ETV Bharat / bharat

Sachin Tendulkar: ವಾಂಖೆಡೆಯಲ್ಲಿ 22 ಅಡಿ ಎತ್ತರದ ಸಚಿನ್​ ಪ್ರತಿಮೆ ಅನಾವರಣ.. ಮುಖ್ಯಮಂತ್ರಿ ಶಿಂಧೆ ಭಾಗಿ - ETV Bharath Karnataka

Grand statue of Sachin Tendulkar was inaugurated: ಮುಂಬೈನ ವಾಂಖೆಡೆ ಕ್ರಿಡಾಂಗಣದ ಸಚಿನ್​ ಸ್ಟಾಂಡ್​ ಪಕ್ಕದಲ್ಲಿ 22 ಅಡಿ ಎತ್ತರದ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಯಿತು.

Sachin Tendulkar
Sachin Tendulkar
author img

By ETV Bharat Karnataka Team

Published : Nov 1, 2023, 6:39 PM IST

Updated : Nov 1, 2023, 7:01 PM IST

ವಾಂಖೆಡೆಯಲ್ಲಿ 22 ಅಡಿ ಎತ್ತರದ ಸಚಿನ್​ ಪ್ರತಿಮೆ ಅನಾವರಣ

ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಅವರ ಗಾತ್ರದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪ್ರತಿಮೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಇಡೀ ಕುಟುಂಬದೊಂದಿಗೆ ಉಪಸ್ಥಿತರಿದ್ದರು.

22 ಅಡಿ ಎತ್ತರ: ಮುಂಬೈ ಕ್ರಿಕೆಟ್ ಸಂಸ್ಥೆಯು ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಪಕ್ಕದಲ್ಲಿ ಈ ಭವ್ಯವಾದ ಪ್ರತಿಮೆ ಸ್ಥಾಪಿಸಿದೆ. ಈ ಪ್ರತಿಮೆಯ ಎತ್ತರ ಸುಮಾರು 22 ಅಡಿ. ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಖಜಾಂಚಿ ಆಶಿಶ್ ಶೇಲಾರ್ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ಉಪಸ್ಥಿತರಿದ್ದರು.

ವಾಂಖೆಡೆ ಕ್ರೀಡಾಂಗಣ ಸಚಿನ್ ಅವರ ತವರು ಮೈದಾನ: ಸಚಿನ್ ಈ ವರ್ಷ 50 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಆದ್ದರಿಂದ ಈ ವರ್ಷದ ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ವಾಂಖೆಡೆ ಸ್ಟೇಡಿಯಂ ಸಚಿನ್ ಅವರ ಹೋಮ್ ಗ್ರೌಂಡ್ ಆಗಿರುವುದರಿಂದ ಈ ಸ್ಟೇಡಿಯಂನಲ್ಲಿ ಸಚಿನ್ ಅವರ ಭವ್ಯ ಪ್ರತಿಮೆ ಸ್ಥಾಪಿಸಬೇಕು ಎಂದು ಎಂಸಿಎ ನಿರ್ಧರಿಸಿದೆ.

ವಾಂಖೆಡೆ ಕ್ರೀಡಾಂಗಣ ಸಚಿನ್‌ಗೆ ವಿಶೇಷವಾಗಿದೆ: ವಾಂಖೆಡೆ ಕ್ರೀಡಾಂಗಣ ಸಚಿನ್‌ಗೆ ತುಂಬಾ ವಿಶೇಷವಾಗಿದೆ. ಅವರು ಈ ಮೈದಾನದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಏಪ್ರಿಲ್ 2, 2011 ರಂದು ಟೀಮ್​ ಇಂಡಿಯಾ ಇದೇ ಮೈದಾನದಲ್ಲಿ ಶ್ರೀಲಂಕಾ ಮಣಿಸಿ ಎರಡನೇ ವಿಶ್ವಕಪ್ ಅ​ನ್ನು ವಶಪಡಿಸಿಕೊಂಡಿತ್ತು. ಆ ಸಮಯದಲ್ಲಿ ಸಚಿನ್ ಅವರನ್ನು ತಂಡದ ಎಲ್ಲ ಆಟಗಾರರು ಇಡೀ ಮೈದಾನ ಹೊತ್ತು ತಿರುಗಿದ್ದರು. ಇದರೊಂದಿಗೆ ಸಚಿನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನೂ ಇಲ್ಲಿ ಆಡಿದ್ದರು. ನವೆಂಬರ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ನಂತರ ಸಚಿನ್ ವಾಂಖೆಡೆ ಸ್ಟೇಡಿಯಂನಲ್ಲಿಯೇ ತಮ್ಮ 24 ವರ್ಷಗಳ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದರು.

ನಾಳೆ ಪಂದ್ಯ: ನಾಳೆ ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ವಿಶ್ವಕಪ್​​ನ ತನ್ನ 7ನೇ ಪಂದ್ಯವನ್ನು ಆಡಲಿದೆ. ಈಗಾಗಲೇ ರೋಹಿತ್​ ಶರ್ಮಾ ಅವರ ನಾಯಕತ್ವದಲ್ಲಿ ಭಾರತ 6 ಪಂದ್ಯಗಳನ್ನು ಗೆದ್ದುಕೊಂಡು ಅಜೇಯವಾಗಿದೆ. ನಾಳೆ ಶ್ರೀಲಂಕಾ ವಿರುದ್ಧ ಗೆದ್ದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ಸೆಮೀಸ್​ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​​: ಡಿ ಕಾಕ್, ಡುಸ್ಸೆನ್ ಅಬ್ಬರದ ಶತಕ: ಕೀವೀಸ್​ಗೆ 358 ರನ್​ ಗುರಿ

Last Updated : Nov 1, 2023, 7:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.