ಹೈದರಾಬಾದ್: ಭಾರತದ ಸುಪ್ರಸಿದ್ಧ ಗಾಯಕ, ಅಸ್ಸಾಂ ರಾಜ್ಯದ ಹೆಸರಾಂತ ಸಂಗೀತ ಮಾಂತ್ರಿಕ ಹಾಗು ಚಿತ್ರ ನಿರ್ಮಾಪಕ ದಿ. ಭೂಪೆನ್ ಹಜಾರಿಕಾ ಅವರ 96ನೇ ಜನ್ಮ ಜಯಂತಿಯನ್ನು ಇಂದು ಜಾಗತಿಕ ಟೆಕ್ ದೈತ್ಯ ಸಂಸ್ಥೆ ಗೂಗಲ್ ವಿಶೇಷ ಡೂಡಲ್‌ನೊಂದಿಗ ಸ್ಮರಿಸಿ, ಗೌರವಿಸುತ್ತಿದೆ. ಅಸ್ಸಾಮಿ ಸಿನೆಮಾ ಮತ್ತು ಜಾನಪದ ಸಂಗೀತ ಕ್ಷೇತ್ರಕ್ಕೆ ಹಜಾರಿಕಾ ನೀಡಿರುವ ವಿಶೇಷ ಕೊಡುಗೆಗಳನ್ನು ಕಲಾತ್ಮಕವಾಗಿ ಗೂಗಲ್ ಪ್ರದರ್ಶಿಸಿದೆ. ಈ ಡೂಡಲ್ ಅನ್ನು ಮುಂಬೈ ಮೂಲದ ಅತಿಥಿ ಕಲಾವಿದ ರುತುರಾಜ ಮಾಲಿ ಆಕರ್ಷಕವಾಗಿ ರಚಿಸಿದ್ದಾರೆ.
-
Did you know Bhupen Hazarika was an Assamese-Indian child prodigy who began singing and composing music for film studios at just 12 years old!?
— Google Doodles (@GoogleDoodles) September 7, 2022 " class="align-text-top noRightClick twitterSection" data="
Learn more about his inspiring life and legacy → https://t.co/mF5WRwB4K4 #GoogleDoodle pic.twitter.com/kysOqxZD6w
">Did you know Bhupen Hazarika was an Assamese-Indian child prodigy who began singing and composing music for film studios at just 12 years old!?
— Google Doodles (@GoogleDoodles) September 7, 2022
Learn more about his inspiring life and legacy → https://t.co/mF5WRwB4K4 #GoogleDoodle pic.twitter.com/kysOqxZD6wDid you know Bhupen Hazarika was an Assamese-Indian child prodigy who began singing and composing music for film studios at just 12 years old!?
— Google Doodles (@GoogleDoodles) September 7, 2022
Learn more about his inspiring life and legacy → https://t.co/mF5WRwB4K4 #GoogleDoodle pic.twitter.com/kysOqxZD6w
ಭೂಪೆನ್ ಹಜಾರಿಕಾ ಕೊಡುಗೆಗಳೇನು?: ಭೂಪೆನ್ ಹಜಾರಿಕಾ ಅಸ್ಸಾಮಿ ಸಂಗೀತ ಮಾಂತ್ರಿಕ ಮಾತ್ರವಲ್ಲ, ಈಶಾನ್ಯ ರಾಜ್ಯಗಳ ಜಾನಪದ ಕಲಾ ಕ್ಷೇತ್ರಕ್ಕೆ ಹಾಗು ಸಾಮಾಜಿಕ ಬದಲಾವಣೆಗೆ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದ ಕೊಡುಗೆಗಳನ್ನು ಕೊಟ್ಟವರು. ನೂರಾರು ಸಿನೆಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಇಂದು ತನ್ನ ಡೂಡಲ್‌ನಲ್ಲಿ ಹಜಾರಿಕಾ ಅವರು ಹಾರ್ಮೋನಿಯಂ ಹಿಡಿದು ನುಡಿಸುವಂತೆ ತೋರಿಸಿದೆ. ಹಜಾರಿಕಾ ಅವರು ಈಶಾನ್ಯ ಭಾಗದ ಮುಂಚೂಣಿ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರದ ಸುಧಾರಕರೂ ಹೌದು. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇವರ ಸೃಷ್ಟಿ, ಸಂಯೋಜನೆಗಳು ಸಮಾಜದ ಎಲ್ಲ ಸ್ತರದ ಜನರನ್ನು ಒಂದುಗೂಡಿಸುವಲ್ಲಿಯೂ ಯಶಸ್ಸು ಕಂಡಿವೆ.
ಇದನ್ನೂ ಓದಿ: ಮಲಯಾಳಂ ಕವಿತೆಗಳ ಅಜ್ಜಿ ಖ್ಯಾತಿಯ ಬಾಲಾಮಣಿ ಅಮ್ಮನಿಗೆ Google Doodle ಗೌರವ
ಹಜಾರಿಕಾ ಸೆಪ್ಟೆಂಬರ್ 8, 1926 ರಲ್ಲಿ ಅಸ್ಸಾಂ ಸಾದಿಯಾ ಎಂಬಲ್ಲಿ ನೀಲಕಂಠ ಮತ್ತು ಶಾಂತಿಪ್ರಿಯ ಹಜಾರಿಕಾ ದಂಪತಿಗೆ ಮಗನಾಗಿ ಜನಿಸುತ್ತಾರೆ. ಇವರ ತಂದೆ ಮೂಲತ: ಅಸ್ಸಾಂನ ಶಿವಸಾಗರ ಜಿಲ್ಲೆಯ ನಜಿರಾ ಪಟ್ಟಣದವರು. ತಾಯ್ನಾಡು ಅಸ್ಸಾಂ. ಸಾಕಷ್ಟು ಬುಡಕಟ್ಟು ಪಂಗಡಗಳು, ದೇಶೀಯ ಗುಂಪುಗಳಾದ ಬೋಡೋ, ಕರ್ಬಿ, ಮಿಸಿಂಗ್ ಹಾಗು ಸೊನೊವಾಲ್-ಕಚಾರಿಸ್ ಮುಂತಾದವುಗಳಿಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದವರು ಇವರು ಎನ್ನುವುದು ಕೂಡಾ ವಿಶೇಷವಾದ ಸಂಗತಿ.
ಹಜಾರಿಕಾ ತಮ್ಮ ಬಾಲ್ಯದಲ್ಲಿ ರಾಜ್ಯದಲ್ಲಿ ಹರಿಯುವ ಬೃಹತ್ ನದಿ ಬ್ರಹ್ಮಪುತ್ರ ಕುರಿತಾದ ಜಾನಪದ ಸಂಗೀತ, ಕಥೆಗಳನ್ನು ಕೇಳಿ, ಆನಂದಿಸಿಯೇ ಬೆಳೆದವರು. ಹೀಗಾಗಿ ಈ ನದಿಯ ಛಾಯೆಯನ್ನೂ ಕೂಡಾ ನಾವು ಅವರ ಕಲಾ ಕೆತ್ತನೆಗಳಲ್ಲಿ ಕಾಣಬಹುದು.
ಸಾಧಕನಿಗೆ ಸಂದ ಗೌರವಗಳು ಹಲವು..: ಸುಮಾರು 6 ದಶಕಗಳ ಕಾಲ ಸಂಗೀತ ಹಾಗು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಅಗಾಧ ಕೊಡುಗೆಗಳಿಗಾಗಿ ಹಜಾರಿಕಾ ಅವರನ್ನು ಹತ್ತು ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ, ಪದ್ಮಶ್ರಿ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಈ ಸಾಧಕನಿಗೆ ಲಭಿಸಿವೆ. 2019 ರಲ್ಲಿ ಭಾರತ ಸರ್ಕಾರ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ವನ್ನೂ ನೀಡಿ ಪುರಸ್ಕರಿಸಿತು.