ನವದೆಹಲಿ: ದೇಶದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಇದಕ್ಕೆ ಕಾರಣ ಹೆಚ್ಚಿದ ಮಾರುಕಟ್ಟೆ ಮತ್ತು ಕಡಿಮೆ ಪೂರೈಕೆ ಆಗಿದೆ. ಸದ್ಯ ಇದರ ಬೆನ್ನಲ್ಲೇ ಜನರು ಮತ್ತೊಂದು ಅಗತ್ಯ ಆಹಾರ ಸಾಮಗ್ರಿಯ ಬರ ಎದುರಿಸುವಂತೆ ಆಗುತ್ತಿತ್ತು. ಅಚ್ಚರಿ ಆದರೂ ಹೌದು, ಮಳೆ ಕೊರತೆ ಮತ್ತು ಕಡಿಮೆ ಬಿತ್ತನೆಯಿಂದಾಗಿ ಅಕ್ಕಿ ಇಳುವರಿ ಕಡಿಮೆಯಾಗಿದೆ. ಇದರ ಕೊರತೆ ಎದುರಾಗುವ ದಿನ ಸನ್ನಿಹಿತವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.
ಹೌದು, ದೇಶೀಯ ಅಕ್ಕಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಈ ನಿಷೇಧವು ಭಾಗಶಃ ಮಿಲ್ ಮಾಡಿದ, ಸಂಪೂರ್ಣವಾಗಿ ಮಿಲ್ ಮಾಡಿದ ಮತ್ತು ಪಾಲಿಶ್ ಮಾಡದ ಬಿಳಿ ಅಕ್ಕಿಯ ರಫ್ತಿಗೆ ಅನ್ವಯಿಸುತ್ತದೆ. ಅಧಿಸೂಚನೆ ಹೊರಡಿಸುವ ಮೊದಲೇ ಅಕ್ಕಿಯನ್ನು ಲೋಡ್ ಮಾಡಲು ಪ್ರಾರಂಭಿಸಿದ್ದರೆ ಅಂತಹ ರಫ್ತುಗಳನ್ನು ಅನುಮತಿಸಲಾಗುವುದು ಎಂದು ಡಿಜಿಎಫ್‌ಟಿ ಹೇಳಿದೆ.
ಸರ್ಕಾರವು ಅನುಮತಿಸಿದ ದೇಶಗಳಿಗೆ ಅಕ್ಕಿಯ ರಫ್ತುಗಳನ್ನು ಆಹಾರ ಭದ್ರತೆಯ ಅವಶ್ಯಕತೆಗಳ ಅಡಿ ವಿನಾಯಿತಿ ನೀಡಲಾಗುತ್ತದೆ. ಚಂಡಮಾರುತ ಪ್ರಭಾವದಿಂದ ಈ ವರ್ಷ ಮುಂಗಾರು ತಡವಾಗಿ ಪ್ರವೇಶಿಸಿದೆ. ಇದರಿಂದಾಗಿ ಹಲವೆಡೆ ಮಳೆ ವಿಳಂಬವಾಗಿದೆ. ಇನ್ನೊಂದೆಡೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಇನ್ನು ಕೆಲವೆಡೆ ಬೆಳೆ ನಾಶವಾಗಿದೆ. ಅದರಲ್ಲೂ ಉತ್ತರದಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಹಾನಿಯಾಗಿದೆ.
ಅಕ್ಕಿ ರಫ್ತಿಗೆ ಸರ್ಕಾರ ನಿಷೇಧ ಹೇರಿದ್ದು, ಅಕ್ಕಿ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಭಾವಿಸಲಾಗಿದೆ. ಈಗಾಗಲೇ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಗೆ ರೆಕ್ಕೆಪುಕ್ಕ ಬಂದಿದೆ. ಸರಕಾರ ಕೈಗೊಂಡಿರುವ ಈ ನಿರ್ಧಾರ ಬೆಲೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಈ ಹಿಂದೆಯೂ ಅಕ್ಕಿಯನ್ನು ಕೇಂದ್ರ ನಿಷೇಧಿಸಿದೆ. ಹೇರಳವಾದ ಪೂರೈಕೆಯ ಪ್ರಕರಣಗಳಲ್ಲಿ ತೆಗೆದುಹಾಕಲಾಗಿದೆ.
ನೀರಿನ ಸಂಗ್ರಹವೂ ಕಡಿಮೆ: ಮತ್ತೊಂದು ಕಡೆ ಒರಟಾದ ಧಾನ್ಯಗಳು ಮತ್ತು ಕಬ್ಬು ಉತ್ತಮವಾಗಿದೆ. ಜುಲೈ 7ಕ್ಕೆ ಅಣೆಗಟ್ಟುಗಳಲ್ಲಿ ಶೇ 39ರಷ್ಟು ನೀರಿನ ಶೇಖರಣೆ ಸಾಮರ್ಥ್ಯ ಇದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿ ಕಡಿಮೆಯಾಗಿದೆ. ಪ್ರಮುಖವಾಗಿ ದಕ್ಷಿಣ ಪ್ರದೇಶದಲ್ಲಿ ಕಡಿಮೆ ಶೇಖರಣೆಗೆ ಕಾರಣವಾಗಿದೆ.
ಭಾರತೀಯ ಹವಾಮಾನ ಇಲಾಖೆ ಅನುಸಾರ, ಜುಲೈ ಮಳೆ ಸಾಮಾನ್ಯ ಶ್ರೇಣಿಯು ಮೇಲಿನ ಭಾಗದಲ್ಲಿದೆ. ಇದು 94-106ರಷ್ಟ ದೀರ್ಘ ಅವಧಿ ಸರಾಸರಿಯಾಗಿದೆ. ಜೊತೆಗೆ ಎಲ್ ನಿನೊ ಪರಿಸ್ಥಿತಿ ಕೂಡ ಜುಲೈ ಅಂತ್ಯದಲ್ಲಿ ಅಭಿವೃದ್ಧಿಯಾಗಿದೆ. ಆದರೆ, ಇದು ಹಿಂದೂ ಮಹಾಸಾಗರದ ದ್ವಿಧ್ರುವಿಯಲ್ಲಿ ಧನಾತ್ಮಕತೆ ಮೂಲಕ ಸರಿದೂಗಿಸಬಹುದಾಗಿದೆ.
ಉತ್ತರ ಪ್ರದೇಶ, ಬಿಹಾರ, ಅಸ್ಸೋಂ, ಪಂಜಾಬ್, ಕರ್ನಾಟಕ, ತಮಿಳುನಾಡು ಜುಲೈನಲ್ಲಿ ಕಡಿಮೆ ಸಾಮಾನ್ಯ ಮಳೆಗೆ ಸಾಕ್ಷಿಯಾಗಬಹುದು ಎಂದು ಐಎಂಡಿ ತಿಳಿಸಿದೆ. ಇದು ಈ ರಾಜ್ಯದಲ್ಲಿ ಭತ್ತ ಮತ್ತು ಧಾನ್ಯಗಳ ಬಿತ್ತನೆ ಮೇಲೆ ಪರಿಣಾಮ ಬೀರಬಹುದು. ಕಳೆದೆರಡು ದಶಕಗಳಿಂದ ನೀರಾವರಿ ಸೌಲಭ್ಯಗಳು ಅಭಿವೃದ್ಧಿ ಹೊಂದಿದೆ. ಇದು ಖಾರಿಫ್ ಬೆಲೆ ಅದರಲ್ಲೂ ಭತ್ತ, ತೊಗರಿ, ಕಡಲೆ ಬೀಜಗಳ ಬೆಳೆಗಳು ಹೆಚ್ಚಿನ ಮಳೆಯನ್ನು ಬೇಡುತ್ತದೆ.
ಓದಿ: ವಿಧಾನಸಭೆಯಲ್ಲಿ ಅಕ್ಕಿ ಗದ್ದಲ: ಆಡಳಿತ ಪಕ್ಷದಿಂದ ಕೇಂದ್ರದ ವಿರುದ್ಧ ಟೀಕಾ ಪ್ರಹಾರ, ಬಿಜೆಪಿ ಸಭಾತ್ಯಾಗ