ETV Bharat / bharat

Google Doodle: ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್​ಗೆ ಗೂಗಲ್​ ಡೂಡಲ್​ ಗೌರವ.. - ಫಾತಿಮಾ ಶೇಖ್​ಗೆ ಗೂಗಲ್​ ಡೂಡಲ್​ ಗೌರವ

1848ರಲ್ಲೇ ಸ್ಥಳೀಯ ಗ್ರಂಥಾಲಯವೊಂದನ್ನು ಸ್ಥಾಪಿಸಿ, ದಲಿತ ಮತ್ತು ಮುಸ್ಲಿಂ ಮಹಿಳೆಯರು-ಮಕ್ಕಳಿಗೆ ಶಿಕ್ಷಣ ಕಲಿಸಿದ ಶಿಕ್ಷಣತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್ ಅವರಿಗೆ ಡೂಡಲ್​ ಮೂಲಕ ಗೂಗಲ್​ ಗೌರವ ಸಲ್ಲಿಸಿದೆ.

Google Doodle
ಫಾತಿಮಾ ಶೇಖ್​ಗೆ ಗೂಗಲ್​ ಡೂಡಲ್​ ಗೌರವ
author img

By

Published : Jan 9, 2022, 5:43 PM IST

ನವದೆಹಲಿ: ಮುಸ್ಲಿಂ ಸಮುದಾಯದಲ್ಲೇ ಭಾರತದ ಮೊದಲ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್ ಅವರಿಗೆ ಡೂಡಲ್​ ಮೂಲಕ ಗೂಗಲ್​ ಗೌರವ ಸಲ್ಲಿಸಿದೆ.

ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಜೊತೆ ಸೇರಿಕೊಂಡು ಫಾತಿಮಾ ಶೇಖ್ ಅವರು 1848ರಲ್ಲೇ ಸ್ಥಳೀಯ ಗ್ರಂಥಾಲಯವೊಂದನ್ನು ಸ್ಥಾಪಿಸಿದ್ದರು. ಇದೇ ಗ್ರಂಥಾಲಯ ಬಾಲಕಿಯರಿಗಾಗಿ ಇದ್ದ ಭಾರತದ ಮೊದಲ ಶಾಲೆಗಳಲ್ಲಿ ಒಂದಾಗಿದೆ.

1831ರಲ್ಲಿ ಪುಣೆಯಲ್ಲಿ ಜನಿಸಿದ ಫಾತಿಮಾ ಶೇಖ್ ಅವರು ತನ್ನ ಸಹೋದರ ಉಸ್ಮಾನ್‌ನೊಂದಿಗೆ ವಾಸಿಸುತ್ತಿದ್ದರು. ಕೆಳವರ್ಗದ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಮನೆಯಿಂದ ಹೊರಹಾಕಿದಾಗ ಫಾತಿಮಾ ಶೇಖ್ ಕುಟುಂಬ ಅವರಿಗೆ ಆಶ್ರಯ ನೀಡಿತ್ತು.

ಇದನ್ನೂ ಓದಿ: ಗುರು ಗೋವಿಂದ ಸಿಂಗ್​ ಜಯಂತಿಗೆ ಶುಭ ಕೋರಿದ ಮೋದಿ, ರಾಜನಾಥ್​ ಸಿಂಗ್​

ಬಳಿಕ ಮೂವರೂ ಸೇರಿಕಕೊಂಡು ಗ್ರಂಥಾಲಯ ಸ್ಥಾಪಿಸಿ, ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣದಿಂದ ವಂಚಿತರಾದ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ವಿದ್ಯೆ ಕಲಿಸಿದರು. ಭಾರತ ಸರ್ಕಾರವು 2014 ರಲ್ಲಿ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಮೇಲೆ ಉರ್ದು ಪಠ್ಯಪುಸ್ತಕಗಳಲ್ಲಿ ಮುದ್ರಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.