ಜಲ್ನಾ(ಮಹಾರಾಷ್ಟ್ರ): ಮಹಾರಾಷ್ಟ್ರದ ಜಲ್ನಾ ಹೌಸಿಂಗ್ ಸೊಸೈಟಿಯಲ್ಲಿ 400 ಕೋಟಿ ರೂಪಾಯಿ ವಸತಿ ಹಗರಣ ನಡೆದಿರುವ ಗಂಭೀರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಗೃಹ ನಿರ್ಮಾಣ ಮಾಡಿ ಕೊಡುವ ನೀಡುವ ನೆಪದಲ್ಲಿ ಸಾವಿರಾರು ಸರ್ಕಾರಿ ಸಿಬ್ಬಂದಿಗೆ ಮೋಸ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ನಡೆದಿರುವ ಅತಿದೊಡ್ಡ ಹಗರಣ ಇದಾಗಿದೆ ಎಂದು ನೌಕರರು ಆರೋಪ ಮಾಡಿದ್ದು, ಇದರಲ್ಲಿ ಬಿಲ್ಡರ್ಗಳು ಲಾಬಿ ನಡೆಸಿದ್ದಾರೆ ತಿಳಿದು ಬಂದಿದೆ.
ಗ್ರೂಪ್ ಇನ್ಶೂರೆನ್ಸ್ ಹೌಸಿಂಗ್ ಕಂಪನಿಗಳ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ಮುಂಬೈ ಸಹಕಾರ ಮತ್ತು ಜವಳಿ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಮೂಲಕ ಜಲ್ನಾದ ನಾಸಿಕ್ ಮತ್ತು ಔರಂಗಾಬಾದ್ನಲ್ಲಿ 27 ಹೌಸಿಂಗ್ ಸೊಸೈಟಿ ಸ್ಥಾಪನೆ ಮಾಡಲಾಗಿತ್ತು. ಜಿಲ್ಲೆಯ ಒಂದು ಸಾವಿರ ನೌಕರರ ಹೆಸರಿನಲ್ಲಿ ಸಾಲ ಪಡೆದು ಸಾಲದ ಹೊರೆ ತೋರಿಸಲಾಗಿದ್ದು, ಇದರಲ್ಲಿ ಬಿಲ್ಡರ್ಗಳು ಶಾಮೀಲಾಗಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ.
ಇದನ್ನೂ ಓದಿರಿ: ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ-ಅಖಿಲೇಶ್ ಮುಖಾಮುಖಿ.. ಮುಂದೇನಾಯ್ತು?
ಮಹಾರಾಷ್ಟ್ರದಲ್ಲಿ ಅತಿದೊಡ್ಡ ಹಗರಣ: ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಂಚನೆಗೊಳಗಾಗಿರುವ ಸರ್ಕಾರಿ ಸಿಬ್ಬಂದಿ ಪಾರ್ವತಿ ಅಶೋಕ್, ನನಗೆ ಮೋಸವಾಗಿದ್ದು, ನನ್ನ ಹೆಸರಿನಲ್ಲಿ 3.35 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಮನೆ ನಿರ್ಮಿಸಿಕೊಡಲು ನನ್ನ ಕಡೆಯಿಂದ ಈಗಾಗಲೇ 2 ಲಕ್ಷ ರೂ. ಪಡೆದುಕೊಂಡಿದ್ದು, 2018ರಲ್ಲೇ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರೆಗೆ ಮನೆ ಸಿಕ್ಕಿಲ್ಲ. ಜೊತೆಗೆ ನನ್ನ ಹೆಸರಿಗೆ ನೋಂದಣಿಯಾಗಿಲ್ಲ ಎಂದು ಆರೋಪ ಮಾಡಿದ್ದಾರೆ.
ಸರ್ಕಾರಿ ಸಿಬ್ಬಂದಿ ಹೆಸರಿನಲ್ಲಿ 400 ಕೋಟಿ ರೂ. ವಂಚನೆ: ಜಿಲ್ಲೆಯಲ್ಲಿ ಬರೋಬ್ಬರಿ ಸಾವಿರ ಸರ್ಕಾರಿ ಸಿಬ್ಬಂದಿ ಹೆಸರು ಬಳಸಿಕೊಂಡು 400 ಕೋಟಿ ರೂ. ಸಾಲ ಪಡೆದುಕೊಂಡಿದ್ದಾಗಿ ಸೇವಾ ಪುಸ್ತಕದಿಂದ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಪ್ರಕರಣ ಹೊರಬರುತ್ತಿದ್ದಂತೆ ನೌಕರರ ಹೆಸರು ಬಳಕೆ ಮಾಡಿ ಮನೆ ನಿರ್ಮಿಸುತ್ತಿರುವ ಹೌಸಿಂಗ್ ಸೊಸೈಟಿ ದಾಖಲೆ ವಶಕ್ಕೆ ಪಡೆದುಕೊಳ್ಳುವಂತೆ ಸಹಾಯಕ ನೋಂದಣಾಧಿಕಾರಿ ತಹಶೀಲ್ದಾರ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರಿ ನೌಕರರ ಹೆಸರಿನಲ್ಲೇ 3.35 ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಇದರ ಮಧ್ಯೆ ನಮಗೆ ಸಾಲ ಮರುಪಾವತಿಗೋಸ್ಕರ ಇದೀಗ ನೋಟಿಸ್ ಸಹ ಜಾರಿಯಾಗಿವೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ.