ಬೆಂಗಳೂರು: ಈ ನವೆಂಬರ್‌ನಲ್ಲಿ ದೇಶದ ದಕ್ಷಿಣದ ಮೂರು ಪ್ರಮುಖ ನಗರಗಳಲ್ಲಿ (ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ) ಗಾಳಿಯ ಗುಣಮಟ್ಟವು ನವೆಂಬರ್ 2019ಕ್ಕೆ ಹೋಲಿಸಿದರೆ ಉತ್ತಮವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಹಿತಿಯನ್ನು ಇತ್ತೀಚೆಗೆ ಗ್ರೀನ್‌ಪೀಸ್ ಇಂಡಿಯಾ ಬಹಿರಂಗಪಡಿಸಿದೆ.
ಗುಣಮಟ್ಟ ಪಿಎಂ(ಪಾರ್ಟಿಕ್ಯುಲೇಟೆಡ್ ಮ್ಯಾಟರ್ 2.5ಗೆ ಇಳಿಕೆಯಾಗಿದ್ದು, ಹೊರಸೂಸುವಿಕೆಯ ಮಿತಿ ಶೇ.16 ರಿಂದ 37 ರವರೆಗಿದೆ. ಆದ್ರೆ ಈ ಮೂರು ನಗರಗಳಲ್ಲಿ ಗಾಳಿಯ ಗುಣಮಟ್ಟ WHO ಮಾನದಂಡಗಳಿಗೆ ಹೋಲಿಸಿದರೆ (25μg / m3) ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಈ ನವೆಂಬರ್‌ನಲ್ಲಿ ದಾಖಲಾದ ಪಿಎಂ 2.5 ರ ಸರಾಸರಿ ಸಾಂದ್ರತೆಯು 2019 ರ ನವೆಂಬರ್‌ನಲ್ಲಿ 40.33μg / m3 ಗೆ ಹೋಲಿಸಿದರೆ 33.49μg / m3 ಇತ್ತು. ಪಿಎಂ 2.5 ನ ಸರಾಸರಿ ಸಾಂದ್ರತೆಯು ಶೇ.16.96 ರಷ್ಟು ಕಡಿಮೆಯಾಗಿದೆ. ಬಾಪುಜಿ ನಗರ ಮತ್ತು ಜಯನಗರ ಕ್ರಮವಾಗಿ 42μg / m3 ಮತ್ತು 39μg / m3 ಹೊಂದಿದ್ದು, ಪಿಎಂ 2.5 ಸಾಂದ್ರತೆಯೊಂದಿಗೆ ಹಾಟ್‌ಸ್ಪಾಟ್‌ಗಳಾಗಿ ಉಳಿದಿದೆ. ವಿಶ್ಲೇಷಣೆಯ ಪ್ರಕಾರ, 2020 ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕೇವಲ 12 ದಿನಗಳಲ್ಲಿ ಮಾತ್ರ ಈ ಸಾಂದ್ರತೆ ದಾಖಲಾಗಿದೆ. ಅಲ್ಲಿ ಪಿಎಂ 2.5 ಸಾಂದ್ರತೆಯು ನಿಗದಿತ WHO ಮಾನದಂಡಗಳ ಅಡಿಯಲ್ಲಿ ಉಳಿದಿದೆ.
ಹೈದರಾಬಾದ್‌ನಲ್ಲಿ ಪಿಎಂ 2.5 ನ ಸರಾಸರಿಯ ಸಾಂದ್ರತೆಯು ಶೇ.17.88ರಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು ಇದೇ ಅವಧಿಯಲ್ಲಿ 68.58μg / m3 ಗೆ ಹೋಲಿಸಿದರೆ ಈ ನವೆಂಬರ್‌ನಲ್ಲಿ ಪಿಎಂ 2.5 ರ ಸರಾಸರಿ ಸಾಂದ್ರತೆಯು 56.32μg / m3 ಆಗಿತ್ತು. ಸನತ್‌ನಗರ ಮತ್ತು ಝೂ ಪಾರ್ಕ್‌ನಲ್ಲಿ ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರ ಗರಿಷ್ಠ ಸರಾಸರಿ ಪಿಎಂ 2.5 ನನ್ನು ದಾಖಲಿಸಿದೆ. ಇಡೀ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಒಂದು ದಿನ ಈ ಸಾಂದ್ರತೆ ದಾಖಲಾಗಿದೆ. ಅಲ್ಲಿ ನಗರದ ಗಾಳಿಯ ಗುಣಮಟ್ಟವು ನಿಗದಿತ ಪಿಎಂ 2.5 WHO ಮಾನದಂಡಕ್ಕೆ ಹೊಂದಿಕೆಯಾಗುತ್ತದೆ.
ಚೆನ್ನೈನ ವಾಯು ಗುಣಮಟ್ಟ ಹೈದರಾಬಾದ್ ಮತ್ತು ಬೆಂಗಳೂರಿಗಿಂತ ಉತ್ತಮವಾಗಿದೆ. ನವೆಂಬರ್ 2019 ರಲ್ಲಿ 54.75μg / m3 ಗೆ ಹೋಲಿಸಿದರೆ ಚೆನ್ನೈನ ಪಿಎಂ 2.5 ನ ಸರಾಸರಿ ಸಾಂದ್ರತೆಯು 34.11μg / m3 ಆಗಿತ್ತು. ಮನಾಲಿ ಚೆನ್ನೈನ ಅತ್ಯಂತ ಕೆಟ್ಟ ಕಲುಷಿತ ಪ್ರದೇಶವಾಗಿದೆ. ಐಕ್ಯೂಏರ್ ಏರ್ ವಿಷುಯಲ್ ಮತ್ತು ಗ್ರೀನ್‌ಪೀಸ್ ಆಗ್ನೇಯ ಏಷ್ಯಾ ಅಭಿವೃದ್ಧಿಪಡಿಸಿದ ಆನ್‌ಲೈನ್ ಸಮೀಕ್ಷೆ ಪ್ರಕಾರ, ಪಿಎಂ 2.5 ಮತ್ತು ನಂ.2 ರ ವಾಯುಮಾಲಿನ್ಯವು ಕ್ರಮವಾಗಿ 7577, 6228, ಮತ್ತು 6374 ಅಕಾಲಿಕ ಮರಣಗಳಿಗೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ 2020 ರ ಜನವರಿ 1 ರಿಂದ ಸೆಪ್ಟೆಂಬರ್ 4 ರವರೆಗೆ ಕಾರಣವಾಗಿದೆ.
ಓದಿ: 700 ಟ್ರ್ಯಾಕ್ಟರ್ಗಳಲ್ಲಿ ದೆಹಲಿಯತ್ತ ಹೊರಟ ಪಂಜಾಬ್ ರೈತರು..
ಗ್ರೀನ್‌ಪೀಸ್ ಇಂಡಿಯಾದ ವಿಶ್ಲೇಷಣಾ ಹವಾಮಾನ ಪ್ರಚಾರಕರ ಆವಿಷ್ಕಾರಗಳಿಗೆ ಪ್ರತಿಕ್ರಿಯಿಸಿದ ಅವಿನಾಶ್ ಚಂಚಲ್ ಅವರು, “ಕೈಗಾರಿಕೆಗಳಲ್ಲದೆ, ವಾಹನಗಳು ಈ ನಗರಗಳಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ನಗರ ಪ್ರದೇಶ ಮತ್ತು ಜನಸಂಖ್ಯೆಯ ವಿಸ್ತರಣೆ, ನಗರಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಳ, ಹೆಚ್ಚಿನ ವಾಹನಗಳನ್ನು ಹೊಂದುವುದು ಪ್ರಮುಖ ಕಾರಣವಾಗಿವೆ. "ಕಡಿಮೆ-ವೆಚ್ಚದ ನಗರ ಸಾರಿಗೆಯನ್ನು ಮರುವಿನ್ಯಾಸಗೊಳಿಸಬೇಕಾಗಿದೆ ಮತ್ತು ಇಂಗಾಲವನ್ನು ಹೊರಸೂಸುವ ವಾಹನಗಳು ಮತ್ತು ಹವಾಮಾನ ಬದಲಾವಣೆ ನಿಯಂತ್ರಿಸಲು ಕೆಲವು ಸೌಲಭ್ಯ ಮತ್ತು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ" ಎಂದು ಹೇಳಿದ್ದಾರೆ.
ಒಂದು ವೇಳೆ ವಾಯು ಗುಣಮಟ್ಟ ಪಿಎಂ 2.5 ಇದ್ದರೆ, ಹೃದಯರಕ್ತನಾಳದ ಕಾಯಿಲೆಗಳು, ಉಸಿರಾಟದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಾಯುಮಾಲಿನ್ಯವೂ ಸೋಂಕು ಹರಡುವುದನ್ನು ಹೆಚ್ಚಿಸುತ್ತದೆ, ಜೊತೆಗೆ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ.