ETV Bharat / bharat

ಪೆಟ್ರೋಲ್​​, ಡಿಸೇಲ್, ಗ್ಯಾಸ್​​​ ಸೇರಿ ಅಗತ್ಯ ವಸ್ತುಗಳ ಬೆಲೆ ಇಳಿಸಿ: ಕೇಂದ್ರಕ್ಕೆ ಸುಪ್ರಿಯಾ ಒತ್ತಾಯ - ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸುಪ್ರಿಯಾ ಒತ್ತಾಯ

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಇವುಗಳ ಮೇಲಿನ ಸುಂಕ ಕಡಿತಗೊಳಿಸಬೇಕೆಂದು ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ ಒತ್ತಾಯ ಮಾಡಿದ್ದಾರೆ.

Supriya Sule in Lok Sabha
Supriya Sule in Lok Sabha
author img

By

Published : Dec 9, 2021, 5:20 PM IST

ನವದೆಹಲಿ: ದೇಶದಲ್ಲಿ ಪೆಟ್ರೋಲ್​, ಡಿಸೇಲ್​​ ಮತ್ತು ಗ್ಯಾಸ್​​​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗ್ತಿದ್ದು, ಕೇಂದ್ರ ಸರ್ಕಾರ ಇವುಗಳ ಬೆಲೆ ಇಳಿಕೆ ಮಾಡಬೇಕೆಂದು ಎನ್​​​ಸಿಪಿ ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ. ಲೋಕಸಭೆಯ ಶೂನ್ಯವೇಳೆಯಲ್ಲಿ ಮಾತನಾಡಿದ ಸಂಸದೆ, ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕಾಗಿದ್ದು, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ, ಜನಸಾಮಾನ್ಯರು ತೊಂದರೆಗೊಳಗಾಗುವುದನ್ನ ತಪ್ಪಿಸಬೇಕು ಎಂದರು.

ಪ್ರತಿದಿನ ಪೆಟ್ರೋಲ್​, ಡಿಸೇಲ್​​, ಅಡುಗೆ ಅನಿಲ ಸೇರಿದಂತೆ ಅಡುಗೆ ಅನಿಲ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಯೋಚನೆ ಮಾಡಬೇಕಾಗಿದ್ದು, ಇವುಗಳ ಮೇಲಿನ ಬೆಲೆ ಕಡಿಮೆ ಮಾಡುವ ಮೂಲಕ ಕೆಳವರ್ಗದ ಜನರ ಮೇಲಾಗುತ್ತಿರುವ ಹೊರೆ ಕಡಿಮೆ ಮಾಡಬೇಕು ಎಂದರು.

ಇದನ್ನೂ ಓದಿರಿ: omicron ಸೋಂಕು ತಗುಲಿದ್ದ ವ್ಯಕ್ತಿ ಗುಣಮುಖ.. ಹುಟ್ಟುಹಬ್ಬದಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್​​

ಇದೇ ವೇಳೆ ಮಾತನಾಡಿರುವ ಕಾಂಗ್ರೆಸ್​​ ಸಂಸದ ಕಾರ್ತಿ ಚಿದಂಬರಂ, ಪ್ರಾಣಿಗಳ ಸುರಕ್ಷತೆ ಬಗ್ಗೆ ಪ್ರಸ್ತಾಪ ಮಾಡಿದರು. ರೈಲು ಹಳಿಗಳಲ್ಲಿ ಪ್ರತಿ ವರ್ಷ ಅನೇಕ ಆನೆಗಳು ಸಾವನ್ನಪ್ಪುತ್ತಿದ್ದು, ಈ ದುರ್ಘಟನೆ ಸಂಭವಿಸದಂತೆ ತಡೆಯಲು ಕೇಂದ್ರ ಸರ್ಕಾರ ಕಾರ್ಯಪಡೆ ರಚನೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ರೈಲು ಅಪಘಾತಗಳಲ್ಲಿ 186 ಆನೆಗಳು ಸಾವನ್ನಪ್ಪಿದ್ದು, ಇಂತಹ ಘಟನೆ ನಡೆಯದಂತೆ ಅವುಗಳ ರಕ್ಷಣೆ ಮಾಡಲು ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್​​ನಂತಹ ಹೊಸ ತಂತ್ರಜ್ಞಾನ ಜಾರಿಗೆ ತರಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.