ಹೈದರಾಬಾದ್: ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲ್ಮ್ ಸಿಟಿ ಶುಕ್ರವಾರ(ಅ.8)ದಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಪ್ರವಾಸಿಗರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು.
ಹಲವಾರು ತಿಂಗಳುಗಳ ಕಟ್ಟುನಿಟ್ಟಾದ ಲಾಕ್ಡೌನ್ ಮತ್ತು ಪ್ರಯಾಣ ನಿರ್ಬಂಧಗಳ ಬಳಿಕ ಫಿಲ್ಮ್ ಸಿಟಿಗೆ ಶುಕ್ರವಾರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಶೂಟಿಂಗ್ ಸೆಟ್ಗಳು ಸೇರಿದಂತೆ ಫಿಲ್ಮ್ ಸಿಟಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಮೊದಲ ದಿನವೇ ಸಾವಿರಾರು ಜನರು ಆಗಮಿಸಿದ್ದು, ಸಖತ್ ಎಂಜಾಯ್ ಮಾಡಿದ್ರು.
ಸ್ವಚ್ಛತೆಗೆ ಮೊದಲ ಆದ್ಯತೆ
ಕೋವಿಡ್ ಭೀತಿ ಕಡಿಮೆಯಾಗಿದ್ದರೂ, ಫಿಲ್ಮ್ ಸಿಟಿಯ ಮನರಂಜನಾ ವಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಸಿಗರೆಲ್ಲರಿಗೂ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪ್ರವಾಸಿಗರ ಸಹಾಯಕ್ಕಾಗಿ ತರಬೇತಿ ಪಡೆದ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮನಸೂರೆಗೊಳ್ಳುತ್ತಿರುವ ಶೋಗಳು.. ಜನ ಸಾಗರ
ಕೊರೊನಾ ತಡೆಗಟ್ಟುವಿಕೆಯ ದೃಷ್ಟಿಯಿಂದ ಹಲವು ತಿಂಗಳಿಂದ ಫಿಲ್ಮ್ ಸಿಟಿಗೆ ನಿರ್ಬಂಧ ವಿಧಿಸಲಾಗಿತ್ತು. ಅ.8ರಿಂದ ಫಿಲ್ಮ್ ಸಿಟಿಯಲ್ಲಿ ಕಲಾವಿದರು ಮತ್ತೆ ಪ್ರದರ್ಶನ ನೀಡುತ್ತಿದ್ದಾರೆ. ಲೈವ್ ಡ್ಯಾನ್ಸ್, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಬ್ಲ್ಯಾಕ್‌ಲೈಟ್ ಶೋ- ಅನಿಮೇಷನ್ ಜನರ ಮನಸ್ಸನ್ನು ಸೂರೆಗೊಳಿಸುತ್ತಿವೆ.
ಸಂಪೂರ್ಣ ಸುರಕ್ಷತೆಯೊಂದಿಗೆ ಆರಂಭ
ಮಕ್ಕಳಿಗಾಗಿ ವಿಶೇಷ ಆಟದ ವಲಯಗಳನ್ನು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ. ದೊಡ್ಡ ಹಲಗೆಯಲ್ಲಿ ಹಾವು ಮತ್ತು ಏಣಿ, ಪಕ್ಷಿ ಪ್ರಭೇದಗಳನ್ನು ಹೊಂದಿರುವ ಪಕ್ಷಿ ಉದ್ಯಾನವನ, ಚಿಟ್ಟೆ ಉದ್ಯಾನವನವು ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.
ಕಲಾ ವೈಭವ ಸಂಭ್ರಮಿಸುತ್ತಿರುವ ಪ್ರವಾಸಿಗರು
ಪ್ರವಾಸಿಗರನ್ನು ವಿಂಟೇಜ್ ಬಸ್ಗಳಲ್ಲಿ ಸುತ್ತಾಡಿಸುತ್ತಿದ್ದು, ಐತಿಹಾಸಿಕ ಸ್ಮಾರಕಗಳು, ಬಾಹುಬಲಿ ಸಿನಿಮಾ ಸೆಟ್ಗಳನ್ನು ಸೇರಿ ಫಿಲ್ಮ್ ಸಿಟಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.