ಬನಸ್ಕಾಂತ(ಗುಜರಾತ್): ಜಿಲ್ಲೆಯ ಥರದ್ ಧನೇರಾ ಹೆದ್ದಾರಿಯ ಪಾವದಾಸನ್ ಬಳಿ ಕಾರೊಂದು ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶನಿವಾರ ತಡರಾತ್ರಿ ಥರಡ್ ತಾಲೂಕಿನ ಖೇಡಾದಿಂದ ಕುಟುಂಬಸ್ಥರು ಮನೆಗೆ ತೆರಳುತ್ತಿದ್ದ ವೇಳೆ ಪಾವದಾಸನ್ ಬಳಿ ರಸ್ತೆಯಲ್ಲಿ ಕಾರು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಹಾಗೂ ಟ್ರ್ಯಾಕ್ಟರ್‌ನಲ್ಲಿದ್ದ ಕಾರ್ಮಿಕ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಮೂವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: UP Polls : ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಪೊಲೀಸ್ ಆಯುಕ್ತ
ಇವರೆಲ್ಲರನ್ನು ಚಿಕಿತ್ಸೆಗಾಗಿ ಧನೇರಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಥಳಕ್ಕಾಗಮಿಸಿದ ಜನರು ಘಟನೆ ಬಗ್ಗೆ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಅಪಘಾತದ ಕುರಿತು ಧನೇರಾ ವೆತ್ರದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರಲ್ಲಿ 4 ಮಂದಿ ಭಖ್ಡಿಯಾಲ್ ಮತ್ತು ಒಬ್ಬ ಜಡಿಯಾಲಿ ಗ್ರಾಮದವ ಎಂದು ತಿಳಿದುಬಂದಿದೆ.