ಮುಂಬೈ: ಇಲ್ಲಿನ ಝವೇರಿ ಬಜಾರ್ ಪ್ರದೇಶದಲ್ಲಿ ಜಿಎಸ್‌ಟಿ ಇಲಾಖೆ ನಡೆಸಿದ ದಾಳಿಯಲ್ಲಿ 9 ಕೋಟಿ 78 ಲಕ್ಷ ರೂಪಾಯಿ ನಗದು ಮತ್ತು 19 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೆಸರ್ಸ್ ಚಾಮುಂಡ ಬುಲಿಯನ್ ಕಂಪನಿ ಮೇಲೆ ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
-
Maharashtra GST Department seized silver bricks weighing 19 kgs and Rs 9.78 crores in cash hidden in wall & floor cavities at the premises of Chamunda Bullion Company, Zaveri Bazaar, Mumbai, yesterday. The premises of the company has been sealed. pic.twitter.com/X1vIbhchft
— ANI (@ANI) April 23, 2022 " class="align-text-top noRightClick twitterSection" data="
">Maharashtra GST Department seized silver bricks weighing 19 kgs and Rs 9.78 crores in cash hidden in wall & floor cavities at the premises of Chamunda Bullion Company, Zaveri Bazaar, Mumbai, yesterday. The premises of the company has been sealed. pic.twitter.com/X1vIbhchft
— ANI (@ANI) April 23, 2022Maharashtra GST Department seized silver bricks weighing 19 kgs and Rs 9.78 crores in cash hidden in wall & floor cavities at the premises of Chamunda Bullion Company, Zaveri Bazaar, Mumbai, yesterday. The premises of the company has been sealed. pic.twitter.com/X1vIbhchft
— ANI (@ANI) April 23, 2022
ಝವೇರಿ ಬಜಾರ್ ಪ್ರದೇಶದಲ್ಲಿ ಸಂದೇಶ ಚಾಮುಂಡಾ ಬುಲಿಯನ್ ಕಂಪನಿ ಇದೆ. ಕಂಪನಿಯ ವಹಿವಾಟು 2019-20ರಲ್ಲಿ 22.3 ಕೋಟಿ ರೂ., 2020-21ರಲ್ಲಿ ರೂ.652 ಕೋಟಿ ಮತ್ತು 2021-22ರಲ್ಲಿ ರೂ.1764 ಕೋಟಿಗೆ ಏರಿಕೆಯಾಗಿದೆ. ಈ ವಿಷಯ ತಿಳಿದ ಜಿಎಸ್‌ಟಿ ಇಲಾಖೆ ಶುಕ್ರವಾರ ತಡರಾತ್ರಿ ಕಂಪನಿ ಮೇಲೆ ದಾಳಿ ನಡೆಸಿದೆ.
ಓದಿ: ಪಿಯೂಷ್ ಜೈನ್ ಮನೆಯಲ್ಲಿ ಸಿಕ್ಕಿದ್ದು 150 ಕೋಟಿ ಅಲ್ಲ..ಬರೋಬ್ಬರಿ 177 ಕೋಟಿ ರೂ. ನಗದು: ಇಂದೂ ದಾಳಿ ಮುಂದುವರಿಕೆ
ಇದೇ ವೇಳೆ 34 ಚದರ ಮೀಟರ್ ಪ್ರದೇಶದಲ್ಲಿ 9 ಕೋಟಿ 78 ಲಕ್ಷ ನಗದು ಹಾಗೂ ಗೋಡೆ ಮತ್ತು ನೆಲದ ಕುಳಿಗಳಲ್ಲಿ ಬಚ್ಚಿಟ್ಟಿದ್ದ 19 ಕೆಜಿ ಬೆಳ್ಳಿಯ ಇಟ್ಟಿಗೆಗಳನ್ನು ಇಲಾಖೆ ವಶಪಡಿಸಿಕೊಂಡಿದೆ. ರಾಹುಲ್ ದ್ವಿವೇದಿ, ರಾಜ್ಯ ಜಿಎಸ್‌ಟಿ ಇಲಾಖೆಯ ಸಹಾಯಕ ಆಯುಕ್ತ ವಿನೋದ್ ದೇಸಾಯಿ ಅವರ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಕಂಪನಿಯ ಆವರಣವನ್ನು ಸೀಲ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.