ನವದೆಹಲಿ: ಬ್ರಿಟಿಷ್ ಕಾಲದಲ್ಲಿ ದೇಶಕ್ಕೆ ನೀಡಲಾಗಿದ್ದ ಹಲವು ಹೆಸರುಗಳನ್ನು ತೆರೆಮರೆಗೆ ಸರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ದೊಡ್ಡ ಪ್ರಯೋಗಕ್ಕೆ ಕೈ ಹಾಕಲು ಮುಂದಾಗಿದೆ. ಬ್ರಿಟಿಷರ ಗುಲಾಮಗಿರಿಯನ್ನು ನೆನಪಿಸುವ 'ಇಂಡಿಯಾ' ಪದವನ್ನು ಸಂವಿಧಾನದಿಂದಲೇ ತೆಗೆದುಹಾಕುವ ಮಸೂದೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ದೇಶವು ಸ್ವಾತಂತ್ರ್ಯ 'ಅಮೃತ' ಕಾಲದಲ್ಲಿದ್ದು, ಬ್ರಿಟಿಷ್ ಆಡಳಿತದ ನೆನಪುಗಳನ್ನು ಅಳಿಸುವ ಹಲವು ಪ್ರಯತ್ನಗಳ ಮಧ್ಯೆ ಇಂಥದ್ದೊಂದು ಪ್ರಸ್ತಾಪ ಕೇಳಿಬಂದಿದೆ. ಸಂವಿಧಾನದಲ್ಲಿ ಅಡಕವಾಗಿರುವ ಇಂಡಿಯಾ ಪದವನ್ನು ತೆಗೆದು, 'ಭಾರತ'ವನ್ನು ಮಾತ್ರ ಉಳಿಸಿಕೊಳ್ಳುವ ಮಸೂದೆಯನ್ನು ತರಲು ಮುಂದಾಗಿದೆ. ಇದನ್ನು ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಸ್ತಾವನೆಗೆ ಸಂಬಂಧಿಸಿದ ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
-
VIDEO | "It appears Harnath Singh is not aware that private members bills cannot be introduced in the upcoming special session of Parliament. Seems he has not seen the notification. They are worried by our 'INDIA' alliance, whose tagline is 'judega Bharat, jeetega INDIA'," says… pic.twitter.com/Qo6wvTcPmj
— Press Trust of India (@PTI_News) September 5, 2023 " class="align-text-top noRightClick twitterSection" data="
">VIDEO | "It appears Harnath Singh is not aware that private members bills cannot be introduced in the upcoming special session of Parliament. Seems he has not seen the notification. They are worried by our 'INDIA' alliance, whose tagline is 'judega Bharat, jeetega INDIA'," says… pic.twitter.com/Qo6wvTcPmj
— Press Trust of India (@PTI_News) September 5, 2023VIDEO | "It appears Harnath Singh is not aware that private members bills cannot be introduced in the upcoming special session of Parliament. Seems he has not seen the notification. They are worried by our 'INDIA' alliance, whose tagline is 'judega Bharat, jeetega INDIA'," says… pic.twitter.com/Qo6wvTcPmj
— Press Trust of India (@PTI_News) September 5, 2023
ಆಹ್ವಾನ ಪತ್ರಿಕೆಯಲ್ಲಿ ಭಾರತದ ರಾಷ್ಟ್ರಪತಿ : ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಬರುವ ಗಣ್ಯರನ್ನು ಆಹ್ವಾನಿಸುವ ಸಂದೇಶದಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ' ಎಂದು ಬರೆದಿರುವುದು ಇದಕ್ಕೆ ಇಂಬು ನೀಡಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟ ಟೀಕಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ರಾಷ್ಟ್ರಪತಿ ಭವನದಲ್ಲಿ ಜಿ 20 ಶೃಂಗಸಭೆಗೆ ಆಗಮಿಸಿರುವ ಗಣ್ಯರಿಗೆ ಔತಣಕೂಟದ ನೀಡಲಾಗಿದ್ದು, ಅವರ ಆಹ್ವಾನ ಪತ್ರಿಕೆಯಲ್ಲಿ 'ಭಾರತದ ರಾಷ್ಟ್ರಪತಿ' ಎಂದು ಬರೆಯಲಾಗಿದೆ. ಹೀಗಾಗಿ 'ಇಂಡಿಯಾ' ಹೆಸರು ತೆಗೆದು 'ಭಾರತ' ಎಂದು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ 1 ನೇ ವಿಧಿಯು ಭಾರತ, ಅಂದರೆ ಅದು ಇಂಡಿಯಾ. ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದಿದೆ. ಇನ್ನು ಮುಂದೆ ಇದನ್ನು 'ಆಕ್ರಮಣಕ್ಕೀಡಾದ ರಾಜ್ಯಗಳ ಒಕ್ಕೂಟ' ಎಂದು ಕರೆಯಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಮ್ಮ ದೇಶದ ಹೆಸರು ಶತಮಾನಗಳಿಂದ ಭಾರತವಾಗಿದೆ. ಹೀಗಾಗಿ ಇಂಡಿಯಾ ಬದಲಿಗೆ ಭಾರತ್ ಎಂಬ ಪದವನ್ನು ಬಳಸುವಂತೆ ಜನರಿಗೆ ಮನವಿ ಮಾಡಿದ್ದರು.
ಭಾರತ ನಮ್ಮ ಸಂಸ್ಕೃತಿಯ ಪ್ರತೀಕ: ಭಾರತ ಎಂಬುದು ನಮ್ಮ ಸಂಸ್ಕೃತಿ ಪ್ರತೀಕವಾಗಿದೆ. ಇಂಡಿಯಾ ಎಂಬುದು ಬ್ರಿಟಿಷರು ನಮಗೆ ಮಾಡಿದ ಅವಮಾನದ ಪದವಾಗಿದೆ. ಹೀಗಾಗಿ ಇನ್ನು ಮುಂದೆ ನಾವು ದೇಶವನ್ನು ಭಾರತ ಎಂದು ಕರೆಯಬೇಕು ಎಂದು ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಅವರು ಕರೆ ನೀಡಿದ್ದಾರೆ.
ಎಕ್ಸ್‌ನಲ್ಲಿ(ಹಿಂದಿನ ಟ್ವಿಟರ್) ಬರೆದುಕೊಂಡಿರುವ ಅವರು, ಇಡೀ ದೇಶವು 'ಇಂಡಿಯಾ' ಬದಲಿಗೆ 'ಭಾರತ್' ಪದವನ್ನು ಬಳಸಬೇಕೆಂದು ಒತ್ತಾಯಿಸುವೆ. 'ಇಂಡಿಯಾ' ಪದವು ಬ್ರಿಟಿಷರು ನಮಗೆ ನೀಡಿದ ನಿಂದನಾತ್ಮಕ ಪದವಾಗಿದೆ. ಭಾರತ ನಮ್ಮ ಸಂಸ್ಕೃತಿಯ ಸಂಕೇತವಾಗಿದೆ. ನಮ್ಮ ಸಂವಿಧಾನದಲ್ಲಿ ಬದಲಾವಣೆಯಾಗಬೇಕು. ಅದಕ್ಕೆ 'ಭಾರತ್' ಎಂಬ ಪದವನ್ನು ಸೇರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದ್ದು, ಇದೇ ವೇಳೆ ಸರ್ಕಾರ ಸಂವಿಧಾನದಲ್ಲಿ ಇಂಡಿಯಾ ಪದದ ಬದಲಿಗೆ 'ಭಾರತ'ವನ್ನು ಅಳವಡಿಸುವ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Aditya L1: ಆದಿತ್ಯ ಎಲ್1ರ ಎರಡನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ.. ಮಾಹಿತಿ ಹಂಚಿಕೊಂಡ ಇಸ್ರೋ