ಕಚ್ : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯಿಂದ ಮಾಹಿತಿ ಪಡೆದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಮುಂದ್ರಾ ಬಂದರಿನಲ್ಲಿರುವ ಸೀಬರ್ಡ್ ಸಿಎಫ್‌ಎಸ್‌ನಲ್ಲಿ ಕಂಟೈನರ್‌ಗಳನ್ನು ತಡೆಹಿಡಿಯಲಾಗಿದೆ.
ಈ ಸಂದರ್ಭದಲ್ಲಿ ಗಸಗಸೆ ಬೀಜಗಳು ಪತ್ತೆಯಾಗಿವೆ. ಒಟ್ಟು 25 ಕೆಜಿ ತೂಕದ 1000 ಮೂಟೆಗಳು ಪತ್ತೆಯಾಗಿದ್ದು, ಮಾರುಕಟ್ಟೆಯಲ್ಲಿ ಇದರ ಮೌಲ್ಯ 3.5 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಗಸಗಸೆಯ ವೈಜ್ಞಾನಿಕ ಹೆಸರು ಪಾಪವರ್ ಸೋಮ್ನಿಫೆರಮ್ ಎನ್ನಲಾಗ್ತಿದೆ. ಇದನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಮಾದಕವಸ್ತು ಎಂದು ನಿಷೇಧಿಸಲಾಗಿದೆ.
ಓದಿ: ಬಿಬಿಎಂಪಿ ಚುನಾವಣೆಗೆ ತಾಲೀಮು: ಸಿಎಂ ನಿವಾಸದಲ್ಲಿ ಮಹತ್ವದ ಸಭೆ..!
ಭಾರತವು ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್, ಚೀನಾ, ಸ್ಪೇನ್ ಮತ್ತು ಫ್ರಾನ್ಸ್‌ನಂತಹ ದೇಶಗಳಿಂದ ಗಸಗಸೆ ಬೀಜಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿಯೂ ಗಸಗಸೆ ಬೀಜಗಳನ್ನು ಪರೋಕ್ಷವಾಗಿ ಮಾದಕ ವಸ್ತು ಎಂದು ಪರಿಗಣಿಸಲಾಗುತ್ತದೆ.
ಆದ್ದರಿಂದ, ಅದರ ಆಮದು ಮಾಡಿಕೊಳ್ಳಲು ಗ್ವಾಲಿಯರ್‌ನಲ್ಲಿರುವ ನಾರ್ಕೋಟಿಕ್ಸ್ ಕಮಿಷನರ್ ಅವರ ಪೂರ್ವಾನುಮತಿ ಅಗತ್ಯ ಮತ್ತು ಆಮದುದಾರರು ಮಾದಕ ದ್ರವ್ಯ ಇಲಾಖೆಯಲ್ಲಿ ನೋಂದಾಯಿಸಿದ ನಂತರ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮೂಲಗಳ ಪ್ರಕಾರ, ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ ಗಸಗಸೆ ಪ್ರಮಾಣಕ್ಕೆ, ದೆಹಲಿ ಕಂಟೈನರ್ ಡಿಪೋದಲ್ಲಿ ನೋಂದಾಯಿಸಲಾದ ಆಮದುದಾರ ಕಂಪನಿಯು ಗಸಗಸೆ ಆಮದು ಮಾಡಿಕೊಳ್ಳಲು ಯಾವುದೇ ಅನುಮತಿಯನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಓದಿ: 19 ಐಎಎಸ್ ಅಧಿಕಾರಿಗಳ ವರ್ಗಾವಣೆ..
ಗಸಗಸೆ ಬೀಜಗಳ ಪ್ರಮಾಣವನ್ನು ಕಂಟೈನರ್‌ನಲ್ಲಿ ಅಡಗಿಸಿಟ್ಟ ರೀತಿಯಲ್ಲಿ ಅದನ್ನು ಕಳ್ಳಸಾಗಣೆ ಮಾಡುವ ಉದ್ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಸೂಚಿಸುತ್ತದೆ. ಆದ್ದರಿಂದ, ಒಂದು ವಾರದಲ್ಲಿ ಎರಡನೇ ಬಾರಿಗೆ, ಎನ್‌ಸಿಬಿಯಿಂದ ಮಾಹಿತಿಗಳ ಆಧಾರದ ಮೇಲೆ ಮಾದಕವಸ್ತು ಕಳ್ಳಸಾಗಣೆಯನ್ನು ಹಿಡಿಯಲಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ವಿದೇಶದಿಂದ ಯಾವುದೇ ವಸ್ತುವನ್ನು ಸಮುದ್ರದ ಮೂಲಕ ಆಮದು ಮಾಡಿಕೊಳ್ಳಲು, ಆಮದು ಮಾಡಿಕೊಳ್ಳುವ ಕಂಪನಿಯು ದೆಹಲಿಯ ಕಂಟೈನರ್ ಡಿಪೋದಿಂದ ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿಂದ ಆಮದು ಮಾಡಿಕೊಳ್ಳುವ ಕಂಪನಿಯು ಅನುಮೋದನೆಯ ನಂತರವೇ ಏನನ್ನಾದರೂ ಆಮದು ಮಾಡಿಕೊಳ್ಳಬಹುದು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ