ನವದೆಹಲಿ: ದೇಶಕ್ಕೆ ಮೋಸ ಹಾಗೂ ಬಡವರ ಲೂಟಿ ಮಾಡುವವರು ಎಷ್ಟೇ ಬಲಶಾಲಿಗಳಾಗಿದ್ದರೂ ಪರವಾಗಿಲ್ಲ, ಅವರನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಕೇವಡಿಯಾದಲ್ಲಿ ನಡೆದ ಸಿಬಿಐ ಮತ್ತು ಸಿವಿಸಿ ಜಂಟಿ ಸಮಾವೇಶ ಉದ್ದೇಶಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ದ್ರೋಹ ಎಸಗುವವರನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ಅವರು ಮಾಡುವ ಭ್ರಷ್ಟಾಚಾರ ದೊಡ್ಡದಾಗಿರಲಿ, ಅಥವಾ ಸಣ್ಣದಾಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
-
My remarks at the joint conference of the CVC and CBI. https://t.co/cZnUZ0Il3M
— Narendra Modi (@narendramodi) October 20, 2021 " class="align-text-top noRightClick twitterSection" data="
">My remarks at the joint conference of the CVC and CBI. https://t.co/cZnUZ0Il3M
— Narendra Modi (@narendramodi) October 20, 2021My remarks at the joint conference of the CVC and CBI. https://t.co/cZnUZ0Il3M
— Narendra Modi (@narendramodi) October 20, 2021
ದೇಶ ಮತ್ತು ಅಲ್ಲಿನ ನಾಗರಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಬಿಐ ಹಾಗೂ ಸಿವಿಸಿಗಳಿಗೂ ಕಿವಿಮಾತು ಹೇಳಿರುವ ನಮೋ, ನೀವೂ ಈ ದೇಶದ ಮಣ್ಣು ಹಾಗೂ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೀರಿ ಎಂಬುದನ್ನ ಗಮನದಲ್ಲಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಕಳೆದ 6-7 ವರ್ಷಗಳಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ಅನೇಕ ಕಠಿಣ ನಿರ್ಧಾರಗಳಿಂದ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರಿ ಯೋಜನೆಗಳು ನೇರವಾಗಿ ಜನರಿಗೆ ಸಿಗುತ್ತಿವೆ. ಆದರೆ, ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಆಸಕ್ತಿ ಇರಲಿಲ್ಲ ಎಂದು ಆರೋಪ ಮಾಡಿದರು.
ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದ ನಮೋ
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದರು. ಕುಶಿನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರ ಇಲ್ಲಿನ ರೈತರಿಂದ ಅನೇಕ ರೀತಿಯ ಉತ್ಪನ್ನ ಖರೀದಿ ಮಾಡ್ತಿದ್ದು, ಸುಮಾರು 80,000 ಕೋಟಿ ರೂ ಅವರ ಖಾತೆಗೆ ಜಮಾ ಮಾಡಿದೆ ಎಂದರು.
ಬಡವರಿಗೋಸ್ಕರ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಯೋಜನೆ ಆರಂಭ ಮಾಡಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಜನರಿಗಾಗಿ ಹೊಸ ಬಾಗಿಲು ತೆರೆಯಲಿದೆ. ಪಿಎಂ ಸ್ವಾಮಿತ್ವ ಯೋಜನೆಯಿಂದ ಹಳ್ಳಿಯಲ್ಲಿನ ಮನೆಗಳ ಮಾಲೀಕತ್ವದ ದಾಖಲಾತಿ ಅವರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಇನ್ಫೋಸಿಸ್ ಫೌಂಡೇಶನ್ ವಿಶ್ರಮ್ ಸದನ್ ಉದ್ಘಾಟನೆ
-
PM Modi will inaugurate the Infosys Foundation Vishram Sadan at National Cancer Institute (NCI) in Jhajjar Campus of AIIMS, New Delhi on 21st October, via video conferencing: Prime Minister's Office
— ANI (@ANI) October 20, 2021 " class="align-text-top noRightClick twitterSection" data="
(file photo) pic.twitter.com/fxEMW06QCK
">PM Modi will inaugurate the Infosys Foundation Vishram Sadan at National Cancer Institute (NCI) in Jhajjar Campus of AIIMS, New Delhi on 21st October, via video conferencing: Prime Minister's Office
— ANI (@ANI) October 20, 2021
(file photo) pic.twitter.com/fxEMW06QCKPM Modi will inaugurate the Infosys Foundation Vishram Sadan at National Cancer Institute (NCI) in Jhajjar Campus of AIIMS, New Delhi on 21st October, via video conferencing: Prime Minister's Office
— ANI (@ANI) October 20, 2021
(file photo) pic.twitter.com/fxEMW06QCK
ನವದೆಹಲಿಯ ಏಮ್ಸ್ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್ಸ್ಸ್ಟಿಟ್ಯೂಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಇನ್ಫೋಸಿಸ್ ಫೌಂಡೇಶನ್ ವಿಶ್ರಮ್ ಸದನ್ ಉದ್ಘಾಟನೆ ಮಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.