ಒಡಿಶಾ/ರೂರ್ಕೆಲಾ: ಗೂಡ್ಸ್ ರೈಲೊಂದು ನಿಯಂತ್ರಣ ತಪ್ಪಿ ಸುಮಾರು 24 ಕಿ.ಮೀ ರಿವರ್ಸ್ ಚಲಿಸಿ ಅಪಘಾತಕ್ಕೀಡಾಗಿದೆ. ಈ ಘಟನೆ ಒಡಿಶಾದ ಸುಂದರ್ಗಢ ಜಿಲ್ಲೆಯ ಬಿಮಲ್ಗಢ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಘಟನೆಯಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸರಕು ರೈಲಿನ ಒಟ್ಟು ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಕಬ್ಬಿಣದ ಅದಿರುಗಳನ್ನು ಹೊತ್ತು ಸಾಗಿದ ರೈಲು ಬಾರಾಸುನಾದಿಂದ ರೂರ್ಕೆಲಾ ಕಡೆಗೆ ಹೋಗುತ್ತಿತ್ತು. ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ರೈಲು ಚಾಲಕನ ನಿಯಂತ್ರಣ ತಪ್ಪಿ 24 ಕಿ.ಮೀ. ಹಿಮ್ಮುಖವಾಗಿ ಚಲಿಸಿದೆ. ಬಿಮಲಗಢ ರೈಲ್ವೆ ಸ್ಟೇಷನ್ ಬಳಿ ಚಾಲಕ ಬ್ರೇಕ್ ಹಾಕಿದಾಗ, ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿ ಒಂದರ ಮೇಲೊಂದು ಬಿದ್ದಿವೆ. ಈ ವೇಳೆ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಅಪಘಾತವು ಯಾವ ಸಂದರ್ಭಗಳಲ್ಲಿ ಸಂಭವಿಸಿದೆ ಮತ್ತು ಯಾರು ಹೊಣೆ ಎಂಬುದನ್ನು ಕಂಡುಹಿಡಿಯಲು ಶೀಘ್ರ ತನಿಖೆ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಜಾರ್ಖಂಡ್ನಲ್ಲಿ ಬಾವಿಗೆ ಬಿದ್ದ ಮರಿ ಆನೆ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ