ನವದೆಹಲಿ : ಬಿಜೆಪಿ ನೇತೃತ್ವದ ಸರ್ಕಾರ ಏಪ್ರಿಲ್‌ನಲ್ಲಿ 'ಟಿಕಾ ಉತ್ಸವ' ಆಚರಿಸಿತು. ಆದರೆ, ಕೋವಿಡ್-19 ಲಸಿಕೆಗಳನ್ನು ನೀಡಲು ವ್ಯವಸ್ಥೆ ಮಾಡಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ.
ಭಾರತವು ಲಸಿಕೆ ಉತ್ಪಾದಿಸುವ ಅತಿದೊಡ್ಡ ದೇಶವಾಗಿದೆ. ಬಿಜೆಪಿ ಸರ್ಕಾರವು ಏಪ್ರಿಲ್ 12ರಂದು 'ಟಿಕಾ ಉತ್ಸವ' ಆಚರಿಸಿತು. ಆದರೆ, ನಾಗರಿಕರಿಗೆ ಲಸಿಕೆಗಳನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಲಿಲ್ಲ. 30 ದಿನಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಶೇ.82ರಷ್ಟು ಕುಸಿತ ಕಂಡು ಬಂದಿದೆ.
ನಾಗರಿಕರಿಗೆ ಲಸಿಕೆ ನೀಡುವ ವಿಷಯದಲ್ಲಿ ಯುಎಸ್, ಯುಕೆ, ಟರ್ಕಿ ಮತ್ತು ಫ್ರಾನ್ಸ್‌ನಂತಹ ದೇಶಗಳು ಮುಂಚೂಣಿಯಲ್ಲಿವೆ. ಆದರೆ, ಭಾರತ ನಾಗರಿಕರಿಗೆ ಲಸಿಕೆ ನೀಡುವಲ್ಲಿ ಹಿಂದಿದೆ.
ಮೋದಿ ಜಿ ಲಸಿಕೆ ಕಾರ್ಖಾನೆಗಳಿಗೆ ಹೋಗಿ ಫೋಟೋಗಳನ್ನು ತೆಗೆಸಿಕೊಂಡು ಬಂದರು. ಆದರೆ, ಕೋವಿಡ್-19 ಲಸಿಕೆಗಳನ್ನು ನೀಡಲು ಸೂಕ್ತವಾದ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಓದಿ: ಕೊರೊನಾ ಹಿಮ್ಮೆಟ್ಟಿಸಿ, 3ನೇ ಅಲೆ ವಿರುದ್ಧದ ಸಮರಕ್ಕೆ ಮುಂಬೈ ಸಜ್ಜು.. ಬಿಎಂಸಿ ಹೆಚ್ಚುವರಿ ಆಯುಕ್ತರು ಹೀಗಂತಾರೆ..