ಗೋಧ್ರಾ /ಅಹಮದಾಬಾದ್: ಗುಜರಾತ್‌ನ ಗೋಧ್ರಾ ಪುರಸಭೆಯ ಏಳು ಎಐಎಂಐಎಂ ಸದಸ್ಯರು 17 ಮಂದಿ ಸ್ವತಂತ್ರರಿಗೆ ಬೆಂಬಲ ಸೂಚಿಸಿದ್ದು, 2002 ರಿಂದ ಆಡಳಿತ ನಡೆಸುತ್ತಾ ಬಂದಿದ್ದ ಬಿಜೆಪಿಗೆ ಈ ಬಾರಿ ಅಧಿಕಾರ ಕೈತಪ್ಪಿದೆ.
2002 ರಿಂದ ಆಡಳಿತ ನಡೆಸುತ್ತಾ ಬಂದಿದ್ದ ಬಿಜೆಪಿಗೆ ಈ ಬಾರಿ ಎಐಎಂಐಎಂ ಬೆಂಬಲ ಸೂಚಿಸಲು ನಿರಾಕರಿಸಿದೆ. ಗೋಧ್ರಾ ಪುರಸಭೆಯಲ್ಲಿ 17 ಸ್ವತಂತ್ರ ಸದಸ್ಯರು ಜಯಗಳಿಸಿದ್ದರು. ಅವರಿಗೆ 7 ಮಂದಿ ಎಐಐಎಂಐಎಂ ಸದಸ್ಯರು ಬೆಂಬಲ ಸೂಚಿಸಿದ್ದು, ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯನ್ನು ಸಂಜಯ್ ಸೋನಿ ಮತ್ತು ಅಕ್ರಮ್ ಪಟೇಲ್ ಅಲಂಕರಿಸಲಿದ್ದಾರೆ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲಾ ಹೇಳಿದ್ದಾರೆ.
ಗೋಧ್ರಾ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜನರು ನಮ್ಮ ಎಐಎಂಐಎಂ ಪಕ್ಷಕ್ಕೆ ಮತ ಹಾಕಿದ್ದಾರೆ, ನಾವು ಅವರಿಗಾಗಿ ಕೆಲಸ ಮಾಡುತ್ತೇವೆ. ಬಿಜೆಪಿಯ ಆಡಳಿತದಿಂದ ನಾಗರಿಕರು ಬೇಸರಗೊಂಡಿದ್ದಾರೆ ಎಂದರು.