ನವದೆಹಲಿ: ಭಾರತದ 100ಕ್ಕೂ ಹೆಚ್ಚು ಭಾಷೆಗಳಿಗೆ ಧ್ವನಿ ಮತ್ತು ಪಠ್ಯದ ಹುಡುಕಾಟಕ್ಕೆ ಗೂಗಲ್ ಮುಂದಾಗಿದೆ. ಇದಕ್ಕಾಗಿ ದೇಶದಲ್ಲಿನ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು 75 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಭಾರತಕ್ಕೆ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ದೊಡ್ಡು ರಫ್ತು ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ ಎಂದರು
ಭಾರತವು ದೊಡ್ಡ ರಫ್ತು ಆರ್ಥಿಕತೆ ದೇಶವಾಗಿದ್ದು, ನಾಗರಿಕರನ್ನು ರಕ್ಷಿಸುವ ಮತ್ತು ಕಂಪನಿಗಳು ಅದರ ಚೌಕಟ್ಟಿನೊಂದಿಗೆ ಹೊಸತನ ಸೃಷ್ಟಿಸಲು ಅನುವು ನೀಡುವ ಸಮತೋಲನವನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಧಾನಿ ಭೇಟಿಯಾಗುವ ಮುನ್ನ ಅವರು, ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಗೂಗಲ್ ಫಾರ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಮಾತನಾಡಿದರು.
-
Thank you for a great meeting today PM @narendramodi. Inspiring to see the rapid pace of technological change under your leadership. Look forward to continuing our strong partnership and supporting India's G20 presidency to advance an open, connected internet that works for all. pic.twitter.com/eEOHvGwbqO
— Sundar Pichai (@sundarpichai) December 19, 2022 " class="align-text-top noRightClick twitterSection" data="
">Thank you for a great meeting today PM @narendramodi. Inspiring to see the rapid pace of technological change under your leadership. Look forward to continuing our strong partnership and supporting India's G20 presidency to advance an open, connected internet that works for all. pic.twitter.com/eEOHvGwbqO
— Sundar Pichai (@sundarpichai) December 19, 2022Thank you for a great meeting today PM @narendramodi. Inspiring to see the rapid pace of technological change under your leadership. Look forward to continuing our strong partnership and supporting India's G20 presidency to advance an open, connected internet that works for all. pic.twitter.com/eEOHvGwbqO
— Sundar Pichai (@sundarpichai) December 19, 2022
ಪ್ರಧಾನಿ ಕಾರ್ಯಕ್ಕೆ ಶ್ಲಾಘನೆ: "ಪ್ರಧಾನಿ ಜೊತೆಗಿನ ಭೇಟಿಗೆ ಧನ್ಯವಾದಗಳು. ನಿಮ್ಮ ನಾಯಕತ್ವದ ಅಡಿ ತಂತ್ರಜ್ಞಾನ ವೇಗಗೊಳ್ಳುತ್ತಿದೆ. ಎಲ್ಲರಿಗೂ ಕೆಲಸ ಮಾಡುವ ಮುಕ್ತ, ಸಂಪರ್ಕಿತ ಇಂಟರ್ನೆಟ್ ಅನ್ನು ಮುನ್ನಡೆಸಲು ನಮ್ಮ ಬಲವಾದ ಪಾಲುದಾರಿಕೆಯನ್ನು ಮುಂದುವರಿಸಲು ಹಾಗೂ ಭಾರತದ G20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಲು ಎದುರು ನೋಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಭೇಟಿ ವೇಳೆ ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂದು ಪಿಚೈ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಣ್ಣ ಉದ್ಯಮ ಮತ್ತು ಸ್ಮಾರ್ಟ್ ಅಪ್ಗಳಿಗೆ ಬೆಂಬಲ, ಸೈಬರ್ ಸೈಕ್ಯೂರಿಟಿಗೆ ಹೂಡಿಕೆ, ಶಿಕ್ಷಣ ಮತ್ತು ಕೌಶಲ್ಯದ ತರಬೇತಿ ಒದಗಿಸುವ ವಿಷಯದ ಕುರಿತು ಅವರು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಕೃಷಿ, ಆರೋಗ್ಯ ಮತ್ತು ಇತರೆ ಪ್ರಮುಖ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕೂಡ ಆದ್ಯತೆ ವಿಷಯವಾಗಿದೆ" ಎನ್ನಲಾಗಿದೆ.
ಮಹಿಳಾ ಸ್ಟಾರ್ಟ್ ಅಪ್ಗಳಿಗೆ ಬೆಂಬಲ: ಪ್ರಧಾನ ಮಂತ್ರಿ ಅವರು ಡಿಜಿಟಲ್ ಇಂಡಿಯಾ ದೃಷ್ಟಿಕೋನದಿಂದ ಭಾರತದೆಲ್ಲೆಡೆ ಪ್ರಗತಿಯನ್ನು ನಾವು ಕಾಣುತ್ತಿದ್ದೇವೆ. ಈ ಅನುಭವಗಳನ್ನು ಭಾರತ ಆತಿಥ್ಯದ 2023ರ ಜಿ 20 ಶೃಂಗಸಭೆಯಲ್ಲಿ ಪ್ರಪಂಚದ ಜೊತೆ ಹಂಚಿಕೊಳ್ಳಲಿದೆ. ಇನ್ನು ಗೂಗಲ್ ಫಾರ್ ಇಂಡಿಯಾ 2022 ಕುರಿತು ಮಾತನಾಡಿದ ಅವರು, ಇಂಡಿಯಾ ಡಿಜಿಟೈಸೈಶನ್ ಫಂಡ್(ಐಡಿಎಫ್) ಭಾರತದ ಸ್ಮಾರ್ಟ್ಅಪ್ಗಳ ಮೇಲೆ ಗಮನ ಹರಿಸುತ್ತಿದೆ. ನಾಲ್ಕನೇ ಒಂದು ಭಾಗದ ಅಂದರೆ 300 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಗಳ ಮೇಲೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.
ಸಾಗರೋತ್ತರ ಮಾರುಕಟ್ಟೆ ವಿಸ್ತರಣೆ: 2020ರ ಜುಲೈನಲ್ಲಿ ಗೂಗಲ್ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿತು. ಸಾಗರೋತ್ತರ ಮಾರುಕಟ್ಟೆಯಲ್ಲಿ ಡಿಜಿಟಲ್ ಸೇವೆಗಳ ಅಳವಡಿಕೆಯನ್ನು ವೇಗಗೊಳಿಸಲು ಗೂಗಲ್ ಸಹಾಯ ಮಾಡುವುದಾಗಿ ತಿಳಿಸಿತ್ತು. ತಂತ್ರಜ್ಞಾನವು ದೊಡ್ಡ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಪಂಚದಾದ್ಯಂತದ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತಿದೆ. ಇದು ಜವಾಬ್ದಾರಿಯುತ ಮತ್ತು ಸಮತೋಲಿತ ನಿಯಂತ್ರಣವನ್ನು ರೂಪಿಸಲು ಸಹಾಯ ಮಾಡುತ್ತಿದೆ ಎಂದು ಪಿಚೈ ತಿಳಿಸಿದ್ದರು.
ಸ್ಟಾರ್ಟ್ಅಪ್ಗಳಿಗೆ ಇದು ಸಕಾಲ: ಮೂರುವರೆ ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಿಚೈ, ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಭೇಟಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ಆಶ್ವಿನ್ ವೈಷ್ಣವ್ ಅವರ ಜೊತೆ ಜಂಟಿ ಸಭೆ ನಡೆಸಿದರು. ಭಾರತೀಯ ಸ್ಟಾರ್ಟ್ಅಪ್ಗಳ ವ್ಯವಸ್ಥೆ ಸುಧಾರಣೆ ಕಂಡಿದೆ. ಗ್ಲಾಸ್ನಂತಹ ಭಾರತೀಯ ಸ್ಟಾರ್ಟ್ಅಪ್ಗಳು ಪ್ರಪಂಚದೆಲ್ಲಡೆ ಗಮನ ಸೆಳೆದಿದೆ. ಸ್ಥೂಲ ಆರ್ಥಿಕತೆ ಅಡಿ ನಾವು ಕೆಲಸ ಮಾಡುತ್ತಿದ್ದರೂ, ಸ್ಟಾರ್ಟ್ ಅಪ್ಗಳಿಗೆ ಈಗ ಇರುವುದಕ್ಕಿಂತ ಉತ್ತಮ ಮತ್ತೆ ಸಿಗುವುದಿಲ್ಲ
ಡಿಜಿಟಲ್ ಭವಿಷ್ಯಕ್ಕೆ ಸಹಾಯ: ನಮ್ಮ 10 ಶತಕೋಟಿ ಅಮೆರಿಕನ್ ಡಾಲರ್, 10 ವರ್ಷದ ಭಾರತ ಡಿಜಿಟಲೈಸೇಶನ್ ಫಂಡ್ನಿಂದ ಪ್ರಗತಿಯನ್ನು ವೀಕ್ಷಿಸಲು ಮತ್ತು ಹೊಸ ಮಾರ್ಗಗಳನ್ನು ಹಂಚಿಕೊಳ್ಳಲು ನಾನು ಇಲ್ಲಿದ್ದೇನೆ. ಭಾರತದ ಡಿಜಿಟಲ್ ಭವಿಷ್ಯವನ್ನು ಮುನ್ನಡೆಸಲು ನಾವು ಸಹಾಯ ಮಾಡುತ್ತಿದ್ದೇವೆ. ಗೂಗಲ್ ಐಡಿಎಫ್ ಮೂಲಕ, ಕಂಪನಿಯು ಜಿಯೋದಲ್ಲಿ 7.73 ಶೇಕಡಾ ಪಾಲನ್ನು ಮತ್ತು ಭಾರ್ತಿ ಏರ್‌ಟೆಲ್‌ನಲ್ಲಿ 1.2 ಶೇಕಡಾ ಪಾಲನ್ನು ಖರೀದಿಸಿದೆ ಎಂದು ಮಾಹಿತಿ ನೀಡಿದರು
ಕಾರ್ಯಕ್ರಮದ ಅಂತ್ಯದಲ್ಲಿ ಗೂಗಲ್ ರಾಷ್ಟ್ರೀಯ ಇಗವರ್ನೆನ್ಸ್ ಡಿವಿಜನ್ ಜೊತೆ ಸಂಯೋಜನೆಯನ್ನು ತಿಳಿಸಿದರು. ಈ ಮೂಲಕ ಜನರು ತಮ್ಮ ಅಧಿಕೃತ ಡಿಜಿಟಲ್ ದಾಖಲೆಯನ್ನು ಗೂಗಲ್ ಆ್ಯಪ್ ಮೂಲಕ ಪಡೆಯಬಹುದಾಗಿದೆ ಎಂದರು. ಶೀಘ್ರದಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ನ ಭಾಗವಾಗಿ ಡಿಜಿಲಾಕರ್ ಬಲಿದೆ ಎಂದರು.
ಇದನ್ನೂ ಓದಿ: ಮೆಸ್ಸಿ ಕನಸು ನನಸು: ಗೂಗಲ್ನ ಸರ್ಚ್ ಎಂಜಿನ್ ಟ್ರಾಫಿಕ್ನಲ್ಲಿ ದಾಖಲೆ ಸೃಷ್ಟಿಸಿದ FIFAWorldCup