ETV Bharat / bharat

ಕಾಶ್ಮೀರದ ಎಸ್​ಎಸ್​ಬಿ ಕ್ಯಾಂಪ್​ ಮೇಲೆ ಉಗ್ರರಿಂದ ಗ್ರೆನೇಡ್​​ ದಾಳಿ - ಸಶಸ್ತ್ರ ಸೀಮಾ ಬಲದ ಕಾರ್ಯಾಚರಣೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಎಸ್​ಎಸ್​ಬಿ ಕ್ಯಾಂಪ್​ ಮೇಲೆ ಗ್ರೆನೇಡ್​ ಎಸೆದು ಭಯೋತ್ಪಾದಕರು ಪರಾರಿಯಾಗಿದ್ದಾರೆ.

Grenade attack
ಗ್ರೆನೇಡ್ ದಾಳಿ
author img

By

Published : Jan 2, 2021, 3:59 AM IST

ಶ್ರೀನಗರ (ಜಮ್ಮು ಕಾಶ್ಮೀರ): ಸಶಸ್ತ್ರ ಸೀಮಾ ಬಲ (ಎಸ್ಎಸ್​ಬಿ) ಕ್ಯಾಂಪ್​ ಮೇಲೆ ಭಯೋತ್ಪಾದಕರು ಗ್ರೆನೇಡ್​ ಎಸೆದು ಪರಾರಿಯಾಗಿರುವ ಘಟನೆ ಶ್ರೀನಗರದ ಚನಪೋರಾ ಎಂಬಲ್ಲಿ ನಡೆದಿದೆ.

ಎಸ್​ಎಸ್​ಬಿಯ 14 ಬೆಟಾಲಿಯನ್ ಮೇಲೆ ಶುಕ್ರವಾರ ಸಂಜೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಭಯೋತ್ಪಾದಕರ ಹಣಕಾಸಿನ ನೆರವಿಗೆ ಅಮೆರಿಕ ನಾಕಾಬಂದಿ: ಪಾಕ್ ಸೆರಗಿನ ಉಗ್ರರು ವಿಲವಿಲ!

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಆಗಾಗ ದಾಳಿಗಳು ಹಾಗೂ ಎನ್​ಕೌಂಟರ್​ಗಳು ಸಾಮಾನ್ಯ ಎಂಬುವಷ್ಟರ ಮಟ್ಟಿಗೆ ನಡೆಯುತ್ತಿವೆ. ಭಯೋತ್ಪಾದನೆ ತಡೆಯಲು ಸೇನೆ ಹಗಲಿರುಳೂ ಶ್ರಮಿಸುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಹೋದರರಾದ ಇಬ್ಬರು ಭಯೋತ್ಪಾದಕರನ್ನು ಸೆರೆ ಹಿಡಿದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.