ETV Bharat / bharat

ಲಸಿಕಾ ತಯಾರಕರಿಗೆ ಮುಂಗಡವಾಗಿ 4,500 ಕೋಟಿ ರೂ. ನೀಡಲಿರುವ ಕೇಂದ್ರ ಸರ್ಕಾರ - covid vaccine

ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ ಲಸಿಕೆ ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ವ್ಯಾಕ್ಸಿನ್​ ತಯಾರಿಕಾ ಕಂಪನಿಗಳಿಗೆ ಮುಂಗಡವಾಗಿ ಹಣ ನೀಡಲಿದೆ.

Govt to provide Rs 4,500 cr advance to vaccine makers
ಲಸಿಕಾ ತಯಾರಿಕರಿಗೆ ಮುಂಗಡವಾಗಿ 4,500 ಕೋಟಿ ರೂ. ನೀಡಲಿರುವ ಕೇಂದ್ರ ಸರ್ಕಾರ
author img

By

Published : Apr 20, 2021, 1:31 PM IST

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆ ಆರಂಭಿಸುವ ಮುನ್ನ ಸರಬರಾಜು ಹೆಚ್ಚಿಸಲು ಭಾರತ್ ಬಯೋಟೆಕ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಂತಹ ವ್ಯಾಕ್ಸಿನ್​ ತಯಾರಿಕಾ ಕಂಪನಿಗಳಿಗೆ ಮುಂಗಡವಾಗಿ 4,500 ಕೋಟಿ ರೂ. ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಜುಲೈಯೊಳಗಾಗಿ ಸೀರಮ್ ಕಂಪನಿಯು 20 ಕೋಟಿ ಕೋವಿಶೀಲ್ಡ್​ ಡೋಸ್‌ಗಳನ್ನು ಪೂರೈಸಲಿದ್ದು, ಭಾರತ್ ಬಯೋಟೆಕ್ ಇನ್ನೂ 9 ಕೋಟಿ ಡೋಸ್‌ಗಳನ್ನು ಸರಬರಾಜು ಮಾಡಲಿದೆ. ಈಗಾಗಲೇ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವಂತೆ ಈ ಕಂಪನಿಗಳು ಪ್ರತಿ ಡೋಸ್​ಗೆ 150 ರೂ. ದರದಲ್ಲೇ ಲಸಿಕೆ ಪೂರೈಸಲಿದೆ.

ಇದನ್ನೂ ಓದಿ: ಮೇ. 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ

ಲಸಿಕೆ ತಯಾರಕರು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲು ಬ್ಯಾಂಕ್ ಖಾತರಿ ಇಲ್ಲದೆ ಮುಂಗಡ ಪಾವತಿಗೆ ಅವಕಾಶ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಸೀರಮ್​ಗೆ 3,000 ಕೋಟಿ ರೂ. ಮತ್ತು ಭಾರತ್ ಬಯೋಟೆಕ್‌ಗೆ ಸುಮಾರು 1,500 ಕೋಟಿ ರೂ. ಮುಂಗಡ ಹಣವನ್ನು ಸರ್ಕಾರ ಭರಿಸಲಿದೆ.

ಮೇ 1 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​ ಲಸಿಜಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.