ಸೂರತ್ (ಗುಜರಾತ್): ಇಲ್ಲಿನ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ ಹೊಸ ವ್ಯವಸ್ಥೆ ನಿರ್ಮಿಸಿದ್ದು, ಹಾಸಿಗೆ ಪಡೆಯಲು ಐದು ಗಂಟೆಗಳ ಕಾಲ ಕಾಯಬೇಕಾಗಿದ್ದ ರೋಗಿಗಳನ್ನು ಈಗ 20 ನಿಮಿಷಗಳಲ್ಲಿ ದಾಖಲಿಸಲಾಗುತ್ತಿದೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಏಪ್ರಿಲ್ನಲ್ಲಿ ಸುಮಾರು 2,000 ಕೋವಿಡ್-19 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದರು. ಆದರೆ, ಹೊಸ ವ್ಯವಸ್ಥೆಯು ರೋಗಿಗಳು ಕನಿಷ್ಠ ಸಮಯದೊಳಗೆ ದಾಖಲಾಗುವಂತೆ ಮಾಡಿದೆ.
"ಈ ಮೊದಲು, ಆಸ್ಪತ್ರೆಯ ಹೊರಗೆ ಸಾಲುಗಟ್ಟಿ ನಿಂತ ರೋಗಿಗಳೊಂದಿಗೆ 108 ಆ್ಯಂಬುಲೆನ್ಸ್‌ಗಳನ್ನು ನಾವು ನೋಡುತ್ತಿದ್ದೆವು. ಈಗ ನಾವು ಆಸ್ಪತ್ರೆಯ ಸಿಬ್ಬಂದಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದೇವೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಒಳಗೊಂಡ ಒಂದು ಗುಂಪು ಆಸ್ಪತ್ರೆಯೊಳಗಿನ ರೋಗಿಗಳಿಗೆ ಹಾಜರಾಗಿದ್ದರೆ. ಇನ್ನೊಂದು ಗುಂಪು ಆಸ್ಪತ್ರೆಯ ಹೊರಗೆ ಆ್ಯಂಬುಲೆನ್ಸ್‌ಗಳಿಗೆ ಕಾಯುತ್ತಿದೆ ಮತ್ತು ರೋಗಿಗಳ ಸ್ಥಿತಿಗತಿಗಳನ್ನು ನಿರ್ಣಯಿಸುತ್ತದೆ. ರೋಗಿಯ ಸ್ಥಿತಿಯನ್ನು ವಿಚಾರಿಸುವ ತಂಡವು ಆಸ್ಪತ್ರೆಯೊಳಗಿನ ವೈದ್ಯರಿಗೆ ಅಗತ್ಯವಿರುವ ಎಲ್ಲ ವಿವರಗಳನ್ನು ನೀಡುತ್ತದೆ. ಅವರು ರೋಗಿಯನ್ನು ಪ್ರವೇಶಿಸಲು ಬೇಕಾದ ಎಲ್ಲ ದಾಖಲೆಗಳನ್ನು ಪೂರ್ಣಗೊಳಿಸುತ್ತಾರೆ. ಇದು ಕಾಯುವ ಸಮಯವನ್ನು ತೀವ್ರವಾಗಿ ಕಡಿಮೆ ಮಾಡಿದೆ" ಎಂದು ಆಸ್ಪತ್ರೆಯ ಉಸ್ತುವಾರಿ ಡಾ.ಪಾರುಲ್ ವಡ್ಗಮಾ ಈ ಟಿವಿ ಭಾರತಕ್ಕೆ ವಿವರಿಸಿದ್ದಾರೆ.
ರೋಗಿಯ ಸ್ಥಿತಿಯನ್ನು ನಿರ್ಣಯಿಸಿದ ನಂತರ, ರೋಗಿಗೆ ಸಂಬಂಧಿಸಿದ ಕಾರ್ಯತಂತ್ರವನ್ನು ಮೈಕ್ರೊಪ್ಲ್ಯಾನಿಂಗ್ ಮಾಡಲಾಗುತ್ತದೆ. ರೋಗಿಗಳನ್ನು ಗಂಭೀರ ಮತ್ತು ಕಡಿಮೆ ಗಂಭೀರ ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ಹೇಳಿದರು.