ETV Bharat / bharat

Google's virtual startup school: ಜು.11 ರಿಂದ ಪ್ರಾರಂಭ - ವರ್ಚುವಲ್ ಸ್ಟಾರ್ಟ್‌ಅಪ್ ಸ್ಕೂಲ್ 2023

ಗೂಗಲ್ ಇಂಡಿಯಾ ಈಗ ವರ್ಚುಯಲ್ ಸ್ಟಾರ್ಟ್‌ಅಪ್ ಸ್ಕೂಲ್ 2023ರ ಎರಡನೇ ಆವೃತ್ತಿಯನ್ನು ಸ್ಟಾರ್ಟ್‌ಅಪ್ ಇಂಡಿಯಾದೊಂದಿಗೆ ಪ್ರಾರಂಭಿಸಲು ಯೋಜಿಸಿದೆ, ಇದು ಅನೇಕ ಪ್ರಯೋಜನೆಗಳನ್ನು ಹೊಂದಿದೆ. ನೀವೂ ಇದರ ಸದುಪಯೋಗ ಪಡೆದುಕೊಳ್ಳಬಹುದು.

Google's virtual startup school
ವರ್ಚುವಲ್ ಸ್ಟಾರ್ಟ್‌ಅಪ್ ಸ್ಕೂಲ್ 2023
author img

By

Published : Jun 24, 2023, 12:39 PM IST

ನವದೆಹಲಿ: ಜುಲೈ 11ರಿಂದ ಸ್ಟಾರ್ಟ್‌ಅಪ್ ಇಂಡಿಯಾ ಬೆಂಬಲದೊಂದಿಗೆ ವರ್ಚುಯಲ್ ಸ್ಟಾರ್ಟ್‌ಅಪ್ ಸ್ಕೂಲ್ 2023ರ ಎರಡನೇ ಆವೃತ್ತಿಯನ್ನು ಪ್ರಾರಂಭಿಸುವುದಾಗಿ ಗೂಗಲ್ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

ಕೃತಕ ಬುದ್ಧಿಮತ್ತೆ(AI), ಉತ್ಪನ್ನ ಮತ್ತು ತಂತ್ರಜ್ಞಾನ ತಂತ್ರ, ಮಾರ್ಕೆಟಿಂಗ್ ಮತ್ತು ಜಾಗತಿಕ ಅಭಿವೃದ್ಧಿಯಲ್ಲಿ ತಜ್ಞರು ಸೇರಿದಂತೆ 30ಕ್ಕೂ ಹೆಚ್ಚು ಗೂಗಲ್​ ಮತ್ತು ಉದ್ಯಮ ತಜ್ಞರು ಸೇರಿದಂತೆ ಈ ವರ್ಷದ ಕಾರ್ಯಕ್ರಮ 8 ವಾರಗಳವರೆಗೆ ನಡೆಯಲಿದೆ ಎಂದು ಪ್ಲೇ ಪಾಲುದಾರಿಕೆಗಳ ನಿಧಿ ಮತ್ತು ನಿರ್ದೇಶಕ ಆದಿತ್ಯ ಸ್ವಾಮಿ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವಿವಿಧ ವಿಷಯಗಳ ಮೇಲೆ ಈ ಸೆಷನ್‌ಗಳಲ್ಲಿ ಭಾಗವಹಿಸಬಹುದು. ಗೂಗಲ್ ಈ ವರ್ಷ 30 ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಏರಿಕೆ ಮಾಡುವ ನಿರೀಕ್ಷೆಯಿದೆ. ಈ ಬಗ್ಗೆ ಮಾತನಾಡಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಮನ್ಮೀತ್ ಕೆ. ನಂದಾ​, ದೇಶದಲ್ಲಿ ಉದ್ಯಮಶೀಲತೆಯ ಬೆಳವಣಿಗೆಗೆ ಕೊಡುಗೆ ನೀಡುವ ಧ್ಯೇಯದೊಂದಿಗೆ, ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಗೂಗಲ್ ಈ ಕಾರ್ಯಕ್ರಮದ ಮೂಲಕ ಸ್ಟಾರ್ಟ್‌ಅಪ್‌ಗಳನ್ನು ಸಕ್ರಿಯಗೊಳಿಸಲು ಒಗ್ಗೂಡಿವೆ ಹೇಳಿದ್ದಾರೆ. ಕೇಂದ್ರ ಸರ್ಕಾರ ನಡೆಸುವ ಸ್ಟಾರ್ಟ್‌ಅಪ್ ಇಂಡಿಯಾದ ಸಹಯೋಗದೊಂದಿಗೆ ಗೂಗಲ್ ಜುಲೈ 11 ರಿಂದ ಭಾರತದಲ್ಲಿ ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಿಗೆ ತಜ್ಞರ ಮಾರ್ಗದರ್ಶನ ನೀಡುತ್ತದೆ.

ಸ್ಟಾರ್ಟ್‌ಅಪ್ ಸ್ಕೂಲ್ 2023 ಕಾರ್ಯಕ್ರಮದ ಭಾಗವಾಗಿರುವ ಕೆಲವು ಪ್ರಮುಖ ಭಾಷಣಕಾರರಲ್ಲಿ ಬಿಕ್ರಮ್ ಬೇಡಿ (ಎಂಎಸ್​, ಗೂಗಲ್ ಕ್ಲೌಡ್ ಇಂಡಿಯಾ), ನಿತಿನ್ ಕಾಮತ್ (ಸಂಸ್ಥಾಪಕ ಮತ್ತು CEO, ಝೆರೋಧಾ), ಸಂಜೀವ್ ಬರ್ನ್‌ವಾಲ್ (ಸ್ಥಾಪಕ ಮತ್ತು CTO ಮೀಶೋ), ಆಶಿಶ್ ಕಶ್ಯಪ್, ಸಂಸ್ಥಾಪಕ ಮತ್ತು CEO, Indmoney, ವಾಣಿ ಕೋಲಾ (MD, ಕಲಾರಿ ಕ್ಯಾಪಿಟಲ್), ಆಸ್ತಾ ಗ್ರೋವರ್ (VP, ಇನ್ವೆಸ್ಟ್ ಇಂಡಿಯಾ ಹೆಡ್, ಸ್ಟಾರ್ಟ್ಅಪ್ ಇಂಡಿಯಾ, DPIIT, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ), ಶುವಿ ಶ್ರೀವಾಸ್ತವ (ಪಾಲುದಾರ, ಲೈಟ್ಸ್ಪೀಡ್), ಗಾಯತ್ರಿ ಯಾದವ್ (CMO, ಪೀಕ್ XV ಪಾಲುದಾರರು ), ಅಜೇಯ್ ಗೋರ್ (ಆಪರೇಟಿಂಗ್ ಪಾರ್ಟ್ನರ್- ಟೆಕ್ನಾಲಜಿ ಪೀಕ್‌ಎಕ್ಸ್‌ವಿ ಇಂಡಿಯಾ & ಎಸ್‌ಇಎ) ಮತ್ತು ಅಫ್ಸರ್ ಅಹ್ಮದ್ (ಸಹ-ಸಂಸ್ಥಾಪಕ, ಗೇಮ್‌ಬೆರಿ ಲ್ಯಾಬ್ಸ್), ಇತರರು ಇರಲಿದ್ದಾರೆ.

ಕಂಪನಿಯ ಪ್ರಕಾರ, 600 ಕ್ಕೂ ಹೆಚ್ಚು ಪಟ್ಟಣಗಳು ​​ಮತ್ತು ನಗರಗಳಿಂದ 14,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಟಾರ್ಟ್‌ಅಪ್ ಸ್ಕೂಲ್‌ನ ಬಿಡುಗಡೆ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದವು. ಗೂಗಲ್ ಇಂಡಿಯಾ ಅಡಿ ಅನೇಕ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬಹುದಾಗಿದೆ. ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಗೂಗಲ್ ಈ ಕಾರ್ಯಕ್ರಮದ ಮೂಲಕ ಜನರಿಗೆ ವಿವಿಧ ರೀತಿಯ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತಿವೆ ಮತ್ತು ಕೋರ್ಸ್‌ಗಳನ್ನು ಸಹ ಪ್ರಾರಂಭಿಸುತ್ತಿವೆ.

10 ಬಿಲಿಯನ್ ಹೂಡಿಕೆ: ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್​ 10 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಮೋದಿ ಅವರೊಂದಿಗಿನ ಉದ್ಯಮಿಗಳ ಸಭೆ ಬಳಿಕ ಹೇಳಿದ್ದಾರೆ. ಶುಕ್ರವಾರ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಪಿಚೈ "ಐತಿಹಾಸಿಕ ಅಮೆರಿಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ಸಂತಸ ತಂದಿದೆ. ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ನಾವು ಪ್ರಧಾನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ. ಡಿಜಿಟಲ್ ಇಂಡಿಯಾ ಇತರ ದೇಶಗಳಿಗೆ ಬ್ಲೂಪ್ರಿಂಟ್ ಆಗಿ ಕಾರ್ಯನಿರ್ವಹಿಸುತ್ತದೆ" ಎಂದು ಪಿಚೈ ಇದೇ ವೇಳೆ ತಿಳಿಸಿದ್ದಾರೆ.

ಗುಜರಾತ್​ನಲ್ಲಿ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರ:"ನಾವು ಇಂದು ನಮ್ಮ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗಿಫ್ಟ್ ಸಿಟಿ(Gujarat International Finance Tec-City)ಗುಜರಾತ್‌ನಲ್ಲಿ ತೆರೆಯುವುದಾಗಿ ಘೋಷಿಸುತ್ತಿದ್ದೇವೆ ಎಂದು ಹೇಳಲು ಉತ್ಸುಕರಾಗಿದ್ದೇವೆ. ಭಾರತದಲ್ಲಿ ಗಮನಾರ್ಹವಾಗಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯು ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ವ್ಯಾಪಾರ ಕೇಂದ್ರವಾಗಿದೆ. ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಧಾನಿಯವರ ಹೊಂದಿರುವ ದೃಷ್ಟಿಕೋನ ಶ್ಲಾಘನೀಯ. ಈಗ ನಾನು ಅದನ್ನು ಇತರ ದೇಶಗಳು ಅನುಸರಿಸಬಹುದಾದ ನೀಲನಕ್ಷೆಯಾಗಿ ನೋಡುತ್ತೇನೆ" ಎಂದು ಪಿಚೈ ಹೇಳಿದರು.

ಇದನ್ನೂ ಓದಿ: ಭಾರತದ ಡಿಜಿಟಲೀಕರಣದಲ್ಲಿ 'Google' 10 ಬಿಲಿಯನ್ ಹೂಡಿಕೆ ಮಾಡಲಿದೆ: ಸಿಇಒ ಸುಂದರ್ ಪಿಚೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.