ರಾಜ್ಕೋಟ್(ಗುಜರಾತ್): ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ತಮ್ಮ ಕನಸಿನ ನೌಕರಿ ಗಿಟ್ಟಿಸಿಕೊಳ್ಳಲು ಉದ್ಯೋಗಾಕಾಂಕ್ಷಿಗಳು ತಯಾರಿ ನಡೆಸಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದಾರೆ.
ಆದರೆ, ಇದರ ಮಧ್ಯೆ ರಾಜ್ಕೋಟ್ನ ಮಹಿಳೆಯೋರ್ವಳು ಯಾವುದೇ ರೀತಿಯ ಲಿಖಿತ ಪರೀಕ್ಷೆಯೂ ಇಲ್ಲದೇ ನೇರವಾಗಿ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ ಕೆಲಸ ನೀಡುವುದಾಗಿ ಭರವಸೆ ನೀಡಿರುವ ಮಹಿಳೆ 12 ಅಭ್ಯರ್ಥಿಗಳಿಂದ ತಲಾ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಪಂಜಾಬ್ ವಿಧಾನಸಭೆ ಎಲೆಕ್ಷನ್ ಮುಂದೂಡಿಕೆ: ಹೊಸ ಡೇಟ್ ಘೋಷಿಸಿದ ಚು.ಆಯೋಗ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಕೋಟ್ನ ಯುವತಿ ಕೃಷ್ಣ ಭಾರದ್ವಾ ಹಾಗೂ ಆಕೆಯ ಸಹಚರ ಜಾನಿಸ್ ಪರ್ಸಾನಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃಷ್ಣಾ ಭಾರದ್ವಾ ರಾಜಕೀಯ ಮುಖಂಡರೊಬ್ಬರ ಸೊಸೆ ಎಂದು ತಿಳಿದು ಬಂದಿದೆ.