಪಾಲು ಜನರಿದ್ದಾರೆ. ಸಂಪೂರ್ಣವಾಗಿ ಹಿಂದೂ ಪ್ರದೇಶವಾಗಿರುವುದರಿಂದ ಅಲ್ಲಿನ ಒಟ್ಟು ಮತಗಳು ಬಿಜೆಪಿಗೆ ಹೋಗುತ್ತವೆ. ಹೀಗಾಗಿ ಭೂಪೇಂದ್ರ ಪಟೇಲ್ ಭಾರಿ ಅಂತರದಿಂದ ಜಯಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.