ETV Bharat / bharat

ನಂದಿಗ್ರಾಮ ಗೆಲುವಿಗೆ ರಾಜ್ಯಪಾಲರು ನನ್ನನ್ನು ಅಭಿನಂದಿಸಿದ್ರು, ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿದೆ: ಮಮತಾ - ನಂದಿಗ್ರಾಮದಲ್ಲಿ ಮಮತಾ ಸೋಲು

ನಂದಿಗ್ರಾಮದಲ್ಲಿ ತಾವು ಸೋಲುವುದಕ್ಕೆ ಕಾರಣ ಏನು ಎಂಬುದರ ಕುರಿತು ಮಮತಾ ಬ್ಯಾನರ್ಜಿ ಮಾತನಾಡಿದ್ದು, ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿದೆ ಎಂದು ಹೇಳಿದ್ದಾರೆ.

CM Mamata Banerjee
CM Mamata Banerjee
author img

By

Published : May 3, 2021, 5:40 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಮಮತಾ ಬ್ಯಾನರ್ಜಿ, ನಂದಿಗ್ರಾಮದ ತಮ್ಮ ಶಿಷ್ಯನ ಎದುರೇ ಸೋಲು ಕಂಡಿದ್ದಾರೆ. ಆದರೆ, ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಮಮತಾ ದೂರಿದ್ದಾರೆ.

ನಂದಿಗ್ರಾಮ ಮತ ಎಣಿಕೆಯ 16 ಸುತ್ತು ಮುಕ್ತಾಯಗೊಳ್ಳುತ್ತಿದ್ದಂತೆ ಮಮತಾ ಬ್ಯಾನರ್ಜಿ 1200 ಮತಗಳಿಂದ ಗೆಲುವು ಸಾಧಿಸಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ, ಇದರ ಬೆನ್ನಲ್ಲೇ ಸುವೇಂದು ಅಧಿಕಾರಿ 1956 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾಗಿ ಚುನಾವಣೆ ಘೋಷಣೆ ಮಾಡಿತ್ತು. ಇದು ಟಿಎಂಸಿ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

  • I received an SMS from someone wherein Returning Officer of Nandigram has written to someone if he allows recounting then his life would be under threat. For four hours server was down, Governor also congratulated me. Suddenly everything changed: West Bengal CM Mamata Banerjee pic.twitter.com/zT3hPiKRLv

    — ANI (@ANI) May 3, 2021 " class="align-text-top noRightClick twitterSection" data=" ">

ನಂದಿಗ್ರಾಮ ಚುನಾವಣೆ ಫಲಿತಾಂಶ ವಿಚಾರವಾಗಿ ಈಗಾಗಲೇ ಕೋರ್ಟ್ ಮೊರೆ ಹೋಗುವುದಾಗಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಇದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಂದಿಗ್ರಾಮದಲ್ಲಿ ಮರುಮತ ಎಣಿಕೆ ಮಾಡಿದ್ರೆ ಜೀವಕ್ಕೆ ಅಪಾಯವಿದೆ. ನಾಲ್ಕು ಗಂಟೆ ಕಾಲ ಸರ್ವರ್​ ಡೌನ್​ ಆಗಿದೆ ಎಂದಿದ್ದಾರೆ. ಇಲ್ಲಿ ನಾನು ಗೆಲುವು ಸಾಧಿಸಿದ್ದಕ್ಕಾಗಿ ರಾಜ್ಯಪಾಲರು ಸಹ ನನ್ನನ್ನು ಅಭಿನಂದಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿದೆ ಎಂದಿದ್ದಾರೆ. ಇದೇ ವಿಚಾರವಾಗಿ ನಾನು ವ್ಯಕ್ತಿಯೊಬ್ಬನಿಂದ ಎಸ್​ಎಂಎಸ್​ ಸಹ ಸ್ವೀಕರಿಸಿದ್ದೇನೆ ಎಂದರು.

ಇದನ್ನೂ ಓದಿ: ಆಯತಪ್ಪಿ ಬಾವಿಗೆ ಬಿದ್ದ ಮರಿಯಾನೆ.. ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಯಾವುದೇ ರೀತಿಯ ಹಿಂಸಾಚಾರದಲ್ಲಿ ಭಾಗಿಯಾಗದಂತೆ ನಾನು ಮನವಿ ಮಾಡಿದ್ದೇನೆ. ಬಿಜೆಪಿ ಮತ್ತು ಕೇಂದ್ರ ಪಡೆ ನಮ್ಮನ್ನು ಸಾಕಷ್ಟು ಹಿಂಸಿಸಿವೆ ಎಂದು ನಮಗೆ ತಿಳಿದಿದೆ. ಆದರೆ ಶಾಂತಿ ಕಾಪಾಡಿಕೊಳ್ಳಬೇಕು. ಪ್ರಸ್ತುತ ನಾವು ಕೋವಿಡ್ ವಿರುದ್ಧ ಹೋರಾಟ ನಡೆಸಬೇಕು ಎಂದರು. ನಾನು ಓರ್ವ ಹೋರಾಟಗಾರ್ತಿ. ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ 2024ರ ಯುದ್ಧ ಗೆಲ್ಲೋಣ ಎಂದರು.

ಇದೇ ವೇಳೆ ಪತ್ರಕರ್ತರು ಸಹ ಕೊರೊನಾ ವಾರಿಯರ್ಸ್​ ಆಗಿದ್ದು, ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.