ETV Bharat / bharat

ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದಿಸದಂತೆ ಕಾರ್ಖಾನೆಗಳಿಗೆ ಕೇಂದ್ರದ ನಿರ್ದೇಶನ; ಸಕ್ಕರೆ ಬೆಲೆ ಇಳಿಕೆ ಸಾಧ್ಯತೆ

Govt direction to sugar mills: ಕಬ್ಬಿನ ರಸದಿಂದ ಎಥೆನಾಲ್ ತಯಾರಿಸದಂತೆ ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದೆ.

Govt bars sugar mills from using sugarcane for ethanol production

author img

By ETV Bharat Karnataka Team

Published : Dec 7, 2023, 5:22 PM IST

ನವದೆಹಲಿ: 2023-2024ರಲ್ಲಿ ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ ಬಳಸದಂತೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ನಿರ್ದೇಶನ ನೀಡಿದೆ. ದೇಶದ ಸಕ್ಕರೆ ಉತ್ಪಾದನೆಯಲ್ಲಿ ಸಂಭವನೀಯ ಕುಸಿತ ತಡೆಗೆ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್​ನೊಂದಿಗೆ ಮಿಶ್ರಣ ಮಾಡುವ ಅಗತ್ಯವನ್ನು ಪೂರೈಸಲು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಬಿ-ಹೆವಿ ಮೊಲಾಸಿಸ್​ನಿಂದ ಎಥೆನಾಲ್ ಉತ್ಪಾದಿಸುವುದನ್ನು ಮುಂದುವರಿಸಬಹುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.

ಪೆಟ್ರೋಲ್​ನೊಂದಿಗೆ ಬೆರೆಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳಿಗೆ ಎಥೆನಾಲ್ ಪೂರೈಸಲಾಗುತ್ತದೆ. ಸಕ್ಕರೆ (ನಿಯಂತ್ರಣ) ಆದೇಶ 1966ರ ಕಲಂ 4 ಮತ್ತು 5ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, 2023-24 ರ ಇಎಸ್​ವೈ (ಎಥೆನಾಲ್ ಸರಬರಾಜು ವರ್ಷ) ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸ / ಸಕ್ಕರೆ ಸಿರಪ್ ಅನ್ನು ಬಳಸದಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿಗಳು) ಬಿ-ಹೆವಿ ಮೊಲಾಸಿಸ್​ನಿಂದ ತಯಾರಿಸಲಾಗುವ ಎಥೆನಾಲ್ ಪೂರೈಕೆ ಮುಂದುವರಿಯುತ್ತದೆ" ಎಂದು ಆಹಾರ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್​ನಲ್ಲಿ ಪ್ರಾರಂಭವಾದ 2023-24ರ ಋತುವಿನಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರವು ಕಬ್ಬಿನ ಕನಿಷ್ಠ ಬೆಲೆಯನ್ನು ಕ್ವಿಂಟಾಲ್​ಗೆ 10 ರೂ ಹೆಚ್ಚಿಸಿ 315 ರೂ.ಗೆ ಏರಿಕೆ ಮಾಡಿತ್ತು.

ಮಳೆ ಕೊರತೆಯಿಂದ ಈ ವರ್ಷ ಭಾರತದಲ್ಲಿ ಕಬ್ಬಿನ ಬೆಳೆ ಇಳುವರಿ ತೀರಾ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಮುಂದುವರಿದಿವೆ. ಎಥೆನಾಲ್ ಉತ್ಪಾದನೆಯನ್ನು ಸೀಮಿತಗೊಳಿಸುವುದರಿಂದ ಭಾರತದಲ್ಲಿ ಸಕ್ಕರೆ ದಾಸ್ತಾನು ಕುಸಿಯದಂತೆ ತಡೆಯಬಹುದಾಗಿದೆ.

ಭಾರತ ಸರ್ಕಾರವು ಸಕ್ಕರೆಯಿಂದ ಎಥೆನಾಲ್ ತಯಾರಿಸುವುದನ್ನು ನಿಲ್ಲಿಸಬಹುದು ಎಂಬ ಮಾಹಿತಿ ಬರಲು ಪ್ರಾರಂಭಿಸಿದ ಕೂಡಲೇ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಫ್ಯೂಚರ್ಸ್​ ದರ ನ್ಯೂಯಾರ್ಕ್ ವಿನಿಮಯ ಕೇಂದ್ರದಲ್ಲಿ ಸುಮಾರು 8 ಪ್ರತಿಶತದಷ್ಟು ಕುಸಿದಿದೆ. ಅದೇ ಸಮಯದಲ್ಲಿ ಈ ನಿರ್ಧಾರದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಾಣಿಸಲಿದೆ. ಅಲ್ಲದೆ ಬರುವ ದಿನಗಳಲ್ಲಿ ಸಕ್ಕರೆ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

(ಐಎಎನ್ಎಸ್​)

ಇದನ್ನೂ ಓದಿ: ತಮಿಳುನಾಡಿಗೆ 2ನೇ ಕಂತಿನ 450 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ರಾಜನಾಥ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.