ETV Bharat / bharat

RT-PCR, ಕ್ವಾರಂಟೈನ್​ ಕಡ್ಡಾಯವಲ್ಲ: ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ರಿಲೀಸ್​ - ಕೇಂದ್ರ ಆರೋಗ್ಯ ಇಲಾಖೆ

ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮಾರ್ಗಸೂಚಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, 7 ದಿನಗಳ ಹೋಂ ಕ್ವಾರಂಟೈನ್​ ತೆಗೆದುಹಾಕಲಾಗಿದೆ.

Govt's new Covid rules for international arrivals

author img

By

Published : Feb 11, 2022, 12:42 AM IST

ನವದೆಹಲಿ: ದೇಶದಲ್ಲಿ ಮೂರನೇ ಕೋವಿಡ್ ಅಲೆ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಕಾರಣ ಇದೀಗ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಪರಿಷ್ಕರಣೆ ಮಾಡಿದ್ದು, ಇದೀಗ ಹೊಸ ಪ್ರಕಟಣೆ ಹೊರಡಿಸಿದೆ.

ಹೊಸ ಮಾರ್ಗಸೂಚಿ ಫೆಬ್ರವರಿ 14ರಿಂದ ಜಾರಿಗೊಳ್ಳಲಿದ್ದು, ಹೊಸ ಮಾರ್ಗಸೂಚಿಗಳ ಪ್ರಕಾರ ವಿದೇಶಿ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಲು ಆರ್​​ಟಿ-ಪಿಸಿಆರ್​ ಹಾಗೂ ಕ್ವಾರಂಟೈನ್​ ಕಡ್ಡಾಯವಲ್ಲ ಎಂದು ತಿಳಿಸಿದೆ. ಆದರೆ, ರೋಗ ಲಕ್ಷಣ ಕಾಣಿಸಿಕೊಂಡಿರುವವರು 14 ದಿನಗಳ ಕಾಲ ಸ್ವಯಂ ನಿರ್ಬಂಧಕ್ಕೆ ಒಳಗಾಗಬೇಕು ಎಂದು ಸೂಚಿಸಿದೆ.

  • The @MoHFW_INDIA has issued revised guidelines for International Arrivals ✈️

    Guidelines to come in effect from 14th February.

    Follow these diligently, stay safe & strengthen India's hands in the fight against #COVID19.

    Main features include:

    📖 https://t.co/J9e8ZJw3qw (1/6)

    — Dr Mansukh Mandaviya (@mansukhmandviya) February 10, 2022 " class="align-text-top noRightClick twitterSection" data=" ">

ಕೇಂದ್ರ ಆರೋಗ್ಯ ಸಚಿವಾಲಯ ಈ ಮಾರ್ಗಸೂಚಿ ಹೊರಡಿಸಿದ್ದು, ತಾವು ಪ್ರಯಾಣ ಬೆಳೆಸಿದ 72 ಗಂಟೆಗಳ ಒಳಗೆ ಕೋವಿಡ್​ ಆರ್​​ಟಿ-ಪಿಸಿಆರ್​ ಪರೀಕ್ಷೆಯ ನೆಗೆಟಿವ್​ ವರದಿ ಅಪ್​ಲೋಡ್ ಮಾಡಬೇಕು. ಇದರ ಜೊತೆಗೆ ಕೋವಿಡ್​ ವ್ಯಾಕ್ಸಿನ್​​ನ ಎರಡು ಡೋಸ್​ ಪಡೆದುಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಸಹ ಅಪ್​ಲೋಡ್ ಮಾಡುವಂತೆ ತಿಳಿಸಿದೆ. ಇದಕ್ಕಾಗಿ ಏರ್​ ಸುವಿಧಾ ವೆಬ್​ ಪೋರ್ಟಲ್ ಓಪನ್ ಮಾಡಿದೆ.

ಇದನ್ನೂ ಓದಿರಿ: ಪ್ರೇಮಿಗಳ ದಿನಕ್ಕೆ ಕೆಲ ದಿನ ಬಾಕಿ... ಮರಕ್ಕೆ ನೇಣು ಬಿಗಿದು ಯುವ ಜೋಡಿ ಆತ್ಮಹತ್ಯೆ!

ಅಪಾಯದಲ್ಲಿರುವ ರಾಷ್ಟ್ರಗಳು ಮತ್ತು ಇತರೆ ರಾಷ್ಟ್ರಗಳ ನಡುವಿನ ಪ್ರತ್ಯೇಕತೆ ತೆಗೆದು ಹಾಕಲಾಗಿದ್ದು, ಯಾವುದೇ ದೇಶದಿಂದ ಬಂದರೂ ಕೂಡ 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು ಎಂದು ತಿಳಿಸಿದೆ. ಪ್ರಮುಖವಾಗಿ ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿ ಒಟ್ಟು 82 ದೇಶಗಳಿಂದ ಬರುವವರಿಗೆ ಈ ಆಯ್ಕೆ ಸೌಲಭ್ಯ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.