ETV Bharat / bharat

ತಾಳಿ ಕಟ್ಟುವ ಮೊದಲು ಮದುವೆ ಒಲ್ಲೆ ಎಂದ ವರ: ಬಳಿಕ ಮದುವೆಯನ್ನೇ ಕ್ಯಾನ್ಸಲ್​ ಮಾಡಿದ ವಧುವಿನ ತಂದೆ! - ಕೋಪಗೊಂಡ ವರನ ಕುಟುಂಬಸ್ಥರು ಮದುವೆಗೆ ನಿರಾಕರಣೆ

ತೆಲಂಗಾಣದಲ್ಲಿ ವಿವಾಹ ರದ್ದು - ಹಾಸಿಗೆಯ ವಿಚಾರಕ್ಕಾಗಿ ಮುರಿದು ಬಿದ್ದ ಮದುವೆ - ವರನಿಗೆ ಹಳೆಯ ಹಾಸಿಗೆ ಕೊಟ್ಟ ವಧು ಕುಟುಂಬಸ್ಥರು - ಹಳೆ ಹಾಸಿಗೆ ವಿಚಾರಕ್ಕೆ ಮದುವೆ ರದ್ದು

groom-refuse-to-marriage
ತಾಳಿ ಕಟ್ಟುವ ಮೊದಲು ಮದುವೆ ಒಲ್ಲೆ ಎಂದ ವರ
author img

By

Published : Feb 20, 2023, 1:50 PM IST

Updated : Feb 21, 2023, 1:04 PM IST

ಕೇಶವಗಿರಿ(ತೆಲಂಗಾಣ): ವಿವಾಹ ಎಂಬುದು ಪವಿತ್ರ ಬಂಧ. ಅದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. ಇಂತಹ ಪವಿತ್ರ ಕಾರ್ಯ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆದರೆ, ಈ ಮಧ್ಯೆ ಯಾವ್ಯಾವುದೋ ಚಿಕ್ಕಪುಟ್ಟ ಕಾರಣಗಳಿಗಾಗಿ ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಮುರಿದು ಬೀಳುತ್ತಿವೆ. ತೆಲಂಗಾಣದಲ್ಲೂ ಇಂಥದ್ದೇ ಅಚಾತುರ್ಯ ನಡೆದಿದೆ. ಇದಕ್ಕೆ ಕಾರಣ ಮಾತ್ರ ಕ್ಷುಲ್ಲಕ. ಓದಿದರೆ ನಿಮಗೇ ನಗು ಬರಬಹುದು. ಅದೇನಪ್ಪಾ ಅಂತೀರಾ? ಮುಂದೆ ಓದಿ.

ಹೈದರಾಬಾದ್​ನ ನಿವಾಸಿಯಾದ ಖಾಸಗಿ ಶಾಲಾ ಬಸ್​ ಚಾಲಕ ಮೌಲಾಲಿಯಾ ಮೊಹಮದ್​ ಜಕಾರಿಯಾ ಎಂಬಾತನಿಗೆ ಬಂಡ್ಲಗುಡದ ಹುಡುಗಿಯೊಂದಿಗೆ ಫೆ.13 ನೇ ತಾರೀಖಿನಂದು ನಿಶ್ಚಿತಾರ್ಥವಾಗಿತ್ತು. ನಿನ್ನೆ (19 ರಂದು) ಮಧ್ಯಾಹ್ನ ಸ್ಥಳೀಯ ಮಸೀದಿಯೊಂದರಲ್ಲಿ ವಿವಾಹ ನಡೆಯಬೇಕಿತ್ತು. ಅದಕ್ಕೂ ಮೊದಲೇ ನೋಡಿ ನಡೀತು ಕಿರಿಕ್​.

ಸಂಪ್ರದಾಯದಂತೆ ವರನಿಗೆ ನೀಡಬೇಕಾದ ಹಾಸಿಗೆ, ಪೀಠೋಪಕರಣಗಳನ್ನು ಅವರ ಮನೆಗೆ ಕಳುಹಿಸಲಾಗಿದೆ. ಈ ವೇಳೆ ಪೀಠೋಪಕರಣಗಳಿಗೆ ಹಾನಿಯಾಗಿತ್ತು. ಅಲ್ಲದೇ ಹಾಸಿಗೆಗಳು ಹಳೆಯದಾಗಿದ್ದು, ಅವುಗಳಿಗೆ ಬಣ್ಣ ಬಳಿದ ಬಗ್ಗೆ ವರನ ಮನೆಯಲ್ಲಿ ಅನುಮಾನ ಬಂದಿದೆ. ಪರಿಶೀಲಿಸಿದಾಗ ಅವುಗಳು ಹಳೆಯ ವಸ್ತುಗಳು ಎಂದು ಗೊತ್ತಾಗಿದೆ. ಇದರಿಂದ ಕೋಪಗೊಂಡ ವರನ ಕುಟುಂಬಸ್ಥರು ಮದುವೆಗೆ ನಿರಾಕರಣೆ ಮಾಡಿದ್ದಾರೆ.

ನಿಖಾ ಕಾರ್ಯಕ್ರಮಕ್ಕೆ ವಧುವಿನ ಕಡೆಯವರು ಮಸೀದಿಗೆ ಬಂದರೂ ವರನ ಕಡೆಯವರು ಬಂದಿರಲಿಲ್ಲ. ಇದರಿಂದ ಅನುಮಾನ ಬಂದ ವಧುವಿನ ತಂದೆ ಅವರ ಮನೆಗೆ ಬಂದು ವಿಚಾರಿಸಿದಾಗ ಹಳೆಯ ಹಾಸಿಗೆಯ ಕಾರಣಕ್ಕೆ ಜಗಳ ತೆಗೆದಿದ್ದಾರೆ. ಹಳೆ ಹಾಸಿಗೆಗಳನ್ನು ನೀಡಿ ಮೋಸ ಮಾಡಿದ್ದೀರಿ ಎಂದು ವರ ಮಹಾಶಯ ವಧುವಿನ ತಂದೆಯೊಂದಿಗೆ ವಾಗ್ವಾದ ಮಾಡಿದ್ದಾನೆ. ತಂದೆ ಸಮಜಾಯಿಷಿ ಕೊಟ್ಟರೂ ವರನ ಕೋಪ ಕಡಿಮೆಯಾಗಿಲ್ಲ. ಇದಕ್ಕೆ ಬೆಂಬಲವಾಗಿ ಕುಟುಂಬಸ್ಥರೂ ವಾಗ್ವಾದ ನಡೆಸಿದ್ದಾರೆ.

ಕೊನೆಗೆ ವರ ಮದುವೆಗೆ ಬರುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಆಗ ವಧುವಿನ ತಂದೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಧಾನಕ್ಕೆ ತೆರಳಿದ್ದಾರೆ. ಉಭಯ ಕುಟುಂಬಸ್ಥರ ಮಧ್ಯೆ ಮಾತುಕತೆ ನಡೆಸಿದ್ದಾರೆ. ಕೊನೆಗೆ ವರ ಮದುವೆಗೆ ಒಪ್ಪಿಕೊಂಡಿದ್ದಾನೆ. ಆದರೆ, ವಧುವಿನ ತಂದೆ ಉಲ್ಟಾ ಹೊಡೆದು ಮದುವೆಯನ್ನು ರದ್ದು ಮಾಡಿದ್ದಾರೆ. ಅಲ್ಲದೇ, ವರನ ವಿರುದ್ಧ ಅವರೂ ದೂರು ನೀಡಿದ್ದಾರೆ. ಅಲ್ಲಿಗೆ ಸುಖಾಂತ್ಯ ಕಾಣಬೇಕಿದ್ದ ಮದುಗೆ ಕಿತ್ತಾಟದಲ್ಲಿ ಅಂತ್ಯವಾಗಿ, ಪರಸ್ಪರ ಕೇಸ್​ ದಾಖಲಿಸಿದ್ದಾರೆ.

ಸಂಭ್ರಮದಲ್ಲಿ ಶೋಕ: ಉತ್ತರಪ್ರದೇಶದಲ್ಲಿ ಸಂಭ್ರಮಾಚರಣೆಯ ಮಧ್ಯೆ ದುಖಃಕರ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಪ್ರಯಾಗ್​ರಾಜ್​ನಲ್ಲಿ ವ್ಯಕ್ತಿಯೊಬ್ಬರ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕುಟುಂಬಸ್ಥರು ಸೇರಿದಂತೆ ಅತಿಥಿಗಳು ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ 46 ವರ್ಷದ ಅಮರದೀಪ್ ವರ್ಮಾ ಎಂಬಾತ ನೃತ್ಯ ಮಾಡುತ್ತಲೇ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದಿದ್ದರು.

ಅಣ್ಣನ ವಿವಾಹ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ತಮ್ಮನ ಜೊತೆಗೆ ಆತನ ಪತ್ನಿಯೂ ತೆರಳಿದ್ದರು. ಸಂಭ್ರಮದಲ್ಲಿದ್ದ ಜನರು ಹಠಾತ್ತನೆ ನಡೆದ ಘಟನೆಯಿಂದ ಕಕ್ಕಾಬಿಕ್ಕಿಯಾದರು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವ್ಯಕ್ತಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಇದರಿಂದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಶೋಕ ಮಡುಗುಟ್ಟಿತ್ತು. ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಲೇ ಆತ ಕುಸಿದು ಬೀಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಓದಿ: ವಿವಾಹ ಮಹೋತ್ಸವದಲ್ಲಿ ಚಂಡೆ ಬಾರಿಸಿ ಸಂಭ್ರಮಿಸಿದ ಮಧುಮಗಳು.. ವಿಡಿಯೋ ನೋಡಿ

Last Updated : Feb 21, 2023, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.