ETV Bharat / bharat

ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​.. ಪ್ರಾಣಾಪಾಯದಿಂದ 20 ಪ್ರಯಾಣಿಕರು ಪಾರು.. - ಗುಜರಾತ್​ನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​

ಸಿಟಿ ಬಸ್​ವೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆದಿದೆ..

City bus caught fire in Rajkot, City bus caught fire in Gujarat, Gujarat news, ರಾಜ್​ಕೋಟ್​ನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​, ಗುಜರಾತ್​ನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​, ಗುಜರಾತ್​ ಸುದ್ದಿ,
ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​
author img

By

Published : Jan 22, 2022, 12:30 PM IST

Updated : Jan 22, 2022, 2:17 PM IST

ರಾಜ್‌ಕೋಟ್ : ನಗರದಲ್ಲಿ ಬೆಳಗ್ಗೆ 9ರ ಸುಮಾರಿಗೆ ಸಿಟಿ ಬಸ್‌ವೊಂದರಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಿಟಿ ಬಸ್​

ಅಗ್ನಿ ಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಬಸ್​ ಬೆಂಕಿಗಾಹುತಿಯಾದ ಸುದ್ದಿ ಇಡೀ ನಗರದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು.

ಓದಿ: UP Polls: ಶೇ.99 V/S ಶೇ.1 ಎಂಬುದೇ ನಿಜ.. ಪ್ರಿಯಾಂಕಾ ಗಾಂಧಿ

ಬಸ್ಸಿನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್​ ಚಾಲಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಬೆಂಕಿ​ ನೋಡು-ನೋಡುತ್ತಿದ್ದಂತೆ ಬಸ್​ ತುಂಬೆಲ್ಲಾ ಆವರಿಸಿಕೊಂಡಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.