ನವದೆಹಲಿ: 2017ರಿಂದ ಇಲ್ಲಿಯವರೆಗೆ ಮಾಧ್ಯಮಗಳ ಜಾಹೀರಾತಿಗೋಸ್ಕರ ಕೇಂದ್ರ ಸರ್ಕಾರ 3,339.49 ಕೋಟಿ ರೂಪಾಯಿ ವ್ಯಯ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ 2017-18ರಿಂದ ಈ ವರ್ಷದ ಜುಲೈ 12ರವರೆಗೆ ಮುದ್ರಣ ಮಾಧ್ಯಮದ ಜಾಹೀರಾತುಗೋಸ್ಕರ ಕೇಂದ್ರ 1,756.48 ಕೋಟಿ ವ್ಯಯ ಮಾಡಿದೆ ಎಂದರು.
ಈ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗೋಸ್ಕರ 1,583.01 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಹೇಳಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗೋಸ್ಕರ ಕೇಂದ್ರ ಸರ್ಕಾರ 3,339 ಕೋಟಿ ಖರ್ಚು ಮಾಡಿರುವ ವರದಿ ನೀಡಿದ್ದಾರೆ.
ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಮೂಲಕ ಸರ್ಕಾರ ಖರ್ಚು ಮಾಡಿರುವ ಮಾಹಿತಿ ಹಂಚಿಕೊಂಡಿರುವ ಅನುರಾಗ್ ಠಾಕೂರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ ವಿದೇಶಿ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ ಸರ್ಕಾರ ಯಾವುದೇ ವ್ಯಯ ಮಾಡಿಲ್ಲ ಎಂದಿದ್ದಾರೆ.