ಭಾವನಗರ (ಗುಜರಾತ್) : ಗುಜರಾತ್‌ನ ಭಾವನಗರ ಜಿಲ್ಲೆಯ ಮಲನ್ ನದಿಯಲ್ಲಿ ಈಜಲು ತೆರಳಿದ್ದ ಮೂವರು ಸಹೋದರರು ಹಾಗು ಮತ್ತೋರ್ವ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ ಎಂದು ಮಹುವ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೃತಪಟ್ಟ ನಾಲ್ವರು ಯುವಕರು ಮಹುವ ತಾಲೂಕಿನ ಲಖುಪಾರ ಗ್ರಾಮದರಾಗಿದ್ದು, 17 ರಿಂದ 27 ವರ್ಷ ವಯಸ್ಸಿನವರು. ವಿಷಯ ತಿಳಿಯುತ್ತಿದ್ದಂತೆ ಶನಿವಾರ ಸಂಜೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಬೆಳಗ್ಗೆ ಮತ್ತೊಂದು ಶವ ಪತ್ತೆಯಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಂದೇ ಕುಟುಂಬದ ಯುವಕರು ಸಾವು: ಮಲನ್ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ನಾಲ್ವರು ಯುವಕರ ಪೈಕಿ ಮೂವರು ಸೋದರರು. ಇನ್ನೊಬ್ಬ ಯುವಕನೂ ಸಹ ಅದೇ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಈಜಲು ಹೋಗಿ ನೀರಿನಲ್ಲಿ ಮುಳುಗಿದವರನ್ನು 28 ವರ್ಷದ ಹಾರ್ದಿಕ್‌ಭಾಯ್ ದೇವಚಂದಭಾಯಿ ಮಾರು, 22 ವರ್ಷದ ಮಾರು ಕಿಶೋರ್‌ಭಾಯ್ ದೇವಚಂದಭಾಯ್, 25 ವರ್ಷದ ಭವೇಶ್ ದೇವಚಂದಭಾಯ್ ಮಾರು ಮತ್ತು 18 ವರ್ಷದ ಮಹೇಂದ್ರಭಾಯಿ ದಾಮ್‌ಜಿಭಾಯಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಎರಡು ಪ್ರತ್ಯೇಕ ಪ್ರಕರಣ : ಒಟ್ಟು ಹತ್ತು ಮಂದಿ ನೀರಿನಲ್ಲಿ ಮುಳುಗಿ ನಾಪತ್ತೆ, ಮುಂದುವರಿದ ಶೋಧ
ಇಬ್ಬರು ಅಪ್ರಾಪ್ತ ಮೊಮ್ಮಕ್ಕಳು ಸೇರಿ ಅಜ್ಜಿ ಸಾವು: ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮಹಿಳೆ ಸೇರಿದಂತೆ ಆಕೆಯ ಇಬ್ಬರು ಅಪ್ರಾಪ್ತ ಮೊಮ್ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹೀರಾಪುರ್ ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ 11 ಮತ್ತು 7 ವರ್ಷದ ಇಬ್ಬರು ಮೊಮ್ಮಗಳು ಜಾನುವಾರು ಮೇಯಿಸಲು ಹೋಗಿದ್ದಾಗ ದುರಂತ ಸಂಭವಿಸಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಪೊಲೀಸ್ ಅಧಿಕಾರಿ ಅನಿಲ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ : ಹೊಂಡಕ್ಕೆ ಬಿದ್ದು ಐವರು ವಿದ್ಯಾರ್ಥಿಗಳು ಓರ್ವ ಶಿಕ್ಷಕ ಸಾವು !
ಬಾಲಕಿಯರು ಆಟವಾಡುತ್ತಿದ್ದಾಗ ಆಯತಪ್ಪಿ ಕೊಳಕ್ಕೆ ಬಿದ್ದಿದ್ದು, ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಜ್ಜಿ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಬಳಿಕ, ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಂತರ ಬಾಲಕನೊಬ್ಬ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ : ತುಮಕೂರು : ಈಜು ಕಲಿಯಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು
ಪೊಲೀಸರಿಂದ ತಪ್ಪಿಸಿಕೊಳ್ಳಲು 3 ಕಿಲೋ ಮೀಟರ್ ಕಾಲುವೆಯಲ್ಲಿ ಈಜಿದ ಟಿಪ್ಪರ್ ಚಾಲಕ !