ETV Bharat / bharat

ಎರಡನೇ ವಿವಾಹವಾಗುತ್ತಿದ್ದ ಪತಿರಾಯ.. ಗಂಡನಿಗೆ ಭರ್ಜರಿ ಗಿಫ್ಟ್​ ಕೊಟ್ಟಳು ಮೊದಲ ಪತ್ನಿ! - ಮೊದಲ ಹೆಂಡತಿಯಿಂದ ಮದುವೆಯಾಗಲು ಹೊರಟಿದ್ದ ವ್ಯಕ್ತಿಗೆ ಥಳಿತ

ಎರಡನೇ ಮದುವೆಯಾಗಲು ಮುಂದಾಗಿದ್ದ ವ್ಯಕ್ತಿಗೆ ತೀವ್ರವಾಗಿ ಥಳಿಸಲಾಗಿದೆ. ಶಿವನಾರಾಯಣ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರ ವಿರುದ್ಧ ದೂರು ದಾಖಲಾಗಿದೆ.

ಜಂಜಗಿರ್ ಚಂಪಾದಲ್ಲಿ ಎರಡನೇ ವಿವಾಹವಾಗುತ್ತಿದ್ದ ಪತಿರಾಯನಿಗೆ ಬಿತ್ತು ಗೂಸಾ

author img

By

Published : Apr 4, 2022, 7:11 PM IST

ಜಂಜಗಿರ್ ಚಂಪಾ (ಛತ್ತೀಸ್​​ಘಡ) : ಮೊದಲನೇ ಪತ್ನಿಗೆ ಕೈಕೊಟ್ಟು ಸದ್ದಿಲ್ಲದೆ ಮದುವೆಯಾಗುತ್ತಿದ್ದ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಲಾಗಿದೆ. ಮದುವೆ ಮಂಟಪಕ್ಕೆ ಆಗಮಿಸಿದ ಮೊದಲ ಪತ್ನಿ ಗಂಡನಿಗೆ ಭರ್ಜರಿ ಗಿಫ್ಟ್​​ ಕೊಟ್ಟಿದ್ದಾಳೆ. ಹೌದು, ಜಂಜಗಿರ್ ಚಂಪಾದಲ್ಲಿ ವರನ ಮೇಲೆ ತೀವ್ರವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಈ ಘಟನೆ ಭಾನುವಾರ ಶಿವನಾರಾಯಣ ಬಡೇಮಠ ದೇವಸ್ಥಾನದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ.

ಬಲೋಡಾ ಬಜಾರ್ ನಿವಾಸಿ ಸೋಮ್ ಪ್ರಕಾಶ್ ಜೈಸ್ವಾಲ್ ಎಂಬುವರ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಆಗ ಮೊದಲ ಪತ್ನಿ ತನ್ನ ತಾಯಿಯ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದಾದ ನಂತರ ಎರಡೂ ಕಡೆಯವರಿಂದಲೂ ಮಾತಿನ ಚಕಮಕಿ ನಡೆದಿದ್ದು, ಎರಡೂ ಕುಟುಂಬದವರು ಶಿವನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದಾರೆ.

ಎರಡನೇ ವಿವಾಹವಾಗುತ್ತಿದ್ದ ಪತಿರಾಯನಿಗೆ ಥಳಿತ

ಇದನ್ನೂ ಓದಿ: ತನ್ನ ಎಲ್ಲಾ ಆಸ್ತಿಯನ್ನು ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಮಹಿಳೆ: ಕಾರಣ ಇಷ್ಟೇ..!

2017 ರ ಮೇ 7 ರಂದು ಬಲೋಡಾಬಜಾರ್ ನಿವಾಸಿ ಸೋಮ್ ಪ್ರಕಾಶ್ ಜೈಸ್ವಾಲ್ ಅವರನ್ನು ಈ ಮಹಿಳೆ ವಿವಾಹವಾಗಿದ್ದಳಂತೆ. ನಂತರ ಆಕೆಯ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ ಪರಿಣಾಮ ಮದುವೆಯಾದ ಒಂದು ತಿಂಗಳ ನಂತರ ಆಕೆ ತಾಯಿ ಮನೆ ಸೇರಿದ್ದಳೆ. ಇಷ್ಟಕ್ಕೆ ಸುಮ್ಮನಾಗದ ಜೈಸ್ವಾಲ್ 2 ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ತಂದ ನಂತರವೇ ಮನೆಗೆ ಬರುವಂತೆ ತಾಕೀತು ಮಾಡಿದ್ದರಂತೆ. ಇದೆಲ್ಲದರ ನಡುವೆ ಈಗ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗುತ್ತಿರುವುದು ತಿಳಿದುಬಂದಾಗ ಈ ಘಟನೆ ನಡೆದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.