ಅಹ್ಮದಾಬಾದ್: ಗುಜರಾತ್‌ನ ಪ್ರತಿ ಮನೆಯೂ ಈಗ ನಲ್ಲಿ ನೀರಿನ ಸಂಪರ್ಕ ಹೊಂದಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ದೀಪಾವಳಿಯ ಶುಭ ಸಂದರ್ಭದಲ್ಲಿ "ಗುಜರಾತ್ ಇತಿಹಾಸದಲ್ಲಿ ಇಂದು ಅದ್ಭುತವಾದ ದಿನ. ರಾಜ್ಯದಲ್ಲಿ ಶೇ. 100ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಸಿಕ್ಕಿದೆ. ಪ್ರತಿ ಗ್ರಾಮೀಣ ಕುಟುಂಬವೂ ಈಗ ಸುರಕ್ಷಿತ, ಸಮರ್ಪಕ ಮತ್ತು ನಿಯಮಿತ ಕುಡಿಯುವ ನೀರನ್ನು ಪಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
"Gujarat declared as 100% Har Ghar Jal state," tweets state's Home Minister Harsh Sanghavi. pic.twitter.com/UJWJbVneyE
— ANI (@ANI) October 26, 2022 " class="align-text-top noRightClick twitterSection" data="
">"Gujarat declared as 100% Har Ghar Jal state," tweets state's Home Minister Harsh Sanghavi. pic.twitter.com/UJWJbVneyE
— ANI (@ANI) October 26, 2022"Gujarat declared as 100% Har Ghar Jal state," tweets state's Home Minister Harsh Sanghavi. pic.twitter.com/UJWJbVneyE
— ANI (@ANI) October 26, 2022
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಲಸಂಪನ್ಮೂಲ ಮತ್ತು ನೀರು ಸರಬರಾಜು ಸಚಿವ ಋಷಿಕೇಶ್ ಪಟೇಲ್ ನಾಯಕತ್ವದಲ್ಲಿ ಸರ್ಕಾರ ಅಭಿವೃದ್ಧಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ.
ನೀರೇ ಜೀವನದ ಆಧಾರ. ಗುಜರಾತ್ ನೀರಿನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತದೆ. ಮಹಿಳೆಯರ ಜೀವನವನ್ನು ಪರಿವರ್ತಿಸುವುದರಿಂದ ಹಿಡಿದು ಪ್ರತಿ ಮನೆಯ ನಲ್ಲಿ ನೀರಿನ ಅಗತ್ಯತೆಗಳನ್ನು ಮೋದಿ ಸರ್ಕಾರ ಪೂರೈಸಿದೆ. ಜಲ ಜೀವನ್ ಮಿಷನ್‌ನೊಂದಿಗೆ ಈ ದೀಪಾವಳಿಯಲ್ಲಿ ಗುಜರಾತ್ ಪ್ರಕಾಶಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಪ್ರತಿ ಮನೆಯೂ ನಲ್ಲಿಯಿಂದ ನೀರು ಪಡೆಯುವ ಅನುಕೂಲವನ್ನು ಗುಜರಾತ್ ಸಾಧಿಸಿದೆ. ನೀರಿನ ಅಗತ್ಯವನ್ನು ಪೂರೈಸುವ ಭರವಸೆಯನ್ನು ನಿಗದಿತ ಸಮಯಕ್ಕಿಂತ ಎರಡು ವರ್ಷಗಳ ಮೊದಲೇ ಇಂದು ಈಡೇರಿಸಿದ್ದೇವೆ. ನರ್ಮದಾ ವಾಟರ್ ಗ್ರಿಡ್, ಸುಜಲಾಂ ಸುಫಲಾಮ್ ಮತ್ತು ಸೌರಾಷ್ಟ್ರ ನರ್ಮದಾ ಅವತಾರ ನೀರಾವರಿಯಂತಹ ಯೋಜನೆಗಳ ಫಲವಾಗಿ ರಾಜ್ಯದ ಪ್ರತಿ ಮನೆಯಲ್ಲಿ ನಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಯೋಜನೆಗೆ ಬಿಡುಗಡೆಯಾದ ಮೊತ್ತದ ವಿವರ: ಜೂನ್ 2021ರಲ್ಲಿ, ರಾಷ್ಟ್ರೀಯ ಜಲ ಜೀವನ್ ಮಿಷನ್ ಅಡಿಯಲ್ಲಿ, ಕೇಂದ್ರ ಸರ್ಕಾರ ಗುಜರಾತ್‌ಗೆ ಮೊದಲ ಕಂತಾಗಿ 852.65 ಕೋಟಿ ರೂ. ಬಿಡುಗಡೆ ಮಾಡಿತು.
- 2021-22ನೇ ಸಾಲಿನಲ್ಲಿ ಕೇಂದ್ರದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಗುಜರಾತ್‌ಗೆ 3,411 ಕೋಟಿ ರೂ. ಬಿಡುಗಡೆ ಮಾಡಿತು. ಮಾರ್ಚ್ 2022ರ ವೇಳೆಗೆ 10 ಲಕ್ಷ ಮನೆಗಳಿಗೆ ನಲ್ಲಿ ನೀರನ್ನು ಒದಗಿಸುವ ಯೋಜನೆ ಇದಾಗಿತ್ತು.
- ಈ ಯೋಜನೆಯಡಿಯಲ್ಲಿ, 2019-20 ರಲ್ಲಿ 390 ಕೋಟಿ ರೂ., 2020-21 ರಲ್ಲಿ 883 ಕೋಟಿ ರೂ. 2021-22ನೇ ಸಾಲಿನಲ್ಲಿ ಸುಮಾರು 3,411 ರೂ.ಗಳನ್ನು ಒದಗಿಸಿದೆ.
ಏನಿದು ಜಲ ಜೀವನ್ ಮಿಷನ್?: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ 'ಹರ್ ಘರ್ ಜಲ್' (ಪ್ರತಿ ಮನೆಗೆ ನೀರು). ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಜಲ ಜೀವನ್ ಮಿಷನ್ ಅನ್ನು 2019ರಲ್ಲಿ ಘೋಷಿಸಿದ್ದರು.
ಇದು 2024ರ ವೇಳೆಗೆ ದೇಶದ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ, ನಿಗದಿತ ಗುಣಮಟ್ಟದ ಮತ್ತು ನಿಯಮಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಕುಡಿಯುವ ಟ್ಯಾಪ್(ನಲ್ಲಿ) ನೀರನ್ನು ಒದಗಿಸುವ ಗುರಿ ಹೊಂದಿದೆ. ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್ ಮೂಲಕ ಶುದ್ಧ ನೀರಿನ ಸೌಲಭ್ಯಕ್ಕೆ ಸಂಪರ್ಕ ಕಲ್ಪಿಸಲಾಗಿದೆ.
ಗೋವಾ 'ಹರ್ ಘರ್ ಜಲ್' ಪ್ರಮಾಣೀಕೃತ ಮೊದಲ ರಾಜ್ಯ: ಗೋವಾ 'ಹರ್ ಘರ್ ಜಲ್' ಪ್ರಮಾಣೀಕರಿಸಲ್ಪಟ್ಟ ದೇಶದ ಮೊದಲ ರಾಜ್ಯವಾಗಿದೆ. ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೂಡ ಹರ್ ಘರ್ ಜಲ್ ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಇದನ್ನೂ ಓದಿ: ಜಲ ಜೀವನ್ ಮಿಷನ್: ಒಡಿಶಾಗೆ 4 ಪಟ್ಟು ಹೆಚ್ಚು ಅನುದಾನ ಘೋಷಿಸಿದ ಕೇಂದ್ರ