ವರಂಗಲ್(ಆಂಧ್ರಪ್ರದೇಶ): 93 ವರ್ಷದ ವೃದ್ಧನ ಮೃತದೇಹವನ್ನ ಅಂತ್ಯಕ್ರಿಯೆ ನಡೆಸುವ ಬದಲು ಮನೆಯಲ್ಲಿದ್ದ ಫ್ರಿಡ್ಜ್ನಲ್ಲಿ ಮುಚ್ಚಿಟ್ಟಿರುವ ಘಟನೆ ಆಂಧ್ರಪ್ರದೇಶದ ವರಂಗಲ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ತಿಳಿಸಿರುವ ಪ್ರಕಾರ 93 ವರ್ಷದ ಬಾಲಯ್ಯ ನಿವೃತ್ತ ಕಾರ್ಮಿಕನಾಗಿದ್ದು, ಮೊಮ್ಮಗನೊಂದಿಗೆ ಪಿಂಚಣಿ ಹಣದೊಂದಿಗೆ ಜೀವನ ನಡೆಸುತ್ತಿದ್ದರು. ಅನಾರೋಗ್ಯದ ಕಾರಣ ಕಳೆದ ಮೂರು ದಿನಗಳ ಹಿಂದೆ ವೃದ್ಧ ಸಾವನ್ನಪ್ಪಿದ್ದು, ಈ ವೇಳೆ, ಆತನ ಮೃತದೇಹವನ್ನ ಮೊಮ್ಮಗ ಫ್ರಿಡ್ಜ್ನಲ್ಲಿ ಮುಚ್ಚಿಟ್ಟಿದ್ದಾನೆ. ಪಿಂಚಣಿಯಿಂದ ಬರುತ್ತಿದ್ದ ಹಣದಿಂದಲೇ ಬಾಲಯ್ಯ ಹಾಗೂ ಆತನ ಮೊಮ್ಮಗ ನಿಖಿಲ್ ಜೀವನ ಸಾಗಿಸುತ್ತಿದ್ದರು. ಇಬ್ಬರು ವರಂಗಲ್ ಗ್ರಾಮೀಣ ಭಾಗದ ಪರಕಾಲ ಎಂಬಲ್ಲಿ ವಾಸವಾಗಿದ್ದು, ಬಾಡಿಗೆ ಮನೆ ಪಡೆದುಕೊಂಡಿದ್ದರು.
![grandfather's dead body](https://etvbharatimages.akamaized.net/etvbharat/prod-images/12752360_thumbnad.jpg)
ಆದರೆ, ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಬಾಲಯ್ಯ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದು, ಆತನ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಮನೆಯಲ್ಲಿನ ಫ್ರಿಡ್ಜ್ನಲ್ಲಿ ಮೃತದೇಹ ಬಚ್ಚಿಟ್ಟಿದ್ದಾನೆ. ಮೂರು ದಿನಗಳ ನಂತರ ಕೆಟ್ಟ ವಾಸನೆ ಬರಲು ಶುರುವಾಗಿದೆ. ಈ ವೇಳೆ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ವೃದ್ಧನ ಮೃತದೇಹ ಸಿಕ್ಕಿದೆ. ಈ ವೇಳೆ ನಿಖಿಲ್ ಪ್ರಶ್ನೆ ಮಾಡಿದಾಗ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಿಖಿಲ್ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.