ETV Bharat / bharat

ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕೊಚ್ಚಿ ಹೋದ ನವದಂಪತಿ.. ರಕ್ಷಿಸಲು ಹೋದ ಮೂವರ ದುರ್ಮರಣ - ಸೂರತ್​

ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನವದಂಪತಿ ನೀರು ಪಾಲಾಗಿದ್ದು, ರಕ್ಷಿಸಲು ಹೋದ ಮೂವರೂ ಮೃತಪಟ್ಟಿರುವ ಘಟನೆ ಸೂರತ್​ನಲ್ಲಿ ನಡೆದಿದೆ.

ಮೂವರು ದುರ್ಮರಣ
ಮೂವರು ದುರ್ಮರಣ
author img

By

Published : Sep 2, 2021, 7:27 AM IST

ಸೂರತ್(ಗುಜರಾತ್​​): ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನವದಂಪತಿ ನೀರುಪಾಲಾಗಿದ್ದು, ಅವರನ್ನು ರಕ್ಷಿಸಲು ತೆರಳಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ ಮಹುವಾ ತಾಲೂಕಿನ ಕುಮಕೋಟಾರ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹೊಸದಾಗಿ ಮದುವೆಯಾದ ಹಿನ್ನೆಲೆ, ಸೂರತ್​ ಮೂಲದ ದಂಪತಿ ಸೇರಿ ಕುಟುಂಬದ 10 ಮಂದಿ ದರ್ಗಾಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಈ ವೇಳೆ, ಅಂಬಿಕಾ ನದಿಯಲ್ಲಿ ನವಜೋಡಿ ಹಾಗೂ ಐವರು ಸ್ನಾನ ಮಾಡುತ್ತಿದ್ದರು. ನೀರಿನ ಸುಳಿಗೆ ಸಿಲುಕಿ ದಂಪತಿ ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಿಸಲು ಐವರು ನೀರಿಗೆ ಧುಮುಕಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಿಸಿದ್ದು, ಮೂವರು ಮೃತಪಟ್ಟಿದ್ದಾರೆ. ನಾಪತ್ತೆಯಾದ ದಂಪತಿ ಈವರೆಗೆ ಪತ್ತೆಯಾಗಿಲ್ಲ ಎಂದು ಮಹುವಾ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಬಿ.ಎಸ್.ಗಮಿತ್ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್ ದಂಧೆ : Is it offence in India ಎಂದು ಪೊಲೀಸರಿಗೇ ಪ್ರಶ್ನಿಸಿದ ಸೋನಿಯಾ

ಈ ಹಿಂದೆಯೂ ಈ ನದಿಯಲ್ಲಿ ಇಂಥ ದುರ್ಘಟನೆಗಳು ಸಂಭವಿಸಿವೆ. ಆದ್ದರಿಂದ ಅಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ, ನೀರಿಗೆ ಇಳಿಯದಂತೆ ಎಚ್ಚರಿಕೆಯ ಬೋರ್ಡ್​ ಹಾಕಲಾಗಿದೆ. ಆದರೂ, ಕೆಲವರು ಎಚ್ಚರಿಕೆ ನಿರ್ಲಕ್ಷಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.