ETV Bharat / bharat

ಯುವತಿ ಜೊತೆಗಿನ ವಿಡಿಯೋ ವೈರಲ್​: ಪತ್ನಿಗೆ ವಿಚ್ಛೇದನ, ರಾಜಕೀಯಕ್ಕೆ ವಿರಾಮ ಘೋಷಿಸಿದ ಕಾಂಗ್ರೆಸ್​ ನಾಯಕ! - ಗುಜರಾತ್​​ನ​ ಕಾಂಗ್ರೆಸ್​ ನಾಯಕ ಭರತ್ ಸಿನ್ಹಾ ಸೋಲಂಕಿ

ನನ್ನ 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂತಹ ಘಟನೆ ನಡೆದಿಲ್ಲ. ಹೀಗಾಗಿ ಈ ಬೆಳವಣಿಗೆ ಅಂತ್ಯವಾಗುವವರೆಗೂ ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ಪಡೆಯುತ್ತೇನೆ ಎಂದು ಗುಜರಾತ್​​ನ​ ಕಾಂಗ್ರೆಸ್​ ನಾಯಕ ಭರತ್ ಸಿನ್ಹಾ ಸೋಲಂಕಿ ಹೇಳಿದ್ದಾರೆ.

gujarat-congress-leader-bharatsinh-solanki-takes-a-short-break-from-active-politics
ಯುವತಿ ಜೊತೆಗಿನ ವಿಡಿಯೋ ವೈರಲ್​: ಪತ್ನಿಗೆ ವಿಚ್ಛೇದನ, ರಾಜಕೀಯಕ್ಕೆ ವಿರಾಮ ಘೋಷಿಸಿದ ಕಾಂಗ್ರೆಸ್​ ನಾಯಕ!
author img

By

Published : Jun 3, 2022, 5:27 PM IST

ಅಹ್ಮದಾಬಾದ್ (ಗುಜರಾತ್): ಗುಜರಾತ್​​ನ​ ಕಾಂಗ್ರೆಸ್​ ನಾಯಕ ಭರತ್ ಸಿನ್ಹಾ ಸೋಲಂಕಿ ಒಂದೇ ಮನೆಯಲ್ಲಿ ಬೇರೆಯೊಬ್ಬ ಯುವತಿಯೊಂದಿಗೆ ಇರುವ ವಿಡಿಯೋ ವೈರಲ್​ ಆಗಿದೆ. ಇದರ ಬಗ್ಗೆ ಸ್ವತಃ ಸೋಲಂಕಿ ಅವರೇ ಸುದ್ದಿಗೋಷ್ಠಿ ನಡೆಸಿ, ಯುವತಿ ಮತ್ತು ತನ್ನ ಪತ್ನಿಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ಈ ಬೆಳವಣಿಗೆ ಅಂತ್ಯವಾಗುವವರೆಗೂ ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ಪಡೆಯುವುದಾಗಿ ಸೋಲಂಕಿ ಹೇಳಿದ್ದಾರೆ.

ಯುವತಿ ಮತ್ತು ಸೋಲಂಕಿ ಒಂದೇ ಮನೆಯಲ್ಲಿ ಇರುವಾಗ ಪತ್ನಿ ಮತ್ತು ಆಕೆಯ ಕಡೆಯವರು ದಾಳಿ ಮಾಡಿದ್ದರು. ಇದರ ವಿಡಿಯೋ ವೈರಲ್​ ಆಗಿ ಗುಜರಾತ್​ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷಿಸಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವರಾದ ಸೋಲಂಕಿ ಖುದ್ದು ತಾವೇ ಸುದ್ದಿಗೋಷ್ಠಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಪತ್ನಿಯೊಂದಿಗೆ ವಿಚ್ಛೇದನ: ನಾನು ಮತ್ತು ಯುವತಿ ಉತ್ತಮ ಸಂಬಂಧ ಹೊಂದಿದ್ದೇವೆ. ಆಕೆಯ ಹೆಸರು ರಿದ್ಧಿ ಪರ್ಮಾರ್ ಆಗಿದ್ದು, ಮದುವೆಯಾಗಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ನನ್ನ ಪತ್ನಿ ರೇಷ್ಮಾ ಅವರೊಂದಿಗೆ ವಿಚ್ಛೇದನಕ್ಕಾಗಿ ಕಾಯುತ್ತಿದ್ದೇನೆ ಎಂದು ಸೋಲಂಕಿ ಸ್ಪಷ್ಟಡಿಸಿದ್ದಾರೆ.

ಯುವತಿ ಜೊತೆಗಿನ ವಿಡಿಯೋ ವೈರಲ್​: ಪತ್ನಿಗೆ ವಿಚ್ಛೇದನ, ರಾಜಕೀಯಕ್ಕೆ ವಿರಾಮ ಘೋಷಿಸಿದ ಕಾಂಗ್ರೆಸ್​ ನಾಯಕ!

ರೇಷ್ಮಾಗೆ ನನ್ನಗಿಂತ ಆಸ್ತಿಯೇ ಮುಖ್ಯ: ಕಳೆದ 15 ವರ್ಷಗಳಿಂದ ರೇಷ್ಮಾ ಜೊತೆಗೆ ಹೇಗೆ ಕಳೆದಿದ್ದೇನೆ ಎಂಬುದು ನನಗೆ ಗೊತ್ತಿದೆ. 12-13 ವರ್ಷಗಳಿಂದಲೂ ಜಗಳದಲ್ಲೇ ನಮ್ಮ ಜೀವನ ಹೋಗಿದೆ. ನನ್ನನ್ನು ಬೇಕೆಂತಲೇ ಟಾರ್ಗೆಟ್ ಮಾಡಲಾಗಿದೆ. ನನ್ನ ಮನೆಯನ್ನು ರೇಷ್ಮಾ ಆಕ್ರಮಿಸಿಕೊಂಡಿದ್ದಾಳೆ. ಇದರಿಂದ ನಾನು ಹಳೆ ಮನೆಯಲ್ಲಿ ವಾಸವಾಗುವಂತೆ ಆಗಿದೆ. ನನ್ನ ಆರೋಗ್ಯಕ್ಕಿಂತ ನನ್ನ ಸಂಪತ್ತಿನ ಮೇಲೆ ಹೆಚ್ಚು ಆಸಕ್ತಿ ಆಕೆಗಿದೆ. ವಿಚ್ಛೇದನ ವಿಷಯಯು ಇದೇ 15ರಂದು ನ್ಯಾಯಾಲಯದ ಮುಂದೆ ಬರಲಿದೆ ಎಂದು ಸೋಲಂಕಿ ತಿಳಿಸಿದ್ದಾರೆ.

ಚುನಾವಣೆ ದೃಷ್ಟಿಯಿಂದ ಕುತಂತ್ರ: ನನ್ನ 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂತಹ ಘಟನೆ ನಡೆದಿಲ್ಲ. ನನ್ನ ಮನೆಗೆ ರೇಷ್ಮಾ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾವು ಯಾವುದೇ ಅಸಭ್ಯ ರೀತಿಯಲ್ಲಿ ಇರಲಿಲ್ಲ. ಆದರೆ, ರಂಗೀನಾಟದಲ್ಲಿ ತೊಡಗಿದ್ದರು ಎಂದು ರೇಷ್ಮಾ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈಗ ಅಚಾನಕ್ಕಾಗಿ ಚುನಾವಣೆ ಬಂದಾಗ ಇಂಥದ್ದೊಂದು ಶುರುವಾಗುತ್ತದೆ. ಆದರೆ, ಈ ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನನ್ನ ಬಳಿ ಯಾವುದೇ ಸ್ಪಷ್ಟನೆ ಕೇಳಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಯುವತಿಯೊಂದಿಗೆ ಇರುವಾಗ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ! ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.